Advertisement

ಪ್ರಧಾನಿ ಮೋದಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

01:34 AM Jul 04, 2021 | Team Udayavani |

ಆಗ್ರಾ: ಉತ್ತರಪ್ರದೇಶದ ಆಗ್ರಾದ ವಿದ್ಯಾಪುರದಲ್ಲಿ ಶುಕ್ರವಾರ ಎರಡು ಮಕ್ಕಳ ತಾಯಿ ಮೋನಾ ದ್ವಿವೇದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ!

Advertisement

ಅದರಲ್ಲಿ, ಈ ದೇಶದ ಮನೆಗಳೊಳಗೆ ಮಹಿಳೆಯರ ಮೇಲಾಗುವ ದೌರ್ಜನ್ಯ ಗಳನ್ನು ತಡೆಯುವಂತೆ ಮನವಿ ಮಾಡಿ ಕೊಂಡಿದ್ದಾರೆ. ಈ ಪತ್ರ ಎಲ್ಲ ಕಡೆ ಓಡಾಡುತ್ತ ಭಾರೀ ಚರ್ಚೆಗೆ ಕಾರಣವಾಗಿದೆ.

ಮೋನಾ ಎದೆಗೆ ಗುಂಡು ಹಾರಿಸಿಕೊಂಡ ಸದ್ದು ಕೇಳಿದ ತತ್‌ಕ್ಷಣ ಮನೆಯ ಇತರ ಸ್ತ್ರೀಯರು ಕೊಠಡಿಗೆ ಓಡಿದ್ದಾರೆ. ಆಸ್ಪತ್ರೆಗೆ ಒಯ್ಯುವ ದಾರಿಯಲ್ಲೇ ತೀರಿಕೊಂಡಿದ್ದಾರೆ.

ಪತ್ರದಲ್ಲೇನಿದೆ?: “ನಾನು ಬಡ ಕುಟುಂಬದಿಂದ ಬಂದವಳು. ಅಮ್ಮ ಬಾಲ್ಯದಲ್ಲೇ ತೀರಿಕೊಂಡಿದ್ದಾರೆ. ಅಪ್ಪ ಕುಡುಕ. ನನ್ನ ಗಂಡನ ಸಹೋದರರಾದ ಪಂಕಜ್‌, ಅಂಬುಜ್‌ ನಾನು ಬಡ ಕುಟುಂಬದಿಂದ ಬಂದವಳೆಂದು ಪದೇ ಪದೇ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು. ಇವರೆಲ್ಲ ಉತ್ತರ ಪ್ರದೇಶದ ಆಡಳಿತ ಪಕ್ಷಕ್ಕೆ ಸೇರಿದವರು. ಅತ್ತೆ ಮಾವನೂ ನನಗೆ ಚಿತ್ರಹಿಂಸೆ ನೀಡಿದ್ದಾರೆ.
ಎಲ್ಲಿ ಪತಿ ನನ್ನನ್ನು ಮನೆಯಿಂದ ಹೊರದಬ್ಬುತ್ತಾರೋ ಎಂಬ ಹೆದರಿಕೆಯಿಂದ ಅವನ್ನೆಲ್ಲ ಸಹಿಸಿಕೊಂಡಿದ್ದೆ’ ಎಂದು ಮೋನಾ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next