Advertisement

ಕರ್ನಾಟಕದಲ್ಲೂ ನಿರ್ಮಾಣವಾಗುತ್ತಿದೆ ಬೃಹತ್ ಆದಿ ಯೋಗಿ ಪ್ರತಿಮೆ; ಮಕರ ಸಂಕ್ರಾಂತಿಗೆ ಅನಾವರಣ

12:58 PM Oct 09, 2022 | Team Udayavani |

ಬೆಂಗಳೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಬೃಹತ್ ಆದಿಯೋಗಿ ಪ್ರತಿಮೆಯಂತೆ ಕರ್ನಾಟಕದಲ್ಲೂ ರಚಿಸಲು ಇಶಾ ಫೌಂಡೇಶನ್ ಸಿದ್ದವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆದಿ ಯೋಗಿ ಪ್ರತಿಮೆ ಕೆಲಸ ನಡೆಯುತ್ತಿದ್ದು, ಇದರ ಪ್ರಥಮ ಭಾಗವಾಗಿ ಶನಿವಾರ ನಾಗಮಂಟಪ ಉದ್ಘಾಟನೆ ಮಾಡಲಾಗಿದೆ.

Advertisement

ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿ ಇಶಾ ಫೌಂಡೇಶನ್ ವತಿಯಿಂದ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಶನಿವಾರ ಇಲ್ಲಿ ನಡೆದ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ಭಾಗಿಯಾಗಿದ್ದರು.

ಇದನ್ನೂ ಓದಿ:ಮಿಷನ್ 2024: ಲೋಕಸಭಾ ಎಲೆಕ್ಷನ್’ಗೆ ಬಿಜೆಪಿ ತಂತ್ರ; ಸೋತ ಕ್ಷೇತ್ರಗಳಲ್ಲಿ ಈ ಬಾರಿ ಮೋದಿ ರಾಲಿ

ಜನವರಿ 15 ರಂದು ಬರುವ ಮಕರ ಸಂಕ್ರಾಂತಿಯಂದು ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ವರದಿಯಾಗಿದೆ.

Advertisement

ಇಶಾ ಯೋಗ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳು ನಿರ್ಮಾಣ ಕಾರ್ಯ ನಡೆಯುತ್ತಿದೆ. 2023ರ ಮಹಾ ಶಿವರಾತ್ರಿಯ‌ಂದು ಇಲ್ಲಿನ ಆದಿಯೋಗಿ ಶಿವನ‌ ಪ್ರತಿಮೆ ಎದುರು ಸದ್ಗುರು ನೇತೃತ್ವದಲ್ಲಿ ಜಾಗರಣೆ, ಶಿವನ ಅರಾಧನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next