Advertisement

ಯುವಕರಲ್ಲಿ ಕನ್ನಡ ಭಾಷೆ ಮಹತ್ವದ ಜಾಗೃತಿ ಅವಶ್ಯ

02:29 PM Feb 21, 2017 | |

ಹುಬ್ಬಳ್ಳಿ: ಕನ್ನಡ ನಾಡಿನಲ್ಲಿ ಕನ್ನಡ ಉಳಿಸಬೇಕಾದ ಅನಿವಾರ್ಯತೆ ಉಂಟಾಗಿದ್ದು, ಯುವಕರಲ್ಲಿ ಕನ್ನಡ ಭಾಷೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. ವಿಶ್ವ ಕನ್ನಡ ಬಳಗ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ, ಸಾಂಸ್ಕೃತಿಕ ಮತ್ತು ದೇಶಿ ಕ್ರೀಡೆಗಳ ಬೃಹತ್‌ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

Advertisement

ಯುವಕರಿಗೆ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿದೆ. ನಮ್ಮ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿಕೊಡಬೇಕು ಎಂದರು. ಕನ್ನಡ ಮಾಧ್ಯಮದಲ್ಲಿ ಕಲಿಯಲು ಯಾವುದೇ ಕೀಳರಿಮೆ ಬೇಡ. ಆಂಗ್ಲ ಮಾಧ್ಯಮದಲ್ಲಿ ಕಲಿಯುವುದೇ ದೊಡ್ಡ ಸಾಧನೆ ಎಂಬ ಭ್ರಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಕಲಿತವರೇ ಅಗಾಧ ಸಾಧನೆ ಮಾಡಿದ್ದಾರೆ.

ನಾನು ಕನ್ನಡ ಮಾಧ್ಯಮದಲ್ಲಿ ಕಲಿತರೂ ರಾಜ್ಯದ ಮುಖ್ಯಮಂತ್ರಿಯಾದೆ. ಹಿಂದೆ ವಕೀಲಿ ವೃತ್ತಿ ಮಾಡುವ ಸಂದರ್ಭದಲ್ಲಿ ಹಲವು ಪ್ರಕರಣಗಳಲ್ಲಿ ಕನ್ನಡ ಭಾಷೆಯಲ್ಲೇ ವಾದ ಮಾಡುತ್ತಿದ್ದೆ. ಕನ್ನಡ ಭಾಷೆಯಲ್ಲೇ ದಸ್ತಾವೇಜುಗಳನ್ನು ಸಿದ್ಧಪಡಿಸುತ್ತಿದ್ದೆ ಎಂದರು. ರಾಜ್ಯದಲ್ಲಿ ಕನ್ನಡ ಉಳಿದಿರುವುದು ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ.

ಅದರಲ್ಲೂ ಧಾರವಾಡ-ಹುಬ್ಬಳ್ಳಿಯಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷಿಕರು ಅಲ್ಪಸಂಖ್ಯಾತರಾಗಿದ್ದಾರೆ. ತಮಿಳು ಹಾಗೂ ತೆಲುಗು ಭಾಷಿಕರೇ ಅಲ್ಲಿ ಬಹುಸಂಖ್ಯಾತರಾಗಿದ್ದಾರೆ ಎಂದರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಶ್ವ ಕನ್ನಡ ಬಳಗ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಶರಣಪ್ಪ ಕೊಟಗಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ|ಸಂಗಮೇಶ ಹಂಡಗಿ, ಸದಾನಂದ ಡಂಗನವರ, ದಿನೇಶ ಕ್ಯಾಥರಿನ್‌, ತಾರಾದೇವಿ ವಾಲಿ ಮೊದಲಾದವರಿದ್ದರು. 

ಕುಸ್ತಿ ಸ್ಪರ್ಧೆ: ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. 30 ಕೆ.ಜಿ. ವಿಭಾಗದಲ್ಲಿ ದ್ಯಾಮಪ್ಪ ತಲ್ವಾರ (ಪ್ರಥಮ), ವಿನೋದ ಚಂಡಪ್ಪನವರ (ದ್ವಿತೀಯ), ಗುರುನಾಥ ಸುಳ್ಳದ (ತೃತಿಯ) ಪ್ರಶಸ್ತಿ ಗಳಿಸಿದರು.

Advertisement

35 ಕೆ.ಜಿ.ವಿಭಾಗದಲ್ಲಿ ಪ್ರತೀಕ್‌ ಹಾರನಹಳ್ಳಿ (ಪ್ರಥಮ), ಅಫ‌ಲ್‌ ಕುಂಬಾರಗಣವಿ (ದ್ವಿತೀಯ), ಸುಜಲ್‌ ಜಾಧವ (ತೃತೀಯ). 38 ಕೆ.ಜಿ.ವಿಭಾಗದಲ್ಲಿ ಚಂದ್ರಗೌಡ  ಪಾಟೀಲ (ಪ್ರಥಮ), ಪವನ ನವಲೂರ (ದ್ವಿತೀಯ), ಸಚಿನ್‌ ಚಿಲ್ಲಣ್ಣವರ (ತೃತೀಯ). 42 ಕೆ.ಜಿ.ವಿಭಾಗದಲ್ಲಿ ಕಾಶಿನಾಥ (ಪ್ರಥಮ), ಚೇತನ್‌ (ದ್ವಿತೀಯ), ರುದ್ರಪ್ಪ (ತೃತೀಯ) ಪ್ರಶಸ್ತಿ ಪಡೆದರು. 46 ಕೆ.ಜಿ. ವಿಭಾಗದಲ್ಲಿ ಮಲ್ಲೇಶ ಸೋಮಣ್ಣವರ (ಪ್ರಥಮ),

ಬಸವರಾಜ ಚಿಲ್ಲಣ್ಣವರ (ದ್ವಿತೀಯ), ಸಿದ್ದಲಿಂಗ ಇಂಗಳಗಿ (ತೃತೀಯ). 50 ಕೆ.ಜಿ.ವಿಭಾಗದಲ್ಲಿ ವೆಂಕಟೇಶ ಮಾಯಕೊಂಡ (ಪ್ರಥಮ), ಮಕು¤ಮ್‌ ಹುಸೇನ್‌ (ದ್ವಿತೀಯ), ಮಾರುತಿ ಕುಂಟೋಜಿ (ತೃತೀಯ) ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸಭಾ  ಕಾರ್ಯಕ್ರಮಕ್ಕೂ ಮುನ್ನ ಮೂರುಸಾವಿರಮಠದ ಆವರಣದಿಂದ ನೆಹರು ಮೈದಾನದವರೆಗೆ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next