Advertisement

ಭಿಕ್ಷಾಟನೆ ಮೂಲಕ ಪತ್ನಿಗೆ ಮತಯಾಚಿಸುವ ಪತಿ

01:26 PM Dec 24, 2020 | Suhan S |

ಹನೂರು: ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿರುವ ತನ್ನ ಪತ್ನಿಗೆ ಮತ ನೀಡುವಂತೆ ಪತಿ ಭಿಕ್ಷಾಟನೆ ಮಾಡುವ ಮೂಲಕ ಮತಯಾಚಿಸುತ್ತಿದ್ದಾರೆ.

Advertisement

ತಾಲೂಕಿನ ಸೂಳೇರಿಪಾಳ್ಯ ಗ್ರಾಪಂನ ಕಾಂಚಳ್ಳಿಯ5ನೇ ವಾರ್ಡ್ ನಿಂದ ಜಯಮ್ಮಸ್ಪರ್ಧಿಸಿದ್ದಾರೆ. ಈಕೆಯ ಪತಿ ದೇವರಗುಡ್ಡ ಬ್ಯಾಂಗೇಗೌಡ ಕರಪತ್ರ ಗಳನ್ನು ಹಾಕಿಕೊಂಡು ಜೋಳಿಗೆ ನೇತುಹಾಕಿ ಕೊಂಡುಕೈಯಲ್ಲಿ ಕಂಸಾಳೆ ಬಡಿಯುತ್ತಾ ಮತಯಾಚಿಸುತ್ತಿದ್ದಾರೆ.

ಪ್ರತಿ ಮನೆಯ ಬಾಗಿಲಿಗೂ ಜೊಳಿಗೆ ಹಿಡಿದು ಮತಯಾಚಿಸುತ್ತಿರುವ ಬ್ಯಾಂಗೇಗೌಡ ಅವರು ನೀಡುವ ಅಕ್ಕಿ ಇನ್ನಿತರ ದವಸ-ಧಾನ್ಯಗಳನ್ನು ಪಡೆದು ನೀವು ನೀಡುವ ಕಾಣಿಕೆ ಮಾದಪ್ಪನಿಗೆ ಅರ್ಪಿಸುತ್ತೇನೆ. ಇದರ ಜೊತೆಗೆ ನನ್ನ ಪತ್ನಿಗೆ ತಮ್ಮ ಮತ ಹಾಕಿ ಎಂದುಕೋರುತ್ತಿದ್ದಾರೆ.

ಮಹದೇಶ್ವರ ದೇವಾಲಯಕ್ಕೆ ರಾತ್ರಿ 10ರ ಬಳಿಕ ಭಕ್ತರ ಪ್ರವೇಶ ನಿರ್ಬಂಧ :

ಹನೂರು: ರೂಪಾಂತರಗೊಂಡಿರುವ ಹೊಸ ಸ್ವರೂಪದ ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ನೈಟ್‌ಕರ್ಫ್ಯೂವಿಧಿಸಿ ಸರ್ಕಾರ ಮಾರ್ಗ ಸೂಚಿ ಬಿಡುಗಡೆ ಮಾಡಿರುವ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಗೆ ಕೆಲಕಟ್ಟುನಿಟ್ಟಿನ ಕ್ರಮವಹಿಸುವಂತೆ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮನವಿ ಮಾಡಿದ್ದಾರೆ.

Advertisement

ಶ್ರೀ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಹಿನ್ನೆಲೆಕೊಠಡಿಗಳನ್ನುಕಾಯ್ದಿರಿಸಿದಭಕ್ತಾದಿಗಳು ರಾತ್ರಿ10.45 ರೊಳಗಾಗಿ ಕೊಠಡಿಪಡೆಯಬೇಕು. ಬಳಿಕ ಬಂದವರಿಗೆ ಕೊಠಡಿ ಪ್ರವೇಶಾತಿ ನಿರ್ಬಂಧಿಸಲಾಗಿದೆ ಮತ್ತು ಮುಂಗಡವಾಗಿ ಕಾಯ್ದಿರಿ ಸಿದಕೊಠಡಿಗೆಹಣಹಿಂದಿರುಗಿಸಲಾಗುವುದಿಲ್ಲ. ಬೆಳಗಿನ ಜಾವ ನಡೆಯುವ ಅಭಿಷೇಕ ಪೂಜಾ ಕೈಂಕರ್ಯಗಳಿಗೆ ಭಕ್ತಾದಿಗಳ ಪ್ರವೇಶಾತಿಯನ್ನುನಿರ್ಬಂಧಿಸಿದ್ದು ಅರ್ಚಕರಿಗೆ ಮಾತ್ರ ಪ್ರವೇಶಾತಿಕಲ್ಪಿಸಲಾಗಿದೆ. ಭಕ್ತಾದಿಗಳಿಗೆ ಬೆಳಗಿನ ಜಾವ 5ಗಂಟೆನಂತರದರ್ಶನಕ್ಕೆಅವಕಾಶ ಕಲ್ಪಿಸಲಾಗಿದೆ. ರಾತ್ರಿ 10 ಗಂಟೆಯ ಬಳಿಕ ದೇವಾಲಯ,

ದಾಸೋಹ ಭವನ, ಲಾಡು ವಿತರಣಾ ಕೌಂಟರ್‌ ಮುಚ್ಚಲಾಗುತ್ತಿದೆ. ಈ 3 ಸ್ಥಳಗಳಲ್ಲಿ 10 ಗಂಟೆ ನಂತದ ಭಕ್ತಾದಿಗಳ ಪ್ರವೇಶಕ್ಕೆ  ನಿರ್ಬಂಧ ವಿಧಿಸಲಾಗಿದ್ದು ಸೇವೆಗಳನ್ನು ರದ್ದುಮಾಡಲಾಗಿದೆ. ರಾತ್ರಿ 11 ಗಂಟೆಯ ನಂತರ ಸಂಪೂರ್ಣ ಲಾಕ್‌ಔಟ್‌ ಮಾಡಲಾಗುತ್ತಿದ್ದು ಬೆಳಗ್ಗಿನ ಜಾವ 5 ಗಂಟೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇನ್ನುಳಿದಂತೆ ಮಾಸ್ಕ್ ಬಳಕೆ,  ಸ್ಯಾನಿಟೈಸರ್‌ ಬಳಕೆ, ದೇವಾಲಯದ ಆವರಣ, ಸರದಿ ಸಾಲು ಮತ್ತು ದಾಸೋಹ ಭವನದಲ್ಲಿ ಕಡ್ಡಾಯ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಈ ಕುರಿತು ಭಕ್ತಾದಿಗಳಿಗೆ ಯಾವುದೇ ಮಾಹಿತಿ ಅವಶ್ಯಕವಾಗಿದ್ದಲ್ಲಿ ದೂ. ಸಂ 18604254350 ಸಂಪರ್ಕಿಸಿ ಮಾಹಿತಿ ಪಡೆಯುವಂತೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next