Advertisement

ಜಾಲಿಗೆ ಗ್ರಾಪಂನಲಿ ಜ್ಞಾನಾರ್ಜನೆಗೆ ಹೈಟೆಕ್‌ ಮಾದರಿ ಲೈಬ್ರರಿ

02:16 PM Apr 11, 2023 | Team Udayavani |

ದೇವನಹಳ್ಳಿ: ಹೆಚ್ಚಿನ ಜ್ಞಾನಾರ್ಜನೆಯಾಗಲು ಜಾಲಿಗೆ ಗ್ರಾಪಂನಲ್ಲಿ ಹೈಟೆಕ್‌ ಮಾದರಿಯ ಗ್ರಂಥಾಲಯ ಸ್ಥಾಪನೆಯಾಗುವುದರ ಮೂಲಕ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಒಂದು ಪುಸ್ತಕ ಓದುವುದರಿಂದ ಇಡೀ ಇತಿಹಾಸವನ್ನೇ ತಿಳಿದುಕೊಳ್ಳಬಹುದು ಪುಸ್ತಕಗಳನ್ನು ಓದುವುದರಿಂದ ಹೆಚ್ಚು ಜ್ಞಾನಾರ್ಜನೆಯಾಗುತ್ತದೆ.

Advertisement

ಸಾರ್ವಜನಿಕ ಮತ್ತು ದಿವ್ಯಾಂಗ ಸ್ನೇಹಿ ಗ್ರಂಥಾಲಯ: ಓದುವ ಶಾಲಾ ಕಾಲೇಜು ಮಕ್ಕಳಿಂದ ಹಿರಿಯವರೆಗೂ, ಮಹಿಳೆಯರಿಗೂ ಮತ್ತು ವಿಶೇಷ ಚೇತರಿಗೂ ಸೇರಿದಂತೆ ಎಲ್ಲ ವರ್ಗದವರಿಗೂ ಇಷ್ಟ ವಾಗುವ ಆಸಕ್ತಿ ಇರುವ ಎಲ್ಲಾ ರೀತಿಯ ಕೃತಿ, ಕಾದಂಬರಿ, ಸಾಹಿತ್ಯ ಮತ್ತು ಸ್ಪರ್ಧಾತ್ಮಕ ಪುಸ್ತಕಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಮೂಲ ಸೌಕರ್ಯವನ್ನು ಕಲ್ಪಿಸುವ ಉದ್ದೇಶ ದಿಂದ ಸಾರ್ವಜನಿಕ ಮತ್ತು ದಿವ್ಯಾಂಗ ಸ್ನೇಹಿ ಗ್ರಂಥಾಲಯವನ್ನು ತೆರೆಯಲಾಗಿದೆ.

10 ಲಕ್ಷರೂ ವೆಚ್ಚದಲ್ಲಿ ಸುಸಜ್ಜಿತ ಮತ್ತು ಹೈಟೆಕ್‌ ಮಾದರಿಯ ಗ್ರಂಥಾಲಯ: ತಾಲೂಕಿನ ಜಾಲಿಗೆ ಗ್ರಾಪಂ ಆವರಣದಲ್ಲಿಯೇ 10 ಲಕ್ಷರೂ. ವೆಚ್ಚದಲ್ಲಿ ಸುಸಜ್ಜಿತ ಮತ್ತು ಹೈಟೆಕ್‌ ಮಾದ ರಿಯ ಗ್ರಂಥಾಲಯನ್ನು ಸ್ಥಾಪಿಸಲಾಗಿದ್ದು, ವಿಶೇಷವಾಗಿ ಈ ಗ್ರಂಥಾಲಯವು ಡಿಜಿಟಲೀಕರಣ ವಾಗಿದ್ದು, ಸುಮಾರು 6ಲಕ್ಷ ಆನ್‌ಲೈನ್‌ ಇ-ಪುಸ್ತಕಗಳು ಮತ್ತು 3 ಸಾವಿರ ಪುಸ್ತಕಗಳನ್ನು ಇಡಲಾಗಿದ್ದು, ಸಾರ್ವಜನಿಕರಿಗೆ, ಮಕ್ಕಳಿಗೆ ಅನುಕೂಲವಾಗುವ ದೃಷ್ಠಿಕೋನವನ್ನಿಟ್ಟು ಕೊಂಡು ಇಂತಹದೊಂದು ಗ್ರಂಥಾಲಯವನ್ನು ಮಾಡಲಾಗಿದೆ. ಈ ಗ್ರಂಥಾಲಯದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿ ಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ವನ್ನು ಪಡೆದುಕೊಳ್ಳುವುದರ ಜತೆಗೆ ಉನ್ನತ ವ್ಯಾಸಂಗ ಮಾಡುವ ಯುವಕ/ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಲುವಾಗಿ ಗ್ರಂಥಾಲಯ ದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಸ್ಪರ್ಧಾತ್ಮಕ ಪುಸ್ತಕಗಳನ್ನು ಇಡಲಾಗಿದೆ. ವಿಶೇಷ ಚೇತನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗ್ರಂಥಾಲಯಕ್ಕೆ ರ್‍ಯಾಂಪ್‌ ಅಳವಡಿಸಿದ್ದು, ವೀಲ್‌ಛೇರ್‌ ಸೌಲಭ್ಯವಿದೆ. ಅಂಧಮಕ್ಕಳಿಗೆ ಅನುಕೂಲವಾಗಲೆಂದು ಬ್ರೈಲ್‌ ಲಿಪಿಯುಳ್ಳ ಕಂಪ್ಯೂಟರ್‌ ಸಹ ಅಳವಡಿಸಲಾಗಿದೆ.

ಕಲಿಕೆಗೆ ಪೂರಕ ವಾತಾವರಣ: ಗ್ರಂಥಾಲಯದ ಆವರಣದ ಹೊರಗೋಡೆಯ ಮೇಲೆ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಬಾಬೂಜಿ ಸೇವಾ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸುಸಜ್ಜಿತವಾದ ಕಟ್ಟಡದಲ್ಲಿ ಗಾಳಿ, ಬೆಳಕು ವ್ಯವಸ್ಥೆ ಪೂರಕ ವಾತಾವರಣ ಕಲ್ಪಿಸಿರುವುದು ವಿಶೇಷವಾಗಿದೆ. ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದಾ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌, ಶಿವರಾಮಕಾರಂತ, ವಿ.ಕೃ.ಗೋಕಾಕ್‌, ಯು.ಆರ್‌.ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಡಾ. ಚಂದ್ರಶೇಖರ್‌ ಕಂಬಾರ ಭಾವಚಿತ್ರಗಳನ್ನು ಅಳವಡಿ ಸಲಾಗಿದೆ. ದೇವನಹಳ್ಳಿ ತಾಲೂಕಿಗೆ ಸಂಬಂಧಿಸಿದ ಐತಿ ಹಾಸಿಕ ಫೋಟೋಗಳು, ರೈತರು ಬೆಳೆಯುವ ಹೂ- ಹಣ್ಣು-ತರಕಾರಿ ಪೋಟೋಗಳು ಸೇರಿದಂತೆ ಚಿಕ್ಕ ಮಕ್ಕಳಿಗೆ ಅನುಕೂಲವಾಗಲೆಂದು ಕನ್ನಡ ವರ್ಣ ಮಾಲೆಯ ಫ‌ಲಕಗಳನ್ನು ಹಾಕಲಾಗಿದೆ.

ಒಟ್ಟಾರೆಯಾಗಿ ಡಿಜಿಟಲೈಸ್ಡ್ ಗ್ರಂಥಾಲಯದಲ್ಲಿ ಏನೆಲ್ಲಾ ಇರಬೇಕೋ ಅವೆಲ್ಲವನ್ನು ಅಳವಡಿಸುವುದರ ಮೂಲಕ ಗ್ರಂಥಾಲಯದ ಹೊರಾಂಗಣದಲ್ಲಿ ವಯೋ ವೃದ್ಧರಿಗೆ,ವಯಸ್ಕರಿಗೆ ಓದುವ ಆಸಕ್ತಿಯನ್ನು ಹೆಚ್ಚಿ ಸಲು ಪ್ರತ್ಯೇಕ ಆಸನಗಳ ಸೌಲಭ್ಯ ನೀಡಲು ಗ್ರಾಪಂ ಯಿಂದ ವಿನೂತನ ಯೋಜನೆ ರೂಪಿಸಿಕೊಳ್ಳಲಾಗಿದೆ.

Advertisement

ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲೀಕರಣ ಗ್ರಂಥಾಲಯವಾಗಿರುವುದರಿಂದ ಕಂಪ್ಯೂಟರ್‌ ಶಿಕ್ಷಣ ಪಡೆಯಲು ನಗರ ಪ್ರದೇಶಗಳಿಗೆ ಹೋಗುವುದು ತಪ್ಪಿ ದಂತಾಗಿದೆ. ಕಲಿಕೆಗೆ ಪೂರಕವಾಗಿ ಸಾಮಾನ್ಯ ಜ್ಞಾನದ ಪುಸ್ತಕಗಳಿರುವುದರಿಂದ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ. ಈಗಾಗಲೇ ಸುತ್ತಮುತ್ತಲಿನ ಹಳ್ಳಿಗಳಿಂದ ಮಕ್ಕಳು, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಆಗಮಿಸಿ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಿ ರುವುದು ಸಂತಸದ ವಿಷಯ. ನಯನ.ಬಿ.ಎಸ್‌, ಗ್ರಂಥಾಲಯ ಮೇಲ್ವಿಚಾರಕಿ

10ಲಕ್ಷ ರೂ.ವೆಚ್ಚದಲ್ಲಿ ಸಾರ್ವಜನಿಕ ಮತ್ತು ದಿವ್ಯಾಂಗ ಸ್ನೇಹಿ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಈಗಾಗಲೇ 700ಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಹಲವಾರು ವಿದ್ಯಾವಂ ತರಿಗೆ ಇಂತಹ ಗ್ರಂಥಾಲಯದ ಅವಶ್ಯಕತೆ ಹೆಚ್ಚು ಇರುತ್ತದೆ. ಸ್ಪರ್ಧಾಜಗತ್ತಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನಿಟ್ಟು ಹಲವಾರು ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ, ವಿಶೇಷ ಚೇತನರಿಗೆ ಮತ್ತು ಅಂದರಿಗೆ ಸೇವೆ ನೀಡುವ ಗ್ರಂಥಾಲಯವಾಗಿದೆ. ಇದರ ಸದುಪಯೋಗವನ್ನು ಗ್ರಾಪಂ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬರು ಪಡೆದುಕೊಳ್ಳಬಹುದು. ಪ್ರಕಾಶ್‌, ಪಿಡಿಒ, ಜಾಲಿಗೆ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next