ಬೆಂಗಳೂರು: ಮನೆ ಕೆಲಸ ದಾಕೆಯೇ ಖಾಸಗಿ ಕಂಪನಿ ಉದ್ಯೋಗಿ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಹಾ ಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಷ ವಾಸುದೇವ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, ಅಂದಾಜು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಕೆಲಸದಾಕೆ ಪರಾರಿಯಾಗಿದ್ದಾಳೆ.
ಪ್ರತಿಷ್ಠಿತ ಆನ್‌ಲೈನ್ ಕಂಪನಿಯಲ್ಲಿ ಕೆಲಸ ಮಾಡುವ ಹರ್ಷ ವಾಸುದೇವ್, ಸಹೋದರ, ತಾಯಿ ಜತೆ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಸಹೋದರ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಉಪನ್ಯಾಸಕರಾಗಿದ್ದಾರೆ.
ಹೀಗಾಗಿ ಮನೆಯಲ್ಲಿ ಕೆಲಸಕ್ಕಾಗಿ ಆರೇಳು ತಿಂಗಳಿಂದ ಮಹಿಳೆಯೊಬ್ಬರನ್ನು ನೇಮಿಸಿಕೊಂಡಿದ್ದರು. ಆಕೆ, ಮನೆಯವರ ಗಮನಕ್ಕೆ ಬಾರದಂತೆ ಹಂತ-ಹಂತವಾಗಿ ಸುಮಾರು 25 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾಳೆ.
ಸುಮಾರು ಏಳು ತಿಂಗಳಿಂದ ಹರ್ಷ ಕುಟುಂಬದವರು ನೋಡಿಕೊಂಡಿಲ್ಲ. ಕೆಲ ದಿನಗಳ ಹಿಂದೆ ಕುಟುಂಬ ಸದಸ್ಯರು ತಿರುಪತಿಗೆ ಹೋಗಲು ಆಭರಣ ನೋಡಿಕೊಂಡಾಗ ಕಳವು ಬೆಳಕಿಗೆ ಬಂದಿದೆ.
ಈ ಮಧ್ಯೆ ಕೆಲಸದಾಕೆಗೆ ಕರೆ ಮಾಡಿದರೂ ಆಕೆ ಪ್ರತಿಕ್ರಿಯೆ ಇಲ್ಲ. ಸ್ವಿಚ್ಡ್ ಆಫ್ ಕೂಡ ಮಾಡಿಕೊಂಡಿದ್ದಾಳೆ. ಹೀಗಾಗಿ ಆಕೆ ಮೇಲೆ ಅನುಮಾನ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.