Advertisement
ಸಾರಿಗೆ ನಿಗಮದ ಕೇಂದ್ರ ಕಚೇರಿಯ ಸೂಚನೆಯಂತೆ ನಿಗಮದ ಸಾಂಸ್ಕೃತಿಕ ಕೆ.ಎಸ್.ಆರ್.ಟಿ.ಸಿ ಕಲಾವಿದರು ನಗರದ ಬಸ್ ಡಿಪೋ ಹಾಗೂ ಬಸ್ ನಿಲ್ದಾಣದಲ್ಲಿ ನಡೆಸಿಕೊಟ್ಟ ಬದುಕಿ-ಬದುಕಿಸಿ ನಾಟಕವು ಕೆ.ಎಸ್.ಆರ್.ಟಿ.ಸಿ.ಯ ಪ್ರಯಾಣಿಕ ಸುರಕ್ಷತೆ, ಸಂಚಾರ ನಿಯಮಗಳ ಪಾಲಿಸುವಿಕೆ, ವಿದ್ಯಾರ್ಥಿ ಮತ್ತು ದಿವ್ಯಾಂಗರ ಬಸ್ ಪಾಸ್, ಅಪಘಾತ ಸಂದರ್ಭದಲ್ಲಿ ದೊರೆಯುವ ಪರಿಹಾರ ಹೀಗೆ ನಿಗಮದಿಂದಾಗುವ ಅನುಕೂಲಗಳ ಬಗ್ಗೆ ಹಾಗೂ ಸಂಸ್ಥೆಯು ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯ ಬಗ್ಗೆ ಮಾಹಿತಿ ನೀಡುವುದರ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಜನಮನ ಗೆದ್ದರು.
Related Articles
Advertisement
ಪೋಷಕರು ಸಹಕರಿಸಿ: ವಿಶೇಷವಾಗಿ ಪರೀಕ್ಷೆ ಸಂದರ್ಭಗಳಲ್ಲಿ ಮಕ್ಕಳು ನಿಲುಗಡೆ ಕೋರಿದ ಸ್ಥಳಗಳಲ್ಲಿ ಚಾಲಕರು ವಾಹನವನ್ನು ನಿಲ್ಲಿಸಿ, ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಜೀವನ ನಡೆಸಲು ಸಹಕರಿಸಬೇಕು ಎಂದರು.
ಜವಾಬ್ದಾರಿಯುತ ಸಂದೇಶ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ ರವಿ ಮಾತನಾಡಿ, ಬಸ್‌ನಲ್ಲಿ ಸಂಚಾರಿಸುವಾಗ ಸಾಮಾನ್ಯ ವಾಗಿ ನಡೆಯುವಂಥ ಘಟನೆಗಳನ್ನು ಗಮನಿಸಿ ಅಭಿನಯಿಸಿರುವುದನ್ನು ಕಾಣಬಹುದಾಗಿದ್ದು ಇಲಾಖೆ ತನ್ನ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ನಾಟಕದ ಮೂಲಕ ಅನೇಕ ಜವಾಬ್ದಾರಿಯುತ ಸಂದೇಶಗಳನ್ನು ನೀಡಿದೆ ಎಂದರು.
ಪ್ರತಿ ಸರ್ಕಾರಿ ಬಸ್ಸಿನಲ್ಲಿರುವ ಪ್ರಥಮ ಚಿಕ್ಸಿತೆಯ ಪೆಟ್ಟಿಗೆಯನ್ನು ಅಪಘಾತದ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಿ ಎಂದು ಚಾಲಕ ಮತ್ತು ನಿರ್ವಾಹಕರಿಗೆ ತಿಳಿಸಿದರು. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಇಲಾಖೆಯು ನೌಕರರಿಗೆ ಯಾವ ರೀತಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿಸಲಾಗಿದ್ದು, ನೌಕರರಿಗೆ ಮನಮುಟ್ಟುವ ಹಾಗೇ ನಾಟಕದ ಮೂಲಕ ಪಾಲಿಸಬೇಕಿರುವ ನಿಯಮ, ಇನ್ನಿತರ ವಿಷಯಗಳನ್ನು ತಿಳಿಸಲಾಗಿದೆ ಎಂದರು.
ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ನಾಗೇಗೌಡ, ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಲೋಹಿತ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಸಂಚಾಲನ ಅಧಿಕಾರಿ ಪರಮೇಶ್ವರಪ್ಪ, ವಿಭಾಗೀಯ ತಾಂತ್ರಿಕ ಶಿಲ್ಪಿ ಸೂರ್ಯಕಾತ್, ಚಾಮರಾಜನಗರ ಘಟಕದ ವ್ಯವಸ್ಥಾಪಕ ಕುಮಾರ್ ನಾಯಕ್ ಮತ್ತು ಕೆ.ಎಸ್.ಆರ್.ಟಿ.ಸಿ ಸಾಂಸ್ಕೃತಿಕ ಕಲಾ ತಂಡದ ನಿರ್ದೇಶಕ ಬಾಲಕೃಷ್ಣ ಇದ್ದರು.