Advertisement

CJI ಮುಂದೆಯೇ ವಿಸ್ಕಿ ಬಾಟಲಿ ತಂದಿಟ್ಟ ವಕೀಲ!- ಸುಪ್ರೀಂನಲ್ಲೊಂದು ಅಪರೂಪದ ಬೆಳವಣಿಗೆ

12:47 AM Jan 06, 2024 | Team Udayavani |

ಹೊಸದಿಲ್ಲಿ: ಟ್ರೇಡ್‌ಮಾರ್ಕ್‌ ಉಲ್ಲಂಘನೆ ಪ್ರಕರಣವೊಂದರ ಅರ್ಜಿ ಆಲಿಸುತ್ತಿದ್ದ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮುಂದೆಯೇ ವಕೀಲರು 2 ವಿಸ್ಕಿ ಬಾಟಲಿಗಳನ್ನು ತಂದಿಟ್ಟಿದ್ದಾರೆ.

Advertisement

ಪೆನಾರ್ಡ್‌ ರಿಚರ್ಡ್ಸ್‌ ಹಾಗೂ ಜೆ.ಕೆ.ಎಂಟರ್‌ಪ್ರೈಸಸ್‌ ಎಂಬ ಮದ್ಯ ತಯಾರಿಕ ಸಂಸ್ಥೆಗಳ ನಡುವೆ “ಲಂಡನ್‌ ಪ್ರೈಡ್‌’ಎಂಬ ಹೆಸರನ್ನು ಬಳಸಿ ಮದ್ಯ ತಯಾರಿಸುವ ಬಗ್ಗೆ ವಿವಾದ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೆ.ಕೆ. ಸಂಸ್ಥೆಯ ಉತ್ಪಾದನೆಗೆ ತಡೆ ನೀಡುವಂತೆ ಕೋರಿ ರಿಚರ್ಡ್ಸ್‌ ಸಂಸ್ಥೆ ಮಧ್ಯಪ್ರದೇಶ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ತಡೆ ನೀಡಲು ನಿರಾಕರಿಸಿದ ಹಿನ್ನೆಲೆ ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮ ನವಿ ಸಲ್ಲಿಸಲಾಗಿತ್ತು. ಸುಪ್ರೀಂನಲ್ಲಿ ವಿಚಾರಣೆ ವೇಳೆ ವಕೀಲ ಮುಕುಲ್‌ ರೋಹrಗಿ ಅವರು ಸಿಜೆಐ ಸಮ್ಮತಿ ಪಡೆದು ನ್ಯಾಯ­ಪೀಠದ ಮುಂದೆಯೇ ಎರಡೂ ಸಂಸ್ಥೆಗಳ ಮದ್ಯದ ಬಾಟಲಿ ತಂದಿಟ್ಟಿದ್ದಾರೆ. ಈ ವೇಳೆ ಸಿಜೆಐ ನಕ್ಕು, “ನೀವು ಬಾಟಲಿಗಳನ್ನೂ ಜತೆಗೆ ತಂದಿರುವಿರೇ’ ಎಂದು ಛೇಡಿಸಿದ್ದಾರೆ. ವಿಚಾರಣೆ ಬಳಿಕ ಈ ಬಾಟಲಿಗಳನ್ನು ನಾನು ಕೊಂಡೊಯ್ಯಬಹುದೇ ಎಂದೂ ವಕೀಲರು ಕೇಳಿದ್ದು, ಸಿಜೆಐ ನಗುತ್ತಾ”ದಯವಿಟ್ಟು ಕೊಂಡು ಹೋಗಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next