Advertisement

7 ವರ್ಷದಿಂದ ನಿಂತಲ್ಲೇ ನಿಂತಿರುವ ಜೀವಿ!ವಿಜ್ಞಾನ ಲೋಕಕ್ಕೇ ಹೊಸ ಸವಾಲು!

10:05 AM Feb 09, 2020 | sudhir |

ನವದೆಹಲಿ: ಯಾವುದೇ ಜೀವಿಯು ಆಹಾರ ಸೇವಿಸದೆ, ಯಾವುದೇ ಚಟುವಟಿಕೆಯಿರದೆ ಜೀವಿಸಲು ಸಾಧ್ಯವಿಲ್ಲ. ಆದರೆ, ಬೋಸ್ನಿಯಾ – ಹೆರ್ಜ್‌ಗೊವಿನಾ ಪ್ರಾಂತ್ಯದ ನೈಸರ್ಗಿಕ ಗುಹೆಗಳ ಪ್ರಾಂತ್ಯದಲ್ಲಿ ಕಂಡು ಬಂದಿರುವ ಕೇವ್‌ ಸಲಮ್ಯಾಂಡರ್‌ ಎಂಬ ಹಲ್ಲಿ ಜಾತಿಗೆ ಸೇರಿದ ಜೀವಿಯೊಂದು ಕಳೆದ ಏಳು ವರ್ಷಗಳಿಂದ ಒಂದೇ ಜಾಗದಲ್ಲಿ ತಟಸ್ಥವಾಗಿ ನಿಲ್ಲುವ ಮೂಲಕ ವಿಜ್ಞಾನ ಲೋಕಕ್ಕೇ ಹೊಸ ಸವಾಲು ಎಸೆದಿದೆ.
ಸಲಮ್ಯಾಂಡರ್‌ಗಳಿಗೆ ಪ್ರೊಟಿಯಸ್‌ ಆ್ಯಂಗ್ಯುನಸ್‌ ಎಂಬ ವೈಜ್ಞಾನಿಕ ಹೆಸರಿದೆ.

Advertisement

ಇವು ಕಣ್ಣಿಲ್ಲದ ಜೀವಿಗಳು. ಹಾಗಾಗಿ, ಗಾಢವಾದ ಕತ್ತಲೆಯಲ್ಲಿ ಅಥವಾ ನೀರಿನ ಆಳದಲ್ಲಿ ಇವು ಜೀವಿಸುತ್ತವೆ. ಭಾರೀ ಮಂದಗತಿಯಲ್ಲಿ ನಡೆಯುವುದು ಇವುಗಳ ವಿಶೇಷತೆ. ಈ ಹಲ್ಲಿಗಳು 10 ವರ್ಷದಲ್ಲಿ ಕೇವಲ 32 ಮೀಟರ್‌ ಮಾತ್ರ ಸಂಚರಿಸುತ್ತವೆ. ಆದರೆ, ಕಳೆದ ಏಳು ವರ್ಷಗಳಲ್ಲಿ ಯಾವುದೇ ಆಹಾರ ಸೇವಿಸದೆ, ನಿಂತ ಜಾಗದಿಂದ ಸ್ವಲ್ಪವೂ ಕದಲದೇ ಇನ್ನೂ ಜೀವಂತವಾಗಿರುವ ಈ ಸಲಮಾಂಡರ್‌ ಹೊಸ ದಾಖಲೆಯನ್ನೇ ನಿರ್ಮಿಸಿದೆ ಎಂದು ಈ ಗುಹೆಗಳಲ್ಲಿನ ಸಲಮ್ಯಾಂಡರ್‌ಗಳ ಅಧ್ಯಯನ ನಡೆಸುತ್ತಿರುವ ಜೀವ ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next