Advertisement

AI ಪ್ರತಿರೂಪದ ಪ್ರಶ್ನೆಗೆ ಪುಟಿನ್‌ ಉತ್ತರ!

08:55 PM Dec 15, 2023 | Pranav MS |

ಮಾಸ್ಕೊ: ಎ.ಐ. ತಂತ್ರಜ್ಞಾನ ಆಧಾರಿತ ಡೀಪ್‌ ಫೇಕ್‌ ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತವಾಗುತ್ತಿವೆ. ಈ ಹೊತ್ತಿನಲ್ಲಿ ಅದರಿಂದಲೇ ಅಭಿವೃದ್ಧಿಪಡಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನೇ ಹೋಲುವ, ಅವರ ಪ್ರತಿರೂಪದ ವಿಡಿಯೋ ಅಭಿವೃದ್ಧಿಪಡಿಸಲಾಗಿದೆ. ಅದನ್ನು ನೋಡಿದ ತಕ್ಷಣ ಕೆಲ ಕ್ಷಣ ಮಾತೇ ಹೊರಡದಂತೆ ಆಗಿದ್ದರು.

Advertisement

ಅದರ ಮೂಲಕ ಸ್ವತಃ ಪುಟಿನ್‌ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಎಐ ತಂತ್ರಜ್ಞಾನದ ಪುಟಿನ್‌ ಪ್ರತಿರೂಪವು ತನ್ನನ್ನು ಸೇಂಟ್‌ ಪೀಟರ್ಬರ್ಗ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಪರಿಚಯಿಸಿಕೊಂಡಿತು. “ನಿಮ್ಮನ್ನೇ ಹೋಲುವ ಅನೇಕರು ನಿಮ್ಮ ಬಳಿ ಇದ್ದಾರೆ ಎಂಬುದು ನಿಜವೇ. ಕೃತಕ ಬುದ್ಧುಮತ್ತೆ ಮತ್ತು ನ್ಯೂರಲ್‌ ನೆಟ್ವರ್ಕ್‌ಗಳಿಂದ ಉಂಟಾಗುವ ಅಪಾಯಗಳ ಕುರಿತು ನೀವು ಹೇಗೆ ವಿಶ್ಲೇಷಿಸುತ್ತೀರಿ?’ ಎಂದು ಪ್ರಶ್ನೆ ಕೇಳಿತು. ಇದನ್ನು ಕೇಳಿ ನೆರೆದಿದ್ದ ಜನಸಮೂಹವು ನಕ್ಕಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾ ಅಧ್ಯಕ್ಷ, “ನೀನು ನನ್ನನ್ನು ಹೋಲುತ್ತೀಯ ಹಾಗೂ ನನ್ನಂತೆ ಮಾತನಾಡುತ್ತೀಯ. ಆದರೆ ನನ್ನ ಹಾಗೇ ಇರಲು, ನನ್ನ ಹಾಗೇ ಯೋಚಿಸಲು ಹಾಗೂ ನನ್ನಂತೆ ಮಾತನಾಡಲು ಕೇವಲ ನನ್ನಿಂದ ಮಾತ್ರ ಸಾಧ್ಯ. ಹೀಗಾಗಿ ಪ್ರತಿರೂಪದ ಮಾತೇ ಇಲ್ಲ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next