ಬನ್ನೂರು: ಯಾರು ನನ್ನ ಮೇಲೆ ಊಪಾಪೋಹಗಳನ್ನು ಹಬ್ಬಿಸುತ್ತಿದ್ದಾರೋ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇನೆ. ಇಲ್ಲವೇ ಇದನ್ನು ಸಾಬೀತುಪಡಿಸಿದ್ದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್‌ಕುಮಾರ್ ತಿಳಿಸಿದರು.
ಬನ್ನೂರಿನ ಆನಂದವಲ್ಲಿ ಹನುಮಂತೇಶ್ವರ ದೇವಸ್ಥಾನದಲ್ಲಿ ಜೆಡಿಎಸ್ ಸ್ವಯಂ ಸೇವಕರ ಸಂಘದ ಸದಸ್ಯರು ಹಮ್ಮಿಕೊಂಡಿದ್ದ ಶುಭ ಹಾರೈಕೆಯ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಹಿರಿಯ ಮುಖಂಡರು ಮತ್ತು ಯುವ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾದ ದಿನದಿಂದ ನನ್ನ ಮೇಲೆ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ದೃಶ್ಯ ಮತ್ತು ಸಮೂಹ ಮಾಧ್ಯಮದಲ್ಲಿ ಅಪಪ್ರಚಾರ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಅದರ ಲಾಭ ಪಡೆಯುವಂತ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಆರೋಪ ಸುಳ್ಳು: ಬನ್ನೂರು ಹೋಬಳಿ ಅಧ್ಯಕ್ಷ ಪಾರ್ಥಸಾರಥಿ ಮಾತನಾಡಿ, ಜಾಲತಾಣಗಳಲ್ಲಿ ಬಂದಿರುವಂತ ಅಧಿಕಾರಕ್ಕಾಗಿ ಒಳ ಒಪ್ಪಂದ ಆಗಿದೆ ಎನ್ನುವಂತ ಮಾತು ಸತ್ಯಕ್ಕೆ ದೂರವಾಗಿದ್ದು, ಕಾರ್ಯಕರ್ತರೆಲ್ಲರೂ ಇದನ್ನು ಮನಗಂಡು ಇಂತಹ ಅರೋಪಗಳಿಗೆ ಕಿವಿಗೊಡದೆ ನಮ್ಮ ಕ್ಷೇತ್ರದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರೇ ಅಭ್ಯರ್ಥಿ ಎಂದು ತಿಳಿದು ಅವರ ಸರ್ಕಾರ ಜಾರಿಗೆ ತರಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಬನ್ನೂರು ಹೋಬಳಿ ಅಧ್ಯಕ್ಷ ಪಾರ್ಥಸಾರಥಿ, ನಾಯಕ ಸಮುದಾಯದ ಚಿಕ್ಕಣ್ಣ, ಸಂಜಯ್, ಎಂ.ಎನ್.ಗೌಡ, ಕಿರಣ್, ಎಪಿಎಂಸಿ ಸದಸ್ಯ ಕೃಷ್ಣಪ್ಪ, ಮೈಸೂರು ಜಿಲ್ಲಾ ಕಾರ್ಯದರ್ಶಿ ನಿರಂಜನ್, ಹೋಬಳಿ ಘಟಕಾಧ್ಯಕ್ಷ ಶಿವಕುಮಾರ್, ನಾಯಕ ಸಮುದಾಯದ ಚಿಕ್ಕಯ್ಯ, ಕೊಡಗಳ್ಳಿ ಬಾಬು, ನವೀನ್, ಮಾಕನಹಳ್ಳಿ ಆನಂದ್, ಚಾಮನಹಳ್ಳಿ ದೀಪದರ್ಶನ್, ಅತ್ತಳ್ಳಿ ರವಿ, ಶಿವಕುಮಾರ್, ಮಹೇಶ್, ಸುಂದರ್ ನಾಯಕ್, ರಾಜುಗೌಡ, ಅಂಗಡಿ ಸೋಮಣ್ಣ ಇತರರು ಇದ್ದರು.