Advertisement

ವಿದ್ಯುತ್‌ ತಂತಿಯ ಮೇಲೆ ಒಣಗಿದ ಮರಗಳ ಸಾಲು

01:10 AM Mar 19, 2020 | Sriram |

ಕೆದೂರು: ತಾಲೂಕಿನ ಕೆದೂರು ದಬ್ಬೆಕಟ್ಟೆ ಪ್ರಮುಖ ಸಂಪರ್ಕ ರಸ್ತೆಯ ತೋಟಗಾರಿಕಾ ಕ್ಷೇತ್ರದ ಸಮೀಪದಲ್ಲಿ ಹಾದು ಹೋಗಿರುವ ವಿದ್ಯುತ್‌ ತಂತಿಯ ಮೇಲೆ ಒಣಗಿದ ಸಾಲು ಮರಗಳು ಎರಗಿ ನಿಂತಿದ್ದು ಅಪಾಯ ಆಹ್ವಾನಿಸುತ್ತಿದೆ.

Advertisement

ಅಪಾಯ
ಬಿಸಿಲ ಬೇಗೆಗೆ ಈ ಭಾಗದಲ್ಲಿ ಪ್ರದೇಶ ಒಣಗಿದ್ದು, ಹೆಚ್ಚಿನ ಪ್ರದೇಶಗಳಲ್ಲಿ ಹುಲ್ಲೂ ಇವೆ. ಮರ ಇನ್ನಷ್ಟು ಬಾಗಿ ತಂತಿ ಮೇಲೆ ಬಿದ್ದಿದ್ದೇ ಆದಲ್ಲಿ ಬೆಂಕಿ ತಗುಲಿ ಅಗ್ನಿ ಅವಘಡ ಆಗುವ ಸಾಧ್ಯತೆಯೂ ಇದೆ.

ಕಳೆದ ವರ್ಷ ಅಪಾರ ಹಾನಿ
2019 ಫೆ.22ರಂದು ತೋಟಗಾರಿಕಾ ಕ್ಷೇತ್ರದ ಸಮೀಪದಲ್ಲಿಯೇ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಅಗ್ನಿ ಆಕಸ್ಮಿಕವಾದ ಪರಿಣಾಮ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾನಾಡಿ ಸುತ್ತಮುತ್ತ ಬೆಂಕಿ ವ್ಯಾಪಿಸಿತ್ತು. 30 ಎಕರೆಗೂ ಹೆಚ್ಚಿನ ಗಿಡಗಂಟಿಗಳಿದ್ದ ಜಾಗ ಭಸ್ಮವಾಗಿತ್ತು. ಅಲ್ಲದೆ ಕೃಷಿಕ ಶಾನಾಡಿ ರಾಮಚಂದ್ರ ಭಟ್‌ ಅವರ ಸುಮಾರು 2.5 ಎಕರೆ ವಿಸ್ತೀರ್ಣದ ತೋಟದಲ್ಲಿ ಬೆಳೆದು ನಿಂತ 150ಕ್ಕೂ ಅಧಿಕ ಅಡಿಕೆ ಮರ‌ಗಳು, ವಿವಿಧ ಜಾತಿಯ ಮರಗಳು, ನೀರಾವರಿ ಪರಿಕರಗಳು, ಕೃಷಿ ವ್ಯವಸ್ಥೆ ಭಸ್ಮವಾಗಿದ್ದು ಲಕ್ಷಾಂತರ ರೂ. ನಷ್ಟವಾಗಿತ್ತು. ಪ್ರತಾಪ್‌ ನಗರದ ಪ್ರಕಾಶ್‌ ಅವರ ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಬೆಳೆದುನಿಂತ ಕೃಷಿ, ದನದ ಕೊಟ್ಟಿಗೆ, ಶಾನಾಡಿ ಪ್ರಶಾಂತ್‌ ಶೆಟ್ಟಿ ಅವರಿಗೆ ಸೇರಿದ ಸುಮಾರು 2 ಎಕರೆ ವಿಸ್ತೀರ್ಣದ ರಬ್ಬರ್‌ ತೋಟ, ಇತರ ಸ್ಥಳೀಯರಆಸ್ತಿಗಳಿಗೆ ಹಾನಿಯಾಗಿದೆ. ಈ ಘಟನೆ ನಡೆದು ಒಂದು ವರ್ಷ ಕಳೆದರೂ ಮೆಸ್ಕಾಂ ಈವರೆಗೂ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ಪ್ರಕಾಶ್‌ ಕೆದೂರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸೂಕ್ತ ಕ್ರಮ ಅಗತ್ಯ
ಕಳೆದ ವರ್ಷದಂತೆ ಗ್ರಾಮದಲ್ಲಿ ಶಾರ್ಟ್‌ ಸರ್ಕ್ನೂಟ್‌ನಿಂದ ಅವಘಡಗಳು ಸಂಭವಿಸದಂತೆ, ಮೆಸ್ಕಾಂ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯವಿದೆ.
– ಶಾನಾಡಿ ರಾಮಚಂದ್ರ ಭಟ್‌, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next