Advertisement
ಕಳೆದ ಹತ್ತು ವರ್ಷದಿಂದ ಕುವೈತ್ ನಲ್ಲಿದ್ದ ವಿಜಯಕುಮಾರ ಪ್ರಸನ್ನ (41) ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದು, ಕಳೆದೊಂದು ವರ್ಷ ದ ಹಿಂದೆ ಸರಸಂಬಾಕ್ಕೆ ಬಂದು ಹೋಗಿದ್ದರು.ಮೃತರಿಗೆ ಮೂವರು ಮಕ್ಕಳಿದ್ದು, ಮಡದಿ ತಂದೆ- ತಾಯಿಗೆ ಸಾವನ್ನಪ್ಪಿದ ಸುದ್ದಿ ಇನ್ನೂ ತಿಳಿದಿಲ್ಲ
Related Articles
Advertisement
ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕುಟುಂಬದವರೊಂದಿಗೆ ಇದ್ದು ತಾವು ಕೂಡಾ ಈ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮೃತರ ಪಾರ್ಥಿವ ಶರೀರವನ್ನು ಕೊಚ್ಚಿಗೆ ತರಿಸುವ ವ್ಯವಸ್ಥೆ ಮಾಡಲಾಗಿದೆ. ಪಾರ್ಥಿವ ಶರೀರವನ್ನು ಕೊಚ್ಚಿಯಲ್ಲಿ ತೆಗೆದುಕೊಳ್ಳಲು ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಿಪಿಐ ಒಬ್ಬರನ್ನು ಕಲಬುರಗಿ ಯಿಂದ ಕೊಚ್ಚಿಗೆ ಕಳಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಕೊಚ್ಚಿಯಿಂದ ಹೈದರಾಬಾದ್ ಗೆ ವಿಮಾನದ ಮೂಲಕ ತರಲಾಗುತ್ತಿದ್ದು, ಅಂಬುಲೆನ್ಸ್ ಮೂಲಕ ಸರಸಂಬಾ ಗ್ರಾಮಕ್ಕೆ ತರಲಾಗುತ್ತಿದೆ.
ಹೆಚ್ಚಾಗಿ ಭಾರತೀಯ ಕೆಲಸಗಾರರೇ ವಾಸವಾಗಿದ್ದ ಕುವೈತ್‌ನ ಬಹು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 49 ಜನ ದುರ್ಮರಣ ಹೊಂದಿದ್ದಾರೆ. ಇದರಲ್ಲಿ 41 ಮಂದಿ ಭಾರತೀಯರೇ ಇದ್ದಾರೆ. ಕಾಸರಗೋಡಿನ ಇಬ್ಬರು ಮೃತಪಟ್ಟಿದ್ದಾರೆ.
50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವಘಡ ಸಂಭವಿಸಿದಾಗ ಬಹುತೇಕರು ನಿದ್ರೆಯಲ್ಲಿದ್ದರು. ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹಲವರನ್ನು ರಕ್ಷಣೆ ಮಾಡಲಾಗಿದೆ.