Advertisement

ಡ್ರೋನ್‌ ಸೆರೆ ಹಿಡಿದ ಹೃದಯ ಕಲಕುವ ದೃಶ್ಯ

03:37 PM Apr 28, 2020 | sudhir |

ಮನೌಸ್‌: ವಿಶ್ವದೆಲ್ಲೆಡೆ ಸೋಂಕಿನಿಂದ ಸಾವಿಗೀಡಾತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ವಾಯವ್ಯ ಬ್ರೆಜಿಲ್‌ನ ಮನೌಸ್‌ನಲ್ಲಿ ಶ್ಮಶಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಶವಪೆಟ್ಟಿಗೆಗಳನ್ನು ಒಟ್ಟಿಗೆ ತಂದು ಸಾಮೂಹಿಕ ಅಂತ್ಯ ಸಂಸ್ಕಾರ ಮಾಡುತ್ತಿರುವ ಹೃದಯ ಕಲಕುವ ದೃಶ್ಯ ಡ್ರೋನ್‌ ಕೆಮರಾ ಸೆರೆ ಹಿಡಿದಿದೆ.

Advertisement

ಮೃತ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕಾಗಿ ಜೆಸಿಬಿ ಯಂತ್ರದ ಮೂಲಕ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆಯಲಾಗುತ್ತಿದೆ. ಲೆಕ್ಕವೇ ಇಲ್ಲದಂತೆ ಬಂದ ಶವಗಳನ್ನು ಸಾಮೂಹಿಕವಾಗಿ ಇರಿಸಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಸಾಂಕ್ರಾಮಿಕ ರೋಗದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನಕ್ಕೆ ಸರಾಸರಿ 30ರಿಂದ 100 ಜನ ಬಲಿಯಾಗುತ್ತಿದ್ದಾರಂತೆ. ಬ್ರೆಜಿಲ್‌ನಲ್ಲಿ ಇಲ್ಲಿಯವರೆಗೆ 63 ಸಾವಿರ ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, 4,298 ಜನ ಬಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next