Advertisement

ಮಹಿಳೆಯರ ಸಾಧನೆ ಅಪಾರ

03:01 PM Apr 10, 2017 | Team Udayavani |

ಹುಬ್ಬಳ್ಳಿ: ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ದಾಪುಗಾಲು ಇರಿಸಿದ್ದು, ಅವರಿಗೆ ಅಸಾಧ್ಯವಾದ ಕೆಲಸ ಯಾವುದು ಇಲ್ಲ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ಶರಣೆ ಅಕ್ಕಮಹಾದೇವಿ ಜಯಂತಿ ಹಾಗೂ ಅಕ್ಕನ ಬಳಗದ 79ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

Advertisement

ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕಲೆ, ಇತಿಹಾಸ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಅಪಾರ ಸಾಧನೆ ಮಾಡಿದ್ದಾರೆ. ದೇಶದ ಪ್ರತಿಷ್ಠಿತ ಎಂದೇ ಕರೆಯುವ ಇಸ್ರೋದಲ್ಲೂ ಹಲವು ಮಹಿಳೆಯರು ವಿಜ್ಞಾನಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ತಾಯಿಯಂದಿರುವ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕೂಡಾ ತಮ್ಮ ಮಾತೃ ಸ್ಥಾನ, ಗೃಹಿಣಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ.

ಉದ್ಯೋಗದ ವಿಷಯದಲ್ಲಿ ಮುಂದು ಅದೇ ರೀತಿ ಸಂಸಾರದಲ್ಲೂ ಮುಂದೆ ಮಹಿಳೆಯೇ ಇರುತ್ತಾಳೆ. ಮನೆಯಲ್ಲಿ ಮಕ್ಕಳ ಲಾಲನೆ-ಪಾಲನೆ, ಸಂಸಾರ ಸರಿದೂಗಿಸಿಕೊಂಡು ಹೋಗುವುದು, ಉತ್ತಮ ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ಪಾರುಪತ್ಯ ಸಾಧಿಸಿದ್ದಾಳೆ ಎಂದರು. 

ಈ ಹಿಂದೆ ವಿರಕ್ತ ಎಂಬುದು ಕೇವಲ ಪುರುಷರಿಗೆ ಸೀಮಿತವಾಗಿತ್ತು. ಆದರೆ ಅದನ್ನು ಹೊಡೆದುಹಾಕಿದ್ದು ಅಕ್ಕಮಹಾದೇವಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಎಲ್ಲ ವೈರಾಗ್ಯಗಳನ್ನು ತೊರೆದು ಅಕ್ಕಮಹಾದೇವಿ ವಿರಕ್ತವನ್ನು ಅಪ್ಪಿಕೊಂಡರು. ಅಷ್ಟೇ ಅಲ್ಲದೇ ಕನ್ನಡ ನಾಡಿನ ಮೊದಲ ಕವಯತ್ರಿ ಅಕ್ಕಮಹಾದೇವಿ ಎಂದರು. 

ಇದೇ ಸಂದರ್ಭದಲ್ಲಿ ಮಂಗಲಾ ಕುಪ್ಪಸ್ತ ಅವರಿಗೆ ಆದರ್ಶ ಗೃಹಿಣಿ ಎಂದು ಮತ್ತು ಸಹಾಯಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಮೌನಾ ನರವಣಿ, ಶಂಕುತಲಾ ಶೆಟ್ಟರ, ಪತ್ರಕರ್ತ ಸುಶೀಲೇಂದ್ರ ಕುಂದರಗಿ, ಸುವರ್ಣಾ ಅಬ್ಬಿಗೇರಿ ಅವರನ್ನು ಸನ್ಮಾನಿಸಲಾಯಿತು.

Advertisement

ನಂತರ ಪತ್ರಕರ್ತ ಸುಶೀಲೇಂದ್ರ ಕುಂದರಗಿ, ಸುವರ್ಣಾ ಅಬ್ಬಿಗೇರಿ, ಶಂಕುತಲಾ ಶೆಟ್ಟರ, ಮೌನಾ ನರವಣಿ ಮಾತನಾಡಿದರು. ಮಂಗಲಾ ನರವಣಿ ಸ್ವಾಗತಿಸಿದರು.  ಸುನೀಲಾ ಬ್ಯಾಹಟ್ಟಿ ನಿರೂಪಿಸಿದರು. ಶಾಂತಾ ಹೊಸಕೋಟಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next