ಹುಣಸೂರು: ಬೀದಿನಾಯಿಗಳ ದಾಳಿಗೆ ಜಿಂಕೆಯೊಂದು ತೀವ್ರಗಾಯಗೊಂಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.
ನಗರದ ಪಂಪ್ ಹೌಸ್ ಕಡೆಯಿಂದ ಆಹಾರ ಅರಸಿ ಬಂದಿದ್ದ ಜಿಂಕೆಯು ಕೋಟೆ ರಸ್ತೆಯ ಮಾಲತೇಶ್ ಬಾರ್ ಪಕ್ಕದ ತೋಟದಲ್ಲಿ ಸೇರಿಕೊಂಡಿತ್ತು. ಇದನ್ನು ಕಂಡ ನಾಯಿಗಳ ಹಿಂಡು ಜಿಂಕೆಯನ್ನು ಅಟ್ಟಾಡಿಸಿವೆ.
ಇದನ್ನೂ ಓದಿ: ವಿಷ್ಣುವರ್ಧನ್ ಓದಿದ ಶಾಲೆ ಉಳಿಸುವಂತೆ ಪ್ರಣೀತಾ ಮನವಿ
ನಾಯಿಗಳ ಕಾಟ ತಾಳಲಾರದೆ ಪಕ್ಕದ ಲಾಲ್ ಬಂದ್ ಬೀದಿಯ ಜಂಡೆ ಸರ್ಕಲ್ ಬಳಿ ಬಂದ ಜಿಂಕೆಯನ್ನು ಕಂಡ ಯುವಕರು ನಾಯಿಗಳನ್ನು ಓಡಿಸಿ. ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಸಿಬ್ಬಂದಿಗಳೊಂದೊಗೆ ಬಂದ ಆರ್ ಎಫ್ ಓ ಸಂದೀಪ್, ಗಾಯಗೊಂಡಿದ್ದ ಜಿಂಕೆಯನ್ನು ವಶಕ್ಕೆ ಪಡೆದರು. ಗಾಯಗೊಂಡಿರುವ ಜಿಂಕೆಗೆ ಕಲ್ ಬೆಟ್ಟ ನಾಟಾ ಸಂಗ್ರಹಲಾಯದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಈ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಳಕೆದಾರರ ಡೇಟಾ ಸಂಗ್ರಹಿಸಲು ಮುಗಿಬಿದ್ದಿವೆ ಈ ಆ್ಯಪ್ ಗಳು; ಗೂಗಲ್ ಪಾಲೆಷ್ಟು ಗೊತ್ತಾ ?