Advertisement
ಈ ಸಲದ ದರ ಏರಿಕೆಗೆ “ಇಂಧನ ಹೊಂದಾಣಿಕೆ ಶುಲ್ಕ’ದ ಕಾರಣ ನೀಡಲಾಗಿದೆ. ಸಾಮಾನ್ಯವಾಗಿ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ವಿವಿಧ ವಿದ್ಯುತ್ ಉತ್ಪಾದನ ಕಂಪೆನಿಗಳಿಂದ ವಿದ್ಯುತ್ ಖರೀದಿಸುತ್ತವೆ. ಇದಕ್ಕೆ ತಗಲಿದ ವೆಚ್ಚವನ್ನು ಹೊಂದಾಣಿಕೆ ಶುಲ್ಕದ ರೂಪದಲ್ಲಿ ಗ್ರಾಹಕರಿಂದ ವಸೂಲು ಮಾಡಲು ಅವಕಾಶವಿದೆ. ಕೆಇಆರ್‌ಸಿ ಆದೇಶದ ಪ್ರಕಾರ, ಬೆಸ್ಕಾಂ ಪ್ರತಿ ಯೂನಿಟ್‌ಗೆ 43 ಪೈಸೆ, ಮೆಸ್ಕಾಂ 24 ಪೈಸೆ, ಸೆಸ್ಕ್ 34 ಪೈಸೆ, ಹೆಸ್ಕಾಂ ಮತ್ತು ಜೆಸ್ಕಾಂಗೆ ತಲಾ 35 ಪೈಸೆ ಹೆಚ್ಚಳ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ “ಹೊಂದಾಣಿಕೆ’ಯಲ್ಲಿ ಎಲ್ಲ ಪ್ರಕಾರದ ಗ್ರಾಹಕರಿಗೆ ಏಕರೂಪದ ಬರೆ ಬೀಳಲಿದೆ. ಅಂದರೆ ಗೃಹ ಬಳಕೆದಾರಿಂದ ಹಿಡಿದು ಬೃಹತ್ ಉದ್ದಿಮೆದಾರರವರೆಗೆ ಒಂದೇ ರೀತಿಯ ದರ ಹೆಚ್ಚಳ ಅನ್ವಯ ಆಗಲಿದೆ.
ಎಲ್ಲ ಎಸ್ಕಾಂಗಳು ಮೊದಲ ತ್ತೈಮಾಸಿಕ (ಏಪ್ರಿಲ್-ಜೂನ್) ದಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಗಮ (ಕೆಪಿಸಿಎಲ್), ಉಡುಪಿ ಪವರ್ ಕಾರ್ಪೊರೇಷನ್ ಲಿ., (ಯುಪಿಸಿಎಲ್), ಕೇಂದ್ರ ವಿದ್ಯುತ್ಛಕ್ತಿ ಉತ್ಪಾದನೆ ಕೇಂದ್ರ (ಸಿಜಿಎಸ್) ದಿಂದ 1,244 ಕೋಟಿ ರೂ. ಮೊತ್ತದ ವಿದ್ಯುತ್ ಖರೀದಿಸಿದ್ದು, ಈ ವೆಚ್ಚ ಸರಿದೂಗಿಸಲು ಮುಂದಿನ ಮೂರು ತಿಂಗಳಿಗೆ ಅನ್ವಯವಾಗುವಂತೆ ಸರಾಸರಿ ಪ್ರತಿ ಯೂನಿಟ್‌ಗೆ 75 ಪೈಸೆ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದವು. ಮಾಡಲು ಆದರೆ, ಕೆಇಆರ್‌ಸಿಯು ಆರು ತಿಂಗಳ ಅವಧಿಗೆ ಯೂನಿಟ್‌ಗೆ ಸರಾಸರಿ ಅಂದಾಜು 37.41 ಪೈಸೆಗೆ ಅನುಮತಿಸಿದೆ.
Related Articles
ದೊಡ್ಡ ಹೊಡೆತ
ದರ ಹೆಚ್ಚಳದಿಂದ ಸಾಮಾನ್ಯವಾಗಿ ಬೆಸ್ಕಾಂ ವ್ಯಾಪ್ತಿಯ ಒಬ್ಬ ಗೃಹ ಬಳಕೆದಾರ 100 ಯೂನಿಟ್ ವಿದ್ಯುತ್ ಬಳಸಿದರೆ, 43 ರೂ. ಹೆಚ್ಚುವರಿಯಾಗಿ ತೆರಬೇಕಿದೆ. ಅದೇ ರೀತಿ, ಒಬ್ಬ ಉದ್ಯಮಿ 1 ಲಕ್ಷ ಯೂನಿಟ್ ಬಳಸುತ್ತಿದ್ದರೆ, 4,300 ರೂ. ಹೆಚ್ಚುವರಿಯಾಗಿ ಪಾವತಿಸಬೇಕು. ಪ್ರಮುಖವಾಗಿ ಉದ್ದಿಮೆದಾರರಿಗೆ ಇದರಿಂದ ಹೊಡೆತ ಬೀಳಲಿದೆ. ಈಗಾಗಲೇ ಕಚ್ಚಾವಸ್ತುಗಳು, ತೈಲ ಬೆಲೆ ಏರಿಕೆಯಿಂದ ಸಾರಿಗೆ ಮತ್ತಿತರ ವೆಚ್ಚ ಹೆಚ್ಚಿದೆ. ಇದು ಕೈಗಾರಿಕೆಗಳು ನೆರೆ ರಾಜ್ಯಗಳ ಕಡೆ ಮುಖಮಾಡಲು ಅವಕಾಶ ನೀಡಬಹುದು ಎನ್ನುತ್ತಾರೆ ಉದ್ಯಮಿಗಳು.
Advertisement