Advertisement

ಗುರುಕುಲದ ಅರಿವು ಮೂಡಿಸಲು ಬೃಹತ್‌ ಕಾರ್ಯಕ್ರಮ

10:39 AM Jun 02, 2019 | Suhan S |

ಮೂಡಿಗೆರೆ: ಪ್ರಬೋಧಿನಿ ಗುರುಕುಲದ ಅಧ‌ರ್ಮಂಡಲ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಶಿಕ್ಷಣ ಮತ್ತು ಭಾರತೀಯತೆ ಮತ್ತು ಗುರುಕುಲದ ಬಗ್ಗೆ ಅರಿವು ಮೂಡಿಸಲು ಜೂನ್‌ 11ರ ಮಂಗಳವಾರ 11ಗಂಟೆಗೆ ರೈತ ಭವನದಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ದಿನೇಶ್‌ ದೇವವೃಂದ ತಿಳಿಸಿದರು.

Advertisement

ಶನಿವಾರ ತಾಪಂ ಸಭಾಂಗಣದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ ಭಾರತೀಯ ಶಿಕ್ಷಣ ಪದ್ಧ್ದತಿ ಮೂಲಕ ವ್ಯಕ್ತಿಯ ಸಮಗ್ರ ವಿಕಾಸವನ್ನು ಸಾಧಿಸಿ ತನ್ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕೆಂಬ ಧ್ಯೇಯದೊಂದಿಗೆ ಶೃಂಗೇರಿಯ ಸಮೀಪದ ತುಂಗಾ ತಟದ ಹರಿಹರಪುರದಲ್ಲಿರುವ ಪ್ರಬೋನಿ ಗುರುಕುಲವು ಕಳೆದ 24 ವರ್ಷಗಳಿಂದ ಶಿಕ್ಷಣವನ್ನು ನೀಡುತ್ತಿದೆ. ಗುರುಕುಲವು ಇಂದು ವಿಶ್ವಮಾನ್ಯವಾಗುತ್ತಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಒಂದು ವರ್ಷದಿಂದ ಗುರುಕುಲದ ಶಿಕ್ಷಣದ ಮಹತ್ವವನ್ನು ಸಾರ್ವಜನಿಕರಿಗೆ ಮುಟ್ಟಿಸುವ ದೃಷ್ಟಿಯಿಂದ ತಾಲೂಕು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಆರಿವು ಕಾರ್ಯಕ್ರಮ ನೀಡುತ್ತಿದೆ. ಜಾತಿ ಮತ ಪಕ್ಷ ಬೇಧ ಮರೆತು ಸಮಾಜವನ್ನು ಒಗ್ಗೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಸದಸ್ಯ ಮಹೇಶ್‌ ಬೆರಣಗೂಡು ಮಾತನಾಡಿ, ಸಮಾಜದ ಪಾಲನೆ, ಪೋಷಣೆಗಳನ್ನು ಅವಲಂಬಿಸಿರುವ ಗುರುಕುಲವು ಆಹಾರ ಮತ್ತು ವಸತಿಗಳೊಂದಿಗೆ ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲೆಗಳೆಂಬ ವಿಶಿಷ್ಟ ಪಂಚಮುಖೀ ಶಿಕ್ಷಣವನ್ನು ಸಮಾಜದ ಎಲ್ಲ ವರ್ಗದವರಿಗೂ ಉಚಿತವಾಗಿ ನೀಡುತ್ತ ಬಂದಿದೆ. ಈ ಕಾರಣದಿಂದ ಮೇಲಿನ ಎಲ್ಲ ವರ್ಗಗಳಲ್ಲಿ ವಿಶೇಷ ಕಾರ್ಯಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಕಾಫಿ ಬೆಳೆಗಾರರು ಮತ್ತು ಅರ್ಧಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಪಿ.ರಾಜಗೋಪಾಲ ಅಧ್ಯಕ್ಷತೆ, ಮುಖ್ಯ ಭಾಷಣಕಾರರಾಗಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮತ್ತು ಮುಖ್ಯ ಅತಿಥಿಗಳಾಗಿ ಡಾ. ಅನಂತ ಪದ್ಮನಾಭ ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಎಂ.ಕೆ. ಪ್ರಾಣೇಶ್‌, ದೀಪಕ್‌ ದೊಡ್ಡಯ್ಯ, ಕಾ.ದಾ. ಕೃಷ್ಣರಾಜ್‌, ಆಶಾ ಮೋಹನ್‌, ಬಸವರಾಜ್‌, ದಿಲೀಪ್‌ ಕನ್ನಗೆರೆ, ಬಿ.ಎನ್‌. ಜಯಂತ್‌, ಕೆ.ಹೆಚ್. ವೆಂಕಟೇಶ್‌, ಉಪೇಂದ್ರ, ಪ್ರಸನ್ನ ಗೌಡಳ್ಳಿ, ನಯನ ತಳವಾರ, ಸುಂದ್ರೇಶ್‌ ಕೊಣಗೆರೆ, ಉಮಾಶಂಕರ್‌, ಸುಧಿಧೀರ್‌, ಪುರುಷೋತ್ತಮ್‌, ನಾರಾಯಣ ಆಚಾರ್‌, ವಿನಯ್‌ ಹಳೇಕೋಟೆ, ಪೂರ್ಣೇಶ್ವರಿ ಲಕ್ಷ್ಮಣಗೌಡ, ಸರೋಜ ಸುರೇಂದ್ರ, ಉತ್ತಮ್‌, ಪಟೇಲ್ ಮಂಜು, ಧನಿಕ್‌, ದಿಧೀಕ್ಷಿತ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next