ಉಡುಪಿ: ಮಕ್ಕಳು ಆಟವಾಡುತ್ತ ಸಮಯ ಕಳೆಯುವುದನ್ನು ಬಿಟ್ಟು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಇಲ್ಲಿ ಮಾದರಿಯಾಗಿದ್ದಾರೆ.
ಕೋವಿಡ್-19 ಸೋಂಕು ಕಾಣಿಸಿಕೊಂಡ ಬಳಿಕ ಶಾಲಾ ಮಕ್ಕಳಿಗೆ ರಜೆ ಇತ್ತು. ಹೀಗಾಗಿ ಮನೆಯಲ್ಲೆ ಉಳಿದುಕೊಂಡ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಸಮಯ ಕಳೆಯುತ್ತಿದ್ದರು. ಆದರೆ ಅಂಬಾಗಿಲು ಪರಿಸರದ ಮಕ್ಕಳು ಮಾತ್ರ ಸ್ವಲ್ಪ ಭಿನ್ನವಾದ ಕೆಲಸ ಮಾಡಿದ್ದಾರೆ.
ಮನೆಗಳಲ್ಲಿ ಸಂಗ್ರಹಿಸಿಟ್ಟ ಕಸವನ್ನೆಲ್ಲ ಒಟ್ಟು ಗೂಡಿಸಿ ತ್ಯಾಜ್ಯ ಸಂಗ್ರಹ ವಾಹನಕ್ಕೆ ತಂದು ನೀಡಿದ್ದಾರೆ. ಈ ಮೂಲಕ ಸ್ವಚ್ಛತೆಗೆ ತಮ್ಮಿಂದಾದ ಕೊಡುಗೆ ಮಕ್ಕಳು ನೀಡಿದ್ದಾರೆ.
ನಗರಸಭೆ ತ್ಯಾಜ್ಯ ಸಂಗ್ರಹ ವಾಹನ ಸೋಮವಾರ ಅಂಬಾಗಿಲು ಪ್ರದೇಶಕ್ಕೆ ತೆರಳಿದಾಗ ಪರಿಸರದ ಮಕ್ಕಳು ತಮ್ಮ ಮನೆಗಳಲ್ಲಿ ಸಂಗ್ರಹಿಸಿದ್ದ ಕಸವನ್ನು ಹಿಡಿದು ರಸ್ತೆ ಬದಿ ವಾಹನಕ್ಕೆ ಕಾದು ವಾಹನದಲ್ಲಿದ್ದ ಕಾರ್ಮಿಕರಿಗೆ ನೀಡಿದರು.
ನಗರಸಭೆಯ ಕಸ ವಿಂಗಡಣೆಯ ಗುತ್ತಿಗೆ ಪಡೆದ ವಾಹನ ಚಾಲಕರು ಮನೆಯ ಗೇಟ್ ಮುಂದೆ ಇಟ್ಟ ಕಸದ ಬ್ಯಾಗ್‌ನ್ನು ವಾಹನಕ್ಕೆ ತಂದು ಹಾಕಬೇಕು ಎಂಬ ಸೂಚನೆ ಇದೆ. ಆದರೆ ಮಕ್ಕಳು ಸ್ವಇಚ್ಚೆಯಿಂದ ಇದನ್ನು ಮಾಡುತ್ತಿರು ವುದು ಪರಿಸರ, ಸ್ವಚ್ಛತೆ ಬಗೆಗಿನ ಮಕ್ಕಳ ಕಾಳಜಿ ಎತ್ತಿ ತೋರಿಸುತ್ತದೆ.