Advertisement
ಈ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಪಾಠ ದೊರೆತಂತಾಗಿದೆ. ಕಾಲೇಜು ವಿದ್ಯಾರ್ಥಿಗಳ, ಪ್ರಾಚಾರ್ಯರ, ಉಪನ್ಯಾಸಕರ, ಆಡಳಿತ ಮಂಡಳಿಯ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದ ಸಾರ್ಥಕತೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳೇ ನಾಟಿ ಮಾಡಿದ ಭತ್ತದ ನೇಜಿ ಬೆಳೆದು ಪೈರಿನಲ್ಲಿ ಭರಪೂರ ಬೆಳೆ ಬಂದಿದೆ. ನ. 19ರಂದು ಪೈರಿನ ಕಟಾವು ನಡೆಯಿತು.
ಯುವಜನತೆಗೆ ಭತ್ತದ ಬೇಸಾಯದ ಕುರಿತು ಅರಿವು ಕಡಿಮೆ. ಅಂಗಡಿ, ಮುಂಗಟ್ಟುಗಳಿಂದ ಅಕ್ಕಿಯನ್ನು ತರಿಸಿ ಊಟ ಮಾಡಲಾಗುತ್ತದೆ ಎಂಬುದಷ್ಟೇ ತಿಳಿದಿದೆ. ಕಾಲೇಜಿನ ವತಿಯಿಂದ ನೇಜಿ ನಾಟಿಯಿಂದ ಹಿಡಿದು ಪೈರು ಕಟಾವಿನ ವರೆಗೆ ಯಾವ ರೀತಿ ಜತನದಿಂದ ಭತ್ತದ ಬೆಳೆ ಬೆಳೆಯಬೇಕೆಂಬ ನಿಟ್ಟಿನಲ್ಲಿ ಈ ಗದ್ದೆ ಬೇಸಾಯ ಅರಿವು ಮೂಡಿಸಿದೆ.
- ವಿಶ್ವನಾಥ ಮಾರ್ಕಜೆ, ಅಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ಸ.ಪ್ರ.ದ. ಕಾಲೇಜು, ಬೆಳಂದೂರು
Related Articles
ಕಾಣಿಯೂರು ಮಠದ ಗದ್ದೆಯಲ್ಲಿ ವಿದ್ಯಾರ್ಥಿಗಳೇ ಸ್ವತಃ ನಾಟಿ ಮಾಡಿದ ನೇಜಿ ಉತ್ತಮ ಫಸಲು ನೀಡಿದೆ. ವಿದ್ಯಾರ್ಥಿಗಳೇ ಪೈರು ಕಟಾವು ಮಾಡಿದ್ದಾರೆ. ವಿದ್ಯಾರ್ಥಿಗಳಿಗೂ ನಮಗೂ ಇದೊಂದು ಸಾರ್ಥಕ ಕ್ಷಣ. ವಿದ್ಯಾರ್ಥಿಗಳು ಕಟಾವು ಮಾಡಿದರೆ, ಉಪನ್ಯಾಸಕರು ಭತ್ತ ಬೇರ್ಪಡಿಸಿದರು. ಈ ಮೂಲಕ ಬದುಕಿನ ಶಿಕ್ಷಣ ದೊರೆದಂತಾಗಿದೆ. ಭತ್ತದಿಂದ ಪಡೆದ ಅಕ್ಕಿಯನ್ನು ಕಾಲೇಜಿನಲ್ಲಿ ನಡೆಯುವ ಮಧ್ಯಾಹ್ನದ ಊಟಕ್ಕೆ ಬಳಸಿಕೊಳ್ಳಲಾಗುತ್ತದೆ. ಕಾಲೇಜಿನ ಆವರಣದಲ್ಲಿ ತರಕಾರಿಯನ್ನೂ ಬೆಳೆಸಲಾಗುತ್ತದೆ. ಗದ್ದೆ ನೀಡಿದ ಕಾಣಿಯೂರು ಮಠದವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
- ಪ್ರೊ| ಪದ್ಮನಾಭ ಕೆ. ಪ್ರಾಚಾರ್ಯರು, ಸ.ಪ್ರ.ದ. ಕಾಲೇಜು, ಬೆಳಂದೂರು
Advertisement
ತಿಳಿಹೇಳುವ ಕಾರ್ಯಬೇಸಾಯ ಎಂದರೆ ಏನು, ಅಕ್ಕಿಯನ್ನು ಯಾವ ರೀತಿ ಶ್ರಮ ವಹಿಸಿ ಮಾಡಲಾಗುತ್ತದೆ ಎಂಬು ದನ್ನು ತಿಳಿ ಹೇಳುವುದಕ್ಕಾಗಿ ಮತ್ತು ಮುಂದಿನ ಪೀಳಿಗೆ ಭತ್ತದ ಬೇಸಾಯವನ್ನು ಮುಂದುವರಿ ಸಲು ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯ ಮಾಡಲಾಗಿದೆ.
– ಶ್ರೀಧರ ರೈ ಮಾದೋಡಿ, ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿ, ಬೆಳಂದೂರು