ವಜ್ರದ ಉಂಗುರವೊಂದರ ಸೊಗಸಿಗೆ ಮೊದಲ ಬಾರಿ ಮಾರು ಹೋದೆ. ಅದೆಂಥಾ ಹೊಳಪು! ಅದೆಂಥಾ ಝಗಮಗಿಸುವಿಕೆ! ಆಹಾ ಎಂದುಕೊಂಡೆ. ಆದರ ಹೊಳಪು ನನ್ನ ಕಣ್ಣುಗಳನ್ನು ಕೊರೈಸುತ್ತಿತ್ತು. ಆದರೆ ಏನು ಮಾಡುವುದು ಆ ಉಂಗುರುವನ್ನು ನಾನು ಒಂದು ಬಾರಿಯೂ ಧರಿಸಲೇ ಇಲ್ಲ ಎಂಬ ವ್ಯಥೆ ನನ್ನಲ್ಲಿದೆ. ಆ ವಜ್ರದ ಪ್ರದರ್ಶನದಿಂದ ಸಂತೋಷಕ್ಕಿಂತ ಆಘಾತವೇ ಹೆಚ್ಚು ನೀಡಿದೆ ಎಂದು ಅವಳು ತನ್ನಲ್ಲಿ ತಾನು ಗೊಣಗುತ್ತಿದ್ದಳು.
ನದಿಯ ಸೇತುವೆಯ ಮೇಲೆ ತಿರುಗಾಡುತ್ತಿರುವಾಗ ಅವಳ ಕೈಯ ಲ್ಲಿದ್ದ ವಜ್ರಖಚಿತ ಉಂಗುರು ಕೈಯಿಂದ ಜಾರಿ ನದಿಯ ಒಡಲು ಸೇರಿ ಬಿಟ್ಟಿತ್ತು. ಪ್ರಪಂಚಕ್ಕೆ ಪರಿಚಯವಾಗುವ ಮೊದಲೇ ಪ್ರಪಾತಕ್ಕೆ ಸಿಲುಕಿ ಪಾತಾಳಕ್ಕೆ ಸೇರಿದ್ದು ಅವಳನ್ನು ಇನ್ನಷ್ಟು ಅಸಹಾಯಕಳನ್ನಾಗಿ ಮಾಡಿತ್ತು.
ನದಿ ಎಂದರೆ ಅದೇನೂ ನೀರು ಇರುವ ನದಿಯಲ್ಲ. ಬರೀ ಮರಳು ತುಂಬಿರುವ ನದಿ. ಬಿಸಿಲಿಗೆ ಮರಳು ಕಾದಿತ್ತು. ಆ ಕಾದ ಮರಳಿನಲ್ಲಿ ನಾನು ನನ್ನ ಉಂಗುರು ಹುಡುಕಲು ಹೊರಟೆ ಆದರೆ ಯಾರು ಸಹಾಯಕ್ಕೆ ಬರಲಿಲ್ಲ. ನನ್ನ ಪ್ರಯತ್ನ ಇನ್ನೂ ಮುಂದುವರಿದರೂ ಸಾಧನೆ ಮಾತ್ರ ಶೂನ್ಯ. ಸೂರ್ಯನೇ ಆಗಲಿ, ಮರಗಿಡಗಳೇ ಆಗಲಿ ತನ್ನ ನೆರಳ ಬೆಂಬಲ ನೀಡಲೇ ಇಲ್ಲ.
ನಾನೂ ಹತಾಶಳಾಗಿ ಉಂಗುರದ ಆಸೆ ಬಿಟ್ಟು ಕೈ ಬಿಟ್ಟಿದ್ದೆ. ಆದರೆ ಮತ್ತೆ ಮತ್ತೆ ನೆನಪುಗಳ ಅಲೆ ಮಾತ್ರ ಬಂದು ಬಂದು ಬಡಿಯುತ್ತಲೇ ಇತ್ತು. ಅದೊಂದು ದಿನ ಅದೇ ಸೇತುವೆಯಲ್ಲಿ ಅದೇ ನಾನು. ಆದರೇ ನೆನಪುಗಳು ಮಾತ್ರ ಬೇರೆ. ನಡೆದು ಹೋಗುತ್ತಿದ್ದೆ. ನದಿಯ ಮರಳಿನಲ್ಲಿ ಮಣ್ಣಾಗಿದೆ ಎಂದು ತಿಳಿದಿದ್ದ ಉಂಗುರು ನನ್ನ ಕಾಲಿಗೆ ಬಂದು ಸಿಕ್ಕಿ ಕೊಂಡಿತು. ಅಯ್ಯೋ! ನಿರಾಳನಾದೆ. ಸಮಾಧಾನಗೊಂಡೆ ಕೊನೆಗೆ ನಾನು ಆಸೆ ಪಟ್ಟಿದ್ದ ಕೊನೆಗೆ ಉಂಗುರು ಸಿಕ್ಕಿತ್ತಲ್ಲ ಎಂದು.
ಆದರೆ ಹಿಂದಿನ ಹೊಳಪಿಲ್ಲ. ಝಗ ಮಗಿಸುವ ಬೆಳಕಿಲ್ಲ. ಹಾ!..ಹಾ..! ವಿಚಿತ್ರವೆಂದರೆ ನಾ ನನ್ನ ಕಣ್ಣಲ್ಲಿರಿಸಿದ ಆ ವಜ್ರದ ಪ್ರತೀ ಕಿರಣಗಳು ಇನ್ನು ನನ್ನೀ ಕಣ್ಣುಗಳಿಂದ ಮಾಸಿಯೇ ಇಲ್ಲ!!…ನನ್ನದೇ ಅದು?!!. ಜೀವನದಲ್ಲಿ ನಿರಾಸೆಯ ಕಾರ್ಮೋಡಗಳ ಮಧ್ಯೆ ಭರವಸೆ ಎಂಬ ಕೋಲ್ಮಿಂಚು ಇರುತ್ತದೆ ಎಂಬುದು ನನಗೆ ಉಂಗುರಿನಿಂದ ತಿಳಿಯಿತು.
ಸುಭಾಷಿಣಿ , ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ