Advertisement

I.N.D.I.A: ಇಂಡಿಯಾ ಒಕ್ಕೂಟದಲ್ಲಿ ಹೆಚ್ಚಿದ ಬಿರುಕು

11:43 PM Nov 02, 2023 | Team Udayavani |

ಹೊಸದಿಲ್ಲಿ: ಬಿಜೆಪಿಯನ್ನು ಒಗ್ಗಟ್ಟಾಗಿ ಎದುರಿಸಿ ಸೋಲಿಸಬೇಕೆಂಬ ಮಹದುದ್ದೇಶ ದಿಂದ ರೂಪು ಗೊಂಡ ಪ್ರತಿಪಕ್ಷಗಳ ಐ.ಎನ್‌.ಡಿ.ಐ.ಎ. ಮೈತ್ರಿ ಕೂಟದಲ್ಲಿ ಬಿರುಕಿನ ರೇಖೆಗಳು ಮತ್ತಷ್ಟು ಹೆಚ್ಚಾಗಿದೆ ಎಂಬ ಬಗ್ಗೆ ಸಂಶಯ ಮೂಡಲಾರಂಭಿಸಿದೆ. ವಿಪಕ್ಷಗಳ ಕೆಲವು ನಾಯಕರ ಹೇಳಿಕೆಗಳು ಇಂಥ ದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಲೋಕಸಭೆ ಚುನಾವಣೆಗೂ ಮುನ್ನವೇ ಮೈತ್ರಿ ಕೂಟದ ಲ್ಲಿರುವ ಪಕ್ಷಗಳು “ನಾನೊಂದು ತೀರ, ನೀನೊಂದು ತೀರ” ಎಂದು ಹಾಡತೊಡಗಿವೆ.

Advertisement

ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಈಗಾಗಲೇ ವೈಮನಸ್ಸು ಜಗ ಜ್ಜಾಹೀರಾಗಿದೆ. ಈಗ ಇದರ ಮುಂದಿನ ಭಾಗವೆಂಬಂತೆ, ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ದಿಂದ 80 ಕ್ಷೇತ್ರಗಳ ಪೈಕಿ 65ರಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಎಸ್‌ಪಿ ಮೂಲಗಳು ತಿಳಿಸಿವೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೂ ಅಂತಿ ಮಗೊಂಡಿದೆ ಎಂದೂ ಹೇಳಿದೆ. ಅಂದರೆ ಉಳಿದ 15 ಕ್ಷೇತ್ರಗಳನ್ನು ಮಾತ್ರವೇ ಮೈತ್ರಿಕೂಟದ ಇತರ ಪಕ್ಷಗಳಿಗೆ ಬಿಟ್ಟುಕೊಡುತ್ತೇವೆ ಎಂಬ ಸುಳಿವನ್ನು ಎಸ್‌ಪಿ ನೀಡಿದೆ.

ಮತ್ತೂಂದು ಅಚ್ಚರಿಯೆಂದರೆ, “ಒಗ್ಗಟ್ಟಾಗಿ ಬಿಜೆಪಿಯನ್ನು ಎದುರಿಸುವ ಮೈತ್ರಿಕೂಟದ ಪ್ರಯತ್ನವು ವಿಫ‌ಲವಾದರೆ, ಎಸ್‌ಪಿ ಏಕಾಂಗಿಯಾಗಿ ಬಿಜೆಪಿ ವಿರುದ್ಧ ಹೋರಾಡಲಿದೆ” ಎಂದು ಪಕ್ಷದ ಮೂಲಗಳು ಹೇಳಿರುವುದು ಐ.ಎನ್‌.ಡಿ.ಐ.ಎ.ಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವು ದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. 1999 ರಿಂದ 2014ರ ವರೆಗೆ ಕಾಂಗ್ರೆಸ್‌ನ ಭದ್ರ ಕೋಟೆಯೆಂದೇ ಕರೆಯಲ್ಪಟ್ಟಿದ್ದ ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರಲು ಎಸ್‌ಪಿ ನಿರ್ಧರಿಸಿದೆ.

ಲೋಕಸಭೆ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿ ಸಿದ್ದೇವೆ. ಐದು ರಾಜ್ಯಗಳ ಚುನಾವಣೆಯನ್ನೂ ಮರೆಯುವಂತೆ ಇಲ್ಲ.ಮುಂಬಯಿಯಲ್ಲಿ ನಡೆದಿದ್ದ ಸಭೆಯಲ್ಲಿ ಕೆಲವು ಸಮಿ ತಿಗಳು ರಚನೆಯಾಗಿವೆ. ಪಂಚ ರಾಜ್ಯ ಚುನಾವಣೆ ಬಳಿಕ ಅವು ಸಕ್ರಿಯವಾಗಲಿವೆ.

~ ಸಯ್ಯದ್‌ ನಾಸಿರ್‌ ಹುಸೇನ್‌, ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ

Advertisement

ಕೈಗೆ ಪಂಚ ಚುನಾವಣೆಯೇ ಹೆಚ್ಚು: ನಿತೀಶ್‌
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಬಿಹಾರ ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌ ಗುರುವಾರ ಪಟ್ನಾದಲ್ಲಿ ನಡೆದ ಸಿಪಿಐ ರ್ಯಾಲಿಯಲ್ಲೇ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ಹೊರಹಾಕಿ ದ್ದಾರೆ. “ಬಿಜೆಪಿ ವಿರುದ್ಧ ಹೋರಾಡಲೆಂದು ಹೊಸ ಮೈತ್ರಿಕೂಟವನ್ನು ಎಲ್ಲರೂ ಸೇರಿ ರಚಿಸಿದ್ದೇವೆ. ಆದರೆ ಈ ಮೈತ್ರಿಕೂಟದಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ಕಾಂಗ್ರೆಸ್‌ಗೆ ಪಂಚರಾಜ್ಯ ಚುನಾವಣೆಗಳ ಮೇಲೆಯೇ ಹೆಚ್ಚು ಆಸಕ್ತಿ ಇರುವಂತಿದೆ. ವಿಪಕ್ಷಗಳ ಮೈತ್ರಿ ವಿಚಾರದಲ್ಲಿ ಇನ್ನೂ ಮುಂದಿನ ಹೆಜ್ಜೆ ಇಡಲು ವಿಳಂಬ ಮಾಡುತ್ತಿದೆ’ ಎಂದು ಹೇಳಿದ್ದಾರೆ. ಸಿಪಿಐ ನಾಯಕರ ಸಮ್ಮುಖದಲ್ಲೇ ನಿತೀಶ್‌ ಈ ಮಾತುಗಳನ್ನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿಯನ್ನು ಎದುರಿಸುವ ನಿಟ್ಟಿನಲ್ಲಿ ಯಾವುದೇ ರೀತಿ ಯ ವ್ಯೂಹ ರಚನೆಯಲ್ಲಿ ಪ್ರಗತಿಯಾಗಿಲ್ಲ ಎಂದು ಹೇಳಿದ ನಿತೀಶ್‌, “ನಮ್ಮ ಮೈತ್ರಿ ಕೂಟ ಆರಂಭದ ದಿನಗಳಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಅನಂತರ ದಿನಗಳಲ್ಲಿ ಅದ ತೀವ್ರತೆಯನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿಲ್ಲ ಎಂದಿದ್ದಾರೆ.

ಲೂಟಿ ಮಾಡಿದವರಿಗೆ ಶಿಕ್ಷೆ: ಪ್ರಧಾನಿ
ಕಾಂಗ್ರೆಸ್‌ ಮತ್ತು ಅಭಿವದ್ಧಿ ಜತೆಯಾಗಿ ಹೋಗಲು ಸಾಧ್ಯವೇ ಇಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಛತ್ತೀಸ್‌ಗಢದ ಕಾಂಕೇರ್‌ನಲ್ಲಿ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು. ಭೂಪೇಶ್‌ ಭಗೇಲ್‌ ನೇತೃತ್ವದ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ, 5 ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ನ ನಾಯಕರು, ಅವರ ಬಂಧುಗಳು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಘೋಷಿಸಿದ್ದಾರೆ. ಸರಕಾರಿ ಉದ್ಯೋಗ ನೇಮಕದಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ. ಈ ಮೂಲಕ ರಾಜ್ಯದ ಯುವ ಜನತೆಗೆ ಕಾಂಗ್ರೆಸ್‌ ದ್ರೋಹ ಬಗೆದಿದೆ ಎಂದರು. ಮೋದಿ ಮತ್ತು ಬಿಜೆಪಿ ನೀವು ಮತ್ತು ನಿಮ್ಮ ಕುಟುಂಬದವರ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದೆ. ನಿಮಗೆ ಮೋಸ ಮಾಡಿದವರು ಎಷ್ಟೇ ಪ್ರಬಲರಾಗಿರಲಿ. ಅವರ ವಿರುದ್ಧ ಕಠಿನ ಕ್ರಮ ನಿಶ್ಚಿತ ಎಂದು ಹೇಳಿದರು.

ಮೂರನೇ ಪಟ್ಟಿಯಲ್ಲಿ ಧಾರ್ಮಿಕ ನಾಯಕ
ನ.25ರಂದು ನಡೆಯಲಿರುವ ರಾಜಸ್ಥಾನ ಚುನಾವಣೆಗಾಗಿ ಬಿಜೆಪಿ 58 ಮಂದಿ ಇರುವ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಹವಾಮಹಲ್‌ ಕ್ಷೇತ್ರದಿಂದ ಹತೋಜ್‌ ಧಾಮದ ಧರ್ಮಗುರು ಬಾಲಮುಕುಂದ ಆಚಾರ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್‌ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಸಿಎಂ ಅಶೋಕ್‌ ಗೆಹ್ಲೋಟ್‌ ಸ್ಪರ್ಧಿಸಿರುವ ಸರ್ದಾರ್‌ಪುರ ಕ್ಷೇತ್ರದಿಂದ ಮಹೇಂದ್ರ ಸಿಂಗ್‌ ರಾಥೋಡ್‌ರನ್ನು ಕಣಕ್ಕಿಳಿಸಲಾಗಿದೆ. ಅವರು ಜೈಪುರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ. ಇನ್ನು ಟೋಂಕ್‌ನಿಂದ ಸ್ಪರ್ಧಿಸಿರುವ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ವಿರುದ್ಧ ಮಾಜಿ ಶಾಸಕ ಅಜಿತ್‌ ಸಿಂಗ್‌ ಮೆಹ್ತಾಗೆ ಅವಕಾಶ ಮಾಡಿಕೊಡಲಾಗಿದೆ. 2013ರಲ್ಲಿ ಮೆಹ್ತಾ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಇದುವರೆಗೆ ಬಿಜೆಪಿ ಒಟ್ಟು 182 ಮಂದಿಯ ಪಟ್ಟಿ ಬಿಡುಗಡೆ ಮಾಡಿದೆ.

ಕಿಶನ್‌ ರೆಡ್ಡಿ ಸ್ಪರ್ಧೆ ಇಲ್ಲ: ಈ ಹಿಂದೆ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಬಿಜೆಪಿ ಸಂಸದರಾದ ಜಿ. ಕಿಶನ್‌ ರೆಡ್ಡಿ ಹಾಗೂ ಕೆ. ಲಕ್ಷ್ಮಣ್‌ ಅವರು ಈ ಬಾರಿ ಚುನಾವಣ ಕಣದಿಂದ ದೂರ ಉಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next