Advertisement

ಲೈಸೆನ್ಸ್‌, ವಿಮೆ ಇಲ್ಲದೆ 70 ವರ್ಷದಿಂದ ಕಾರು ಚಲಾಯಿಸುತ್ತಿದ್ದ!

09:37 PM Jan 29, 2022 | Team Udayavani |

ಲಂಡನ್‌: ಲೈಸೆನ್ಸ್‌ ಇಲ್ಲದೆ ಗಾಡಿ ಚಲಾಯಿಸಿದರೆ ಪೊಲೀಸರು ದಂಡದ ಮೊತ್ತದಿಂದಲೇ ನಿಮ್ಮನ್ನು ಬೆಚ್ಚಿ ಬೀಳಿಸಿಬಿಡುತ್ತಾರೆ. ಆದರೆ ಬ್ರಿಟನ್‌ನ ಪೊಲೀಸರು ಇತ್ತೀಚೆಗೆ ಒಬ್ಬ ವೃದ್ಧನ ಗಾಡಿ ನಿಲ್ಲಿಸಿ, ದಾಖಲೆ ಪರಿಶೀಲಿಸಿ ತಾವೇ ದಂಗಾಗಿದ್ದಾರೆ!

Advertisement

1938ರಲ್ಲಿ ಜನಿಸಿರುವ ಆ ವೃದ್ಧ, ತಮ್ಮ 12ನೇ ವಯಸ್ಸಿನಿಂದಲೇ ಕಾರು ಓಡಿಸುತ್ತಿದ್ದಾರಂತೆ. ಆದರೆ ಇಂದಿಗೂ ಅವರ ಬಳಿ ಪರವಾನಗಿಯಾಗಲೀ, ಇನ್ಶೂರೆನ್ಸ್‌ ಆಗಲಿ ಇಲ್ಲ. ಕಳೆದ 70 ವರ್ಷಗಳಿಂದಲೇ ಯಾವೊಬ್ಬ ಪೊಲೀಸ್‌ ಅಧಿಕಾರಿಯೂ ಅವರನ್ನು ತಡೆದೇ ಇಲ್ಲವಂತೆ. ಅದೃಷ್ಟವಶಾತ್‌ ಅವರು ಯಾವ ಅಪಘಾತಕ್ಕೂ ಒಳಗಾಗದ ಹಿನ್ನೆಲೆ ಅವರಿಗೆ ಎಲ್ಲಿಯೂ ಲೈಸೆನ್ಸ್‌ ಅಥವಾ ಗಾಡಿಯ ಇನ್ಶೂರೆನ್ಸ್‌ ಅವಶ್ಯಕತೆಯೇ ಬಂದಿಲ್ಲವಂತೆ!

ಇದನ್ನೂ ಓದಿ:ರಾಹುಲ್‌ ಗಾಂಧಿ ವಿರುದ್ಧ ಕೇಸು: ಫೆ.5ರಿಂದ ದಿನವಹಿ ವಿಚಾರಣೆ

ಈ ವಿಚಾರವನ್ನು ಅಲ್ಲಿನ ಪೊಲೀಸರೇ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, “ಈಗ ಆಟೋಮೆಟಿಕ್‌ ನಂಬರ್‌ ಪ್ಲೇಟ್‌ ಗುರುತಿಸುವ ಕ್ಯಾಮೆರಾ ಎಲ್ಲೆಡೆ ಅಳವಡಿಸಲಾಗಿದೆ. ಈ ರೀತಿ ಮಾಡಿದರೆ ದಂಡ ತೆರಬೇಕಾಗುತ್ತದೆ’ ಎಂದು ಜನರಿಗೆ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next