Advertisement

ಅಬ್ಬಕ್ಕಳ ಆಡಳಿತದಲ್ಲಿ ಸಾಮರಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯ-ವಿಚಾರ ಸಂಕಿರಣ

01:03 PM Feb 13, 2024 | Team Udayavani |

ಉಳ್ಳಾಲ: ಧರ್ಮ ಸಾಮರಸ್ಯ, ಕೃಷಿ ಅನನ್ಯತೆ, ಮಹಿಳೆಯರ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಐದು ಶತಮಾನಗಳ ಹಿಂದೆ ಆಡಳಿತ ನಡೆಸಿದ್ದ ವೀರರಾಣಿ ಅಬ್ಬಕ್ಕ ಅವರ ಅಂದಿನ ಆಡಳಿತ ಇಂದಿನ ಸಮಕಾಲಿನ ಸ್ಥಿತಿಗೆ ಒಳ್ಳೆಯ ಪ್ರತಿನಿಧಿಯಾಗಿದ್ದಾರೆ ಎಂದು ಎಂದು ಜನಪದ ವಿದ್ವಾಂಸ ಡಾ| ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು.

Advertisement

ಮಂಗಳೂರಿನಲ್ಲಿ ಫೆ. 25ರಿಂದ 27ರವರೆಗೆ ನಡೆಯಲಿರುವ ಡಿವೈಎಫ್‌ಐ 12 ನೇ ರಾಜ್ಯ ಸಮ್ಮೇಳನದ ಅಂಗವಾಗಿ ಡಿವೈಎಫ್‌ಐ ಉಳ್ಳಾಲ ತಾಲೂಕು ಮಟ್ಟದ ಸ್ವಾಗತ ಸಮಿತಿಯ ಆಶ್ರಯದಲ್ಲಿ ರವಿವಾರ ಮುನ್ನೂರು ಯುವಕ ಮಂಡಲ ಸಭಾಂಗಣದಲ್ಲಿ “ತುಳುನಾಡಿನ ವರ್ತಮಾನದ ಸವಾಲುಗಳು ಹಾಗೂ ಉಳ್ಳಾಲದ ರಾಣಿ ಅಬ್ಬಕ್ಕನ ಪ್ರತಿರೋಧದ ಮರು ವ್ಯಾಖ್ಯಾನದ ವಿಚಾರವಾಗಿ ನಡೆದ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿ ಮಾತನಾಡಿದರು.

ಅಬ್ಬಕ್ಕಳ ಆಡಳಿತದಲ್ಲಿ ಸಾಮರಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಆ ಕಾಲದಲ್ಲಿ ಎಲ್ಲ ಜಾತಿ, ಧರ್ಮದ ಜನರನ್ನು ತನ್ನ ಸೈನ್ಯ, ಆಡಳಿತದಲ್ಲಿ ಸೇರಿಸಿಕೊಂಡು ಎಲ್ಲ ಧರ್ಮದವರಿಗೂ ಮಹತ್ವವನ್ನು ಕೊಡುತ್ತಿದ್ದರು. ಕಂದಾಯವನ್ನು ವಸೂಲಿ ಮಾಡಿ ಜನರ ಅಭಿವೃದ್ಧಿಗೆ ನೀಡುತ್ತಿದ್ದ ಅವರು ಧರ್ಮ ಸಾಮರಸ್ಯ, ಕರಾವಳಿಯ ಅನನ್ಯತೆಯನ್ನು ಕಾಪಾಡಿದವರು.

ಕೃಷಿಗೂ ಉತ್ತೇಜನ ನೀಡುತ್ತಿದ್ದ ಅವರು ಮಹಿಳೆಯರ ಸ್ವಾತಂತ್ರ್ಯ ಮತ್ತುಸ್ವಾಭಿಮಾನದ ಪ್ರತೀಕವಾಗಿದ್ದು,.ಇಂದಿಗೂ ಅವರ ಆಡಳಿತ ಪ್ರಸ್ತುತತೆಯನ್ನು ಪಡೆದುಕೊಂಡಿದೆ ಎಂದರು.

ಖ್ಯಾತ ಸಾಹಿತಿ ವಿಮರ್ಶಕ ಪ್ರೊ| ಕೆ. ಫಣಿರಾಜ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ಶಿವರಾಮ್‌ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಡಾ| ಕೃಷ್ಣಪ್ಪ ಕೊಂಚಾಡಿ ವಹಿಸಿದ್ದರು.

Advertisement

ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಬಬ್ಬುಕಟ್ಟೆ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ ಪದ್ಮಾವತಿ ಶೆಟ್ಟಿ, ಡಿವೈಎಫ್‌ಐ ಉಳ್ಳಾಲ ತಾಲೂಕು ಅಧ್ಯಕ್ಷ ರಝಾಕ್‌ ಮೊಂಟೆಪದವು, ಕೋಶಾಧಿಕಾರಿ ನಿತಿನ್‌ ಕುತ್ತಾರ್‌ ಉಪಸ್ಥಿತರಿದ್ದರು.ಸಮಿತಿಯ ಕಾರ್ಯಾಧ್ಯಕ್ಷ ಡಾ| ಜೀವನ್‌ ರಾಜ್‌ ಕುತ್ತಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್‌ ಹರೇಕಳ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next