Advertisement
2 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಯುಳ್ಳ ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆಯನ್ನು ತಲುಪಿಸಲು “ಬ್ಯಾಂಕ್ ಮಿತ್ರ’ರು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ 72 ಸಾವಿರ, ಉಡುಪಿ ಜಿಲ್ಲೆಯಲ್ಲಿ 79, ದ.ಕ. ಜಿಲ್ಲೆಯಲ್ಲಿ 90ರಷ್ಟು ಸಂಖ್ಯೆಯಲ್ಲಿದ್ದಾರೆ.
2010ರಲ್ಲಿ ಆರ್‌ಬಿಐ ನಿರ್ದೇಶನ ದಂತೆ ಇವರು “ಬ್ಯುಸಿನೆಸ್ ಕರೆ ಸ್ಪಾಂಡೆಂಟ್’ ಆಗಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಇಲ್ಲದ ಹಳ್ಳಿಗಳಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸಲು ನಿಯೋಜನೆಗೊಂಡಿದ್ದರು. ಕೇಂದ್ರ ಸರಕಾರದ ಸಾಮಾಜಿಕ ಭದ್ರತೆ ಯೋಜನೆ ಜಾರಿ ಸಹಿತ ಬ್ಯಾಂಕ್‌ನ ಎಲ್ಲ ಸೇವೆಗಳನ್ನು ತಲುಪಿಸುವ ಕೆಲಸ ಇವರದು. ಬಳಿಕ ಸರಕಾರದ ಆದೇಶ, ಬ್ಯಾಂಕ್ ನವರ ನಿರ್ದೇಶನದಂತೆ “ಆಲ್ಟರ್ ಸ್ಮಾಲ್ ಬ್ರ್ಯಾಂಚ್’ ತೆರೆದು ಇವರ ಮೂಲಕ ಬ್ಯಾಂಕ್‌ನ ಎಲ್ಲ ಸೇವೆ ನೀಡುವಂತೆ ಮಾಡ ಲಾಯಿತು. ಸೇವೆ ನೀಡಲು ಬ್ಯಾಂಕ್‌ನವರೇ ಎಚ್‌ಎಚ್‌ಎಂ ಮೆಷಿನ್ ಮತ್ತು ವ್ಯವಹಾರಕ್ಕೆ ಒ.ಡಿ. ರೂಪದಲ್ಲಿ 25 ಸಾವಿರ ರೂ. ನೀಡು ತ್ತಿದ್ದರು. ತಿಂಗಳಿಗೆ 2 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿತ್ತು.
Related Articles
Advertisement
ಖಾಸಗಿಯಡಿ ಸಂಕಷ್ಟ2017ರ ಸೆಪ್ಟಂಬರ್ ತನಕ ಮಾಸಿಕ 5 ಸಾವಿರ ರೂ. ಕನಿಷ್ಠ ಗೌರವಧನ, ವರ್ಗಾವಣೆ ಕಮಿಷನ್ ಎಂದು ತಿಂಗಳಿಗೆ 5ರಿಂದ 30 ಸಾವಿರ ರೂ. ವರೆಗೆ ಗಳಿಸುತ್ತಿದ್ದರು. ಬಳಿಕ ಆದಾಯದಲ್ಲಿ ಇಳಿಕೆಯಾಗಿದೆ. ಬ್ಯಾಂಕ್ ಅಥವಾ ಕಂಪೆನಿ ಭದ್ರತೆ, ವಿಮಾ ಸುರಕ್ಷೆ ಇತ್ಯಾದಿ ನೀಡಿಲ್ಲ. ಬ್ಯಾಂಕ್‌ನವರು ಖಾಸಗಿ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡ ಪರಿಣಾಮ ಟ್ಯಾಬ್ ಪ್ರಿಂಟಿಂಗ್ ಮೆಷಿನ್, ಬಯೋಮೆಟ್ರಿಕ್ ರೀಡರ್ ಮತ್ತು ಎಟಿಎಂ ಕಾರ್ಡ್ ರೀಡರ್ ಪಡೆಯಲು 25 ಸಾವಿರ ರೂ. ವರೆಗೆ ಕಂಪೆನಿಗೆ ನೀಡಬೇಕಿದೆ. ಕಂಪೆನಿ ಒಪ್ಪಂದದ ಪ್ರಕಾರ ಗೌರವಧನದಲ್ಲಿ 80:20 ಮತ್ತು ಹಣಕಾಸಿನ ವ್ಯವಹಾರದಲ್ಲಿ 60:40ರ ನಿಯಮ ಜಾರಿಗೊಂಡಿದ್ದು, ಹಿಂದೆ ದೊರೆಯುತ್ತಿದ್ದಷ್ಟು ಆದಾಯ ಸಿಗುತ್ತಿಲ್ಲ. 2021ರ ನವೆಂಬರ್‌ಗೆ ಹಿಂದಿನ ಕಂಪೆನಿಯ ಜತೆಗಿನ ಒಪ್ಪಂದ ಮುಗಿದಿದೆ. ಹೊಸ ಗುತ್ತಿಗೆದಾರ ಕಂಪೆನಿಯು ಭದ್ರತಾ ಠೇವಣಿ 10 ಸಾವಿರ ರೂ., 25 ಸಾವಿರ ರೂ.ಗಳ ಪಾಸ್‌ಬುಕ್ ಪ್ರಿಂಟಿಂಗ್ ಮೆಷಿನ್‌ಖರೀದಿಸಲು ಸೂಚಿಸಿದೆ. ಜತೆಗೆ ಹಣಕಾಸಿನವ್ಯವಹಾರಕ್ಕೆ ಶೇ. 0.15 ವ್ಯಾಲ್ಯುವೇಬಲ್ ಪೇ ನಿಗದಿಪಡಿಸಿದೆ. ಗೌರವಧನ ತಿಂಗಳಿಗೆ 2 ಸಾವಿರ ರೂ.ಗಿಂತಲೂ ಕಡಿಮೆಯಾಗಿದೆ. ವ್ಯವಹಾರದಲ್ಲಿ ಕಂಪೆನಿ ಯವರಿಗೆ ಶೇಕಡಾವಾರು ಪಾಲು ನೀಡುವ ನಿಬಂಧನೆ ಯಿಂದಾಗಿ ಬ್ಯಾಂಕ್ ಮಿತ್ರರಿಗೆ ನಷ್ಟ, ಗುತ್ತಿಗೆ ಕಂಪೆನಿಗೆ ಲಾಭವಾಗುತ್ತಿದೆ. ಕನಿಷ್ಠ ಗೌರವಧನ, ಸೇವಾ ಭದ್ರತೆಗೆ ಆಗ್ರಹ
ಕನಿಷ್ಠ 5 ಸಾವಿರ ರೂ. ಗೌರವಧನ ಪಾವತಿ, ಮಧ್ಯವರ್ತಿ ಕಂಪೆನಿಗಳಿಂದ ಪಾರು ಮಾಡಿ ಭದ್ರತೆ ಒದಗಿಸಬೇಕು ಎಂಬುದು ಅವರ ಆಗ್ರಹವಾಗಿದ್ದು, ಪ್ರಧಾನಿಗೂ ಮನವಿ ಮಾಡಿದ್ದಾರೆ. ಬ್ಯಾಂಕ್ ಮಿತ್ರರು ನೇರ ಬ್ಯಾಂಕ್ ಉದ್ಯೋಗಿಗಳಲ್ಲ. ಖಾಸಗಿ ಯಾಗಿ ನೇಮಿಸಿಕೊಳ್ಳಲಾಗುತ್ತದೆ. ಕಮಿಷನ್ ಆಧಾರದಲ್ಲಿ ಆದಾಯ ಗಳಿಸಲು ಅವರಿಗೆ ಅವಕಾಶವಿದೆ. ಒಂದೊಂದು ಬ್ಯಾಂಕಿಗೆ ಒಂದೊಂದು ಕಂಪೆನಿ ನೇಮಕಗೊಳಿಸಿಕೊಳ್ಳುತ್ತದೆ. ಸವಲತ್ತುಗಳಲ್ಲಿ ವ್ಯತ್ಯಾಸಗಳಿರುತ್ತವೆ. ಸಮಸ್ಯೆಯಾದಲ್ಲಿ ಸರಿಪಡಿಸುತ್ತೇವೆ.
– ಚಲವಾದಿ, ಗ್ರಾಮ ತರಂಗ (ಗುತ್ತಿಗೆದಾರ ಸಂಸ್ಥೆಗಳಲ್ಲಿ ಒಂದು)
ಕಂಪೆನಿ ಮುಖ್ಯಸ್ಥ, ಒಡಿಶಾ