Advertisement

ಸೇತುವೆಯಿಂದ ಕುಮಾರಧಾರಾ ಹೊಳೆಗೆ ಧುಮುಕಿದ ವ್ಯಕ್ತಿ ಇನ್ನೂ ನಾಪತ್ತೆ!

08:25 AM Jul 31, 2017 | Team Udayavani |

ಕಡಬ: ಕಡಬ-ಪಂಜ ರಸ್ತೆಯ ಕೋಡಿಂಬಾಳ ಬಳಿಯ ಪುಳಿಕುಕ್ಕು ಸೇತುವೆಯ ಮೇಲಿನಿಂದ ಶನಿವಾರ ಮಧ್ಯಾಹ್ನ ಕುಮಾರಧಾರಾ ಹೊಳೆಗೆ ಧುಮುಕಿ ನೀರಿನಲ್ಲಿ  ಕೊಚ್ಚಿಕೊಂಡು ಹೋಗಿ ರುವ ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ಧರ್ಮಪಾಲ (43) ಅವರಿಗಾಗಿ ಹುಡುಕಾಟ ಮುಂದುವರಿದಿದ್ದು, ರವಿವಾರ ಸಂಜೆಯ ತನಕವೂ ಅವರ ಪತ್ತೆಯಾಗಿಲ್ಲ.

Advertisement

ಆಸ್ತಿಯ ಪಾಲಿನ ವಿಚಾರದಲ್ಲಿ  ಸಹೋದರನೊಂದಿಗಿನ  ವೈಮನಸ್ಸಿನಿಂದಾಗಿ ಧರ್ಮಪಾಲ ಅವರು ಹೊಳೆಗೆ ಹಾರಿದ್ದಾರೆ ಎನ್ನಲಾಗಿದೆ. ಶನಿವಾರ ಸಂಜೆಯ ವೇಳೆಗೆ ಪುತ್ತೂರಿ ನಿಂದ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಬಂದರೂ ಬೆಳಕಿನ ಕೊರತೆ ಮತ್ತು ಹೊಳೆಯಲ್ಲಿ  ನೀರು ತುಂಬಿ ಹರಿಯುತ್ತಿದ್ದ ಕಾರಣದಿಂದಾಗಿ ಯಾವುದೇ ಕಾರ್ಯಾಚರಣೆ ನಡೆಸದೆ ಹಿಂದಿರುಗಿದ್ದರು. 

ರವಿವಾರ ಬೆಳಗ್ಗೆ ಮತ್ತೆ ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ದಳದ ಸಿಬಂದಿ ಬೋಟ್‌ ಮೂಲಕ ಹೊಳೆಯ ನೀರಿನಲ್ಲಿ ಸಂಚರಿಸಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಧರ್ಮಪಾಲ ಅವ ರಿಗಾಗಿ ಹುಡುಕಾಟ ನಡೆಸಿದರು. ಕಾರ್ಯಾ ಚರಣೆ ನಡೆ ಯುತ್ತಿರುವ ಸುದ್ದಿ ತಿಳಿದ ಸುತ್ತಮುತ್ತಲಿನ ಜನ ಪುಳಿಕಕ್ಕು ಸೇತುವೆ ಮತ್ತು ನಾಕೂರು ರೈಲ್ವೇ ಸೇತುವೆಯ ಮೇಲೆ ನಿಂತು ಕುತೂಹಲದಿಂದ ಕಾರ್ಯಾ ಚರಣೆ ವೀಕ್ಷಣೆ ಮಾಡಿದರು.

ಸಾರ್ವಜನಿಕರಿಂದಲೂ ಹುಡುಕಾಟ
ಅಗ್ನಿಶಾಮಕದಳದ ಸಿಬಂದಿಯೊಂದಿಗೆ ಕಡಬ ಪೊಲೀಸರು ಹಾಗೂ ಸ್ಥಳೀಯರು ಕೂಡ ಶೋಧ ಕಾರ್ಯದಲ್ಲಿ ಸಹಕಾರ ನೀಡಿದರು. ಪುಳಿಕುಕ್ಕು ಸೇತುವೆಯ ಬಳಿ ಯಿಂದ ಪಾಲೋಳಿ ತನಕ ಸುಮಾರು 2.5 ಕಿ.ಮೀ. ವ್ಯಾಪ್ತಿಯಲ್ಲಿ ಹುಡು ಕಾಟ ನಡೆಸಲಾಯಿತು. 

ನಾಕೂರು, ಪಾಲೋಳಿ, ಕೊಡ್ಯಕಲ್ಲು, ಚಿರ್ಪಿನಡಿ, ತೊಟ್ಟಿಲ ಕಯ ಸೇರಿದಂತೆ ನದಿಯಲ್ಲಿ ಅಗ್ನಿಶಾಮಕ ದಳದ ಸಿಬಂದಿಯೊಂದಿಗೆ ಸ್ಥಳೀಯ ಈಜು ಗಾರರು ಕೂಡ ಬೋಟ್‌ ನಲ್ಲಿ ತೆರಳಿ ಶೋಧಕಾರ್ಯದಲ್ಲಿ ಸಹಕರಿಸಿದರು. 
ರವಿವಾರ ಸಂಜೆಯ ತನಕ ಹುಡುಕಾಡಿ ದರೂ ಯಾವುದೇ ಪ್ರಯೋಜನವಾಗದೇ ಇದ್ದುದರಿಂದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಸೋಮವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸ ಲಾಗುವುದು ಎಂದು ಆಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.

Advertisement

ರಾತ್ರಿಯೇ ಹಿಂದಿರುಗಿದರು
ಸ್ಥಳೀಯರ ಕರೆಯಂತೆ ಶನಿವಾರ ರಾತ್ರಿ ಸ್ಥಳಕ್ಕೆ ಆಗಮಿಸಿದ ಮಂಗಳೂರಿನ ತಣ್ಣೀರು ಬಾವಿಯ ಈಜುಗಾರರು ಕಾರ್ಯಾಚರಣೆ ನಡೆಸಲು ಸಂಬಂಧಪಟ್ಟವರು ಬೆಳಕಿನ ವ್ಯವಸ್ಥೆ, ಪೂರಕ ಸೌಕರ್ಯಗಳಿಲ್ಲದ ಕಾರಣ ಕಾರ್ಯಾಚರಣೆಗಿಳಿಯದೆ ರಾತ್ರಿಯೇ ಮಂಗಳೂರಿಗೆ ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next