Advertisement

Mudigere: ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ

05:50 PM Mar 26, 2024 | Team Udayavani |

ಮೂಡಿಗೆರೆ: ಅಕ್ರಮವಾಗಿ ಪರವಾನಗಿ ಇಲ್ಲದ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯಲ್ಲಿ ನಡೆದಿದೆ.

Advertisement

ಬಣಕಲ್ ಹೋಬಳಿಯ ಬಸನಿ ಹೆಗ್ಗುಡ್ಲು ಗ್ರಾಮದ ಲೋಕೇಶ್ (41ವ) ಬಂಧಿತ ವ್ಯಕ್ತಿ.

ಲೋಕೇಶ್ ಎಂಬವರು ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ನಾಡ ಬಂದೂಕು ಮತ್ತು ಚರೆಯನ್ನು ಇಟ್ಟುಕೊಂಡಿದ್ದ ಖಚಿತ ಮಾಹಿತಿ ಪಡೆದ ಬಣಕಲ್ ಪೊಲೀಸರು ದಾಳಿ ನಡೆಸಿ ಒಂಟಿ ನಳಿಕೆಯ ನಾಡ ಬಂದೂಕು ಹಾಗೂ 12 ಚರೆಯನ್ನು ವಶಪಡಿಸಿಕೊಂಡು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next