Advertisement
ಭಾರತದ ಶಾಸಕಾಂಗದ ಇತಿಹಾಸದಲ್ಲಿ 2013, ಜು.9ನ್ನು ಅತ್ಯಂತ ಮಹತ್ವದ ದಿನ ಎಂದು ಹೇಳಲಾಗುತ್ತದೆ. ನ್ಯಾಯಾಲಯ ಶಿಕ್ಷೆ ವಿಧಿಸಿದ ವ್ಯಕ್ತಿಗಳು ಶಿಕ್ಷೆಯ ಅವಧಿಯಲ್ಲಿ ಮತ್ತು ಬಳಿಕ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿ ಅಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ರಾಜಕೀಯದ ಅಪರಾಧೀಕರಣವನ್ನು ತಡೆಯುವಲ್ಲಿ ಇದು ಒಂದು ಮಹತ್ವದ ತೀರ್ಪಾಗಿತ್ತು.
Related Articles
Advertisement
ಕಳಂಕಿತರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದರೆ ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎನ್ನುವ ವಾದದಲ್ಲಿ ಹುರುಳಿಲ್ಲ. ಏಕೆಂದರೆ ಕಳಂಕಿತರು ತಮ್ಮ ಕೃತ್ಯದಿಂದ ಜನಪ್ರತಿನಿಧಿಗಳಾಗುವ ನೈತಿಕ ಹಕ್ಕನ್ನು ಕಳೆದುಕೊಂಡಿರುತ್ತಾರೆ ಹಾಗೂ ಪ್ರಜಾಪ್ರಭುತ್ವದ ಮೂಲಭೂತ ಆಶಯವನ್ನೇ ಉಲ್ಲಂ ಸಿರುತ್ತಾರೆ. ಕ್ರಿಮಿನಲ್‌ಗಳನ್ನು ಸಚಿವರನ್ನಾಗಿಸುವ ಕೆಟ್ಟ ಪರಂಪರೆ ಭಾರತ ಬಿಟ್ಟರೆ ಬೇರೆ ಯಾವ ದೇಶದಲ್ಲೂ ಇಲ್ಲ.
ಕಳಂಕಿತ ವ್ಯಕ್ತಿತ್ವವೂ ಒಂದು ಹೆಗ್ಗಳಿಕೆ ಎಂದು ಭಾವಿಸಿ ಹೆಮ್ಮೆ ಪಡುವ ಜನರಿರುವ ದೇಶವಿದು. ಹೀಗಾಗಿ ಪುಂಡುಪೋಕರಿಗಳು, ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಈ ನಿಯಮ ಅಂಗೀಕಾರಗೊಂಡು ಜಾರಿಗೆ ಬಂದರೆ ರಾಜಕೀಯ ರಂಗದ ಬಹುಭಾಗ ಸ್ವತ್ಛಗೊಳ್ಳುವುದರಲ್ಲಿ ಸಂಶಯವಿಲ್ಲ. ಆಗ ಸಚ್ಚಾರಿತ್ರ್ಯವುಳ್ಳವರು ಮಾತ್ರ ಜನಪ್ರತಿನಿಧಿಗಳಾಗಿ ಆರಿಸಿಬರುತ್ತಾರೆ. ಇದರ ಜತೆಗೆ ರಾಜಕಾರಣಿಗಳಿಗೆ ಕನಿಷ್ಠ ವಿದ್ಯಾರ್ಹತೆ ಮತ್ತು ನಿವೃತ್ತಿ ವಯೋಮಿತಿಯನ್ನು ನಿಗದಿಪಡಿಸುವ ಪ್ರಸ್ತಾವವೂ ಇದೆ. ಆದರೆ ಪೂರ್ಣವಾಗಿ ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನ್ಯಾಯಾಲಯ ಮತ್ತು ಆಯೋಗ ಮಾತ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿಯಾದರೆ ಮಾತ್ರ ಈ ನಿಯಮ ಜಾರಿಗೆ ಬರಬಹುದು. ಆದರೆ ಅದು ಜಾರಿಯಾಗಬೇಕೆನ್ನುವುದು ಬಹುಜನರ ಅಪೇಕ್ಷೆ.