ಮಾಡುತ್ತಿದ್ದಾಗ ಅಟೆಂಡರ್ ಶ್ರೀನಿವಾಸ್ ತನ್ನ ಪತ್ನಿಯ ಬಗ್ಗೆ ಹೀಗೆ ಹೇಳುತ್ತಾನೆ. ಜನಾರ್ಧನನಿಗೆ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ತಟ್ಟೆಯಲ್ಲಿದ್ದ ಪಾಯಸ ಕಹಿಯಾದಂತಹ ಅನುಭವ. ಇಷ್ಟು ದಿನ ತಾನು ವರ್ತಿಸಿದ ರೀತಿಯ ಬಗ್ಗೆ ಜನಾರ್ಧನನಲ್ಲಿ ಜಿಗುಪ್ಸೆ ಮೂಡುತ್ತದೆ. ಕನ್ನಡ ಲೆಕ್ಚರರ್ ಜನಾರ್ಧನ ಮಂಕಾಗಿ ಮೇಲೇಳುತ್ತಾನೆ. ಚಿತ್ರಮಂದಿರಲ್ಲಿ
ಮೌನ ಆವರಿಸುತ್ತದೆ. ಕಣ್ಣಂಚಲಿ ಒಂದನಿ ಜಿನುಗಿರುತ್ತದೆ.
Advertisement
“ಒಂದು ಮೊಟ್ಟೆಯ ಕಥೆ’ ನಿಮಗೆ ಇಷ್ಟವಾಗುವುದೇ ಇಂತಹ ಸೂಕ್ಷ್ಮ ಸಂಗತಿಗಳಿಂದ. ಯಾವುದೇ ಅಬ್ಬರವಿಲ್ಲದೇ, “ಕಮರ್ಷಿಯಲ್ ಅಂಶಗಳನ್ನು’ ಸಿನಿಮಾ ತುಂಬಾ ಮೆತ್ತಿಕೊಳ್ಳದೇ ಮಾಡಿದ ಒಂದು ನೀಟಾದ ಹಾಗೂ ಅಷ್ಟೇ ಸೂಕ್ಷ್ಮವಾದ ಸಿನಿಮಾ “ಒಂದು ಮೊಟ್ಟೆಯ ಕಥೆ’. ಇಲ್ಲಿ ಕಾಮಿಡಿ ಇದೆ, ಬದುಕಿನ ವ್ಯಂಗ್ಯವಿದೆ, ತನ್ನದಲ್ಲದ ತಪ್ಪಿಗೆ ಅನುಭವಿಸುವ ಯಾತನೆ ಇದೆ, ಖುಷಿ-ದುಃಖದ ಸಮ್ಮಿಲನವಿದೆ. ಆ ಮಟ್ಟಿಗೆ “ಒಂದು ಮೊಟ್ಟೆಯ ಕಥೆ’ ತುಂಬಾ ಮೆಚೂÂರ್x ಸಿನಿಮಾ.
ಕಾರಣ ಅದನ್ನು ಕಟ್ಟಿಕೊಟ್ಟ ರೀತಿ. ನಿಮ್ಮ ಮನೆ ಪಕ್ಕದಲ್ಲೇ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುವ ಮಟ್ಟಕ್ಕೆ ಸಿನಿಮಾವನ್ನು ತುಂಬಾ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಗಾಂಧಿನಗರದ ಸಿನಿಮಾ ಗ್ರಾಮರ್ ಅನ್ನು ಬದಿಗೊತ್ತಿ, ಕಥೆ
ಏನು ಬಯಸುತ್ತೋ ಅಷ್ಟನ್ನೇ ಆ ಪರಿಸರಕ್ಕೆ ಹೊಂದುವಂತೆ ನೀಡಿರುವುದು ಕೂಡಾ ಸಿನಿಮಾದ ಪ್ಲಸ್. ದೇಹ ಸೌಂದರ್ಯಕ್ಕಿಂತ ಹೃದಯ ಸೌಂದರ್ಯ ಮುಖ್ಯ ಎಂಬ ಮೂಲ ಸಂದೇಶದ ಜೊತೆಗೆ ಕನ್ನಡ, ಕನ್ನಡ ಪ್ರಾಧ್ಯಾಪಕರ ಬಗೆಗಿನ ತಾತ್ಸಾರ, ಕೆಲ ಜ್ಯೋತಿಷಿಗಳ ಸುಳ್ಳು ಸೇರಿದಂತೆ ಇನ್ನೂ ಅನೇಕ ವಿಷಯಗಳು ಅಲ್ಲಲ್ಲಿ ಬಂದು ಹೋಗುತ್ತವೆ. ಇಡೀ ಚಿತ್ರ ಕೆಲವೇ ಕೆಲವು ಪಾತ್ರಗಳ ಸುತ್ತ ಸುತ್ತುತ್ತದೆ. ಜನಾರ್ಧನನ ಫ್ಯಾಮಿಲಿ, ಆತನ ಲೈಫನಲ್ಲಿ ಬರುವ ಮೂವರು ಹುಡುಗಿಯರು ಹಾಗೂ ಅಟೆಂಡರ್ ಶ್ರೀನಿವಾಸ್. ಇಷ್ಟು ಪಾತ್ರಗಳನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಡಲಾಗಿದೆ. ಇಲ್ಲಿ ಜನಾರ್ಧನ ಹೀರೋ. ಆದರೆ, ಹೀರೋಯಿಸಂ ಇಲ್ಲ. ಆತನ ಭಾವನೆಗಳೇ ಈ ಸಿನಿಮಾದಲ್ಲಿ ಹೀರೋಯಿಸಂ
ಮೆರೆದಿವೆ. ಚಿತ್ರದಲ್ಲಿ ಬರುವ ಕೆಲವು ಸಂಭಾಷಣೆಗಳು, ಸನ್ನಿವೇಶಗಳು ನಿಮಗೆ ಆಗಾಗ ನಗುತರಿಸುತ್ತಿರುತ್ತದೆ. ಒಂದು ಕ್ಷಣ ಜನಾರ್ದನನ ಪಾತ್ರದಲ್ಲಿ ನಿಮ್ಮನ್ನ ಊಹಿಸಿಕೊಂಡರೆ ಖಂಡಿತಾ, ನಿಮಗೆ ಈ ಚಿತ್ರ ಕಾಡುತ್ತದೆ. ಆ ಮಟ್ಟಿಗೆ ಇದು
ನೈಜತೆಗೆ ಹಿಡಿದ ಕನ್ನಡಿಯಂತಿದೆ.
Related Articles
μàಲ್ ಕೊಟ್ಟಿರೋದು ಹಿನ್ನೆಲೆ ಸಂಗೀತ. ಯಾವುದೇ ಅಬ್ಬರವಿಲ್ಲದ ಮತ್ತು ಕಥೆಯ ತೂಕವನ್ನು ಹೆಚ್ಚಿಸುವಂತೆ ಹಿನ್ನೆಲೆ ಸಂಗೀತ ನೀಡಿದ್ದಾರೆ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್. ಚಿತ್ರದ ನಿರೂಪಣೆ ಕೆಲವೊಮ್ಮೆ
ನಿಧಾನವಾಯಿತೇನೋ ಎಂಬ ಭಾವನೆ ಮೂಡುವಷ್ಟರಲ್ಲಿ ಮತ್ತೂಂದು ದೃಶ್ಯ ಅದನ್ನು ಮರೆಮಾಚುತ್ತದೆ.
Advertisement
ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರೂ ಅದಕ್ಕೆ ನ್ಯಾಯ ಒದಗಿಸೋದು ಕಲಾವಿದರು. ಆ ಮಟ್ಟಿಗೆ ಮೊದಲ ಬಾರಿಗೆ ನಟಿಸಿದ ರಾಜ್ ಶೆಟ್ಟಿಯವರನ್ನು ಮೆಚ್ಚಲೇಬೇಕು. ನಿರ್ದೇಶಕ ಹಾಗೂ ನಟನೆಯನ್ನು ಅವರು ಹೆಗಲ ಮೇಲೆ ಹೊತ್ತುಕೊಂಡಿದ್ದು, ಎರಡಕ್ಕೂ ನ್ಯಾಯ ಸಲ್ಲಿಸಿದ್ದಾರೆ.
ಬೋಳು ತಲೆಯ ಜನಾರ್ಧನ ಅನುಭವಿಸುವ ನೋವು, ಅವಮಾನ, ಸಣ್ಣ ಸಣ್ಣ ಖುಷಿಯನ್ನು ಅವರು ಹಿಡಿದಿಟ್ಟ ಪರಿಅದ್ಭುತ. ಇಡೀ ಪಾತ್ರವನ್ನು ಅವರು ಆವರಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬರುವ ಪ್ರತಿ ಪಾತ್ರಗಳು ನ್ಯಾಯ ಒದಗಿಸಿವೆ. ಚಿತ್ರದಲ್ಲಿ ಬರುವ ಹಾಡಿನ ತುಣುಕುಗಳು ಕೂಡಾ ಇಷ್ಟವಾಗುತ್ತವೆ. – ರವಿಪ್ರಕಾಶ್ ರೈ