Advertisement

ಒಂದು ಅಗುಳು ಅನ್ನ ವ್ಯರ್ಥವಾಗಲು ಬಿಡಲಿಲ್ಲ!

12:42 PM Feb 15, 2017 | Team Udayavani |

ಹುಣಸೂರು: ಸಾಮಾನ್ಯವಾಗಿ ದೇವರ ಕಾರ್ಯ, ಮದುವೆ ಇತ್ಯಾದಿ ಸಮಾರಂಭ ಗಳಲ್ಲಿ ಊಟಕ್ಕಿಂತ ಹೆಚ್ಚು ವ್ಯರ್ಥವಾಗುವುದನ್ನು ಕಾಣುತ್ತೇವೆ. ಆದರೆ ಶ್ರೀ ಶಿರಡಿ ಸಾಯಿಬಾಬ ಟ್ರಸ್ಟ್‌ ವತಿಯಿಂದ ನಿರ್ಮಿಸಿರುವ ಓಂ ಶ್ರೀ ಸಾಯಿ ಮಂದಿರದ ಪ್ರಥಮ ವಾರ್ಷಿಕೋತ್ಸವದಲ್ಲಿ ವಿಭಿನ್ನವಾದ ಕಾರ್ಯ ನಡೆಯಿತು. ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಒಂದು ಅಗುಳು ಅನ್ನ, ತರಕಾರಿ ಸೇರಿದಂತೆ ಯಾವೊಂದು ಆಹಾರವು ವ್ಯರ್ಥವಾಗದಂತೆ ನೋಡಿಕೊಳ್ಳುವಲ್ಲಿ ಸಫ‌ಲರಾದರಲ್ಲದೆ, ಅನ್ನದ ಬೆಲೆಯನ್ನು ಮನವರಿಕೆ ಮಾಡಿಸಿದರು.

Advertisement

ಸರತಿ ಸಾಲಿನಲ್ಲಿ ಬಂದ ಭಕ್ತಾದಿಗಳಿಗೆ ಅಡಿಕೆ ಹಾಳೆಯ ತಟ್ಟೆಯ ಮೂಲಕ ಊಟ ಬಡಿಸಲಾಯಿತು. ಪ್ರತಿಯೊಬ್ಬರು ಅನ್ನ ಸೇರಿದಂತೆ ಯಾವೊಂದು ಆಹಾರ ಪದಾರ್ಥಗಳು ನೆಲಕ್ಕೆ ಬೀಳದಂತೆ, ಬಹುತೇಕ ಮಂದಿ ವ್ಯರ್ಥ ಮಾಡದೇ ಊಟ ಮಾಡಿ ಪರಿಸರ ಪ್ರೇಮ ಮೆರೆದರು. ನಗರದ ಮಹಿಳಾ ಮತ್ತು ಡಿ.ಡಿ. ಅರಸ್‌ ಸರಕಾರಿ ಪದವಿ ಕಾಲೇಜಿನ ಎನ್ನೆಸ್ಸೆಸ್‌ ಮತ್ತು ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಸ್ವಯಂ ಸೇವಕರು ಹಾಗೂ ಪೌರಕಾರ್ಮಿಕರು,

ಹತ್ತಾರು ಕೌಂಟರ್‌ನಲ್ಲಿದ್ದು, ಊಟ ಮಾಡಿದ ನಂತರ ಬಿಸಾಡುವಾಗ ಪರೀಕ್ಷಿಸಿ, ತಟ್ಟೆ ಯಲ್ಲಿನೆದರೂ ಅನ್ನದ ಅಗುಳು, ತರಕಾರಿ, ಕೂಟು, ಪಾಯಸ ಉಳಿದಿದ್ದರೆ ಅಲ್ಲಿಯೇ ತಿನ್ನಿಸಿ, ಸಂಪೂರ್ಣ ಖಾಲಿಯಾದ ನಂತರವೇ ಡಬಕ್ಕೆ ಹಾಕಿಸುತ್ತಿದ್ದರು. ಊಟದ ಜೊತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥಿತವಾಗಿತ್ತು. ಎಲ್ಲಿಯೂ ಕೂಡ ಪ್ಲಾಸ್ಟಿಕ್‌ ಬಳಸದೇ ಕಾಗದದ ಲೋಟದಲ್ಲಿ ನೀರು ಪೂರೈಸಿದರು. ಬಳಸಿದ ಲೋಟವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಯಿತು.

ಪೌರಕಾರ್ಮಿಕರ ಸಾಥ್‌: ಶೂನ್ಯ ತ್ಯಾಜ್ಯ ವ್ಯವಸ್ಥೆಯಲ್ಲಿ ಪೌರಕಾರ್ಮಿಕರು, ವಿದ್ಯಾರ್ಥಿ ಗಳು-ಸ್ವಯಂ ಸೇವಕರೊಂದಿಗೆ ಸೇರಿ ನಾಗರಿಕರಿಗೆ ಶುಚಿತ್ವ ಹಾಗೂ ಆಹಾರ ಪದಾರ್ಥ ವ್ಯರ್ಥ ಮಾಡದ ಬಗ್ಗೆ ಪರಿಸರದ ಪಾಠ ಹೇಳಿದರು. ಅಲ್ಲದೆ ವ್ಯರ್ಥ ಅಡಿಕೆ ಹಾಳೆ, ಪೇಪರ್‌ ಲೋಟ ಹಾಗೂ ವ್ಯರ್ಥ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸಾಗಿಸಿದರು. ಎಲ್ಲಿಯೂ ವ್ಯರ್ಥವಾಗಿ ಬಿಸಾಡಿದ್ದಾಗಲೀ, ಗೊಂದಲವಾಗಲೀ ಕಂಡುಬರಲಿಲ್ಲ.

ಡಾ. ಪುಷ್ಪ ಸ್ಫೂರ್ತಿ: ಪರಸರ ಕಾಳಜಿ ಮೆರೆಯುವ ಜಿಪಂ ಸದಸ್ಯೆ ಡಾ. ಪುಷ್ಪ ಅಮರನಾಥ್‌ ಮಾರ್ಗದರ್ಶನದಲ್ಲಿ ಶೂನ್ಯ ತ್ಯಾಜ್ಯ ವ್ಯವಸ್ಥೆ ಹಾಗೂ ಪರಿಸರ ಸ್ನೇಹಿ ಊಟದ ಪರಿಕಲ್ಪನೆಯೇ ಈ ವ್ಯವಸ್ಥೆ. ಕಳೆದ ವರ್ಷವು ಸಹ ಇದೇ ರೀತಿ ವ್ಯವಸ್ಥೆ ಕಲ್ಪಿಸ ಲಾಗಿತ್ತು. ಇದಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರಿಗೆ ತರಬೇತಿ ನೀಡಿದ್ದರು.

Advertisement

ಶ್ರೀ ಸಾಯಿ ಮಂದಿರದ ಪ್ರಥಮ ವಾರ್ಷಿಕೋತ್ಸವ…
ಹುಣಸೂರು:
ಪ್ರಥಮ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹುಣಸೂರು ನಗರದ ಶ್ರೀ ಶಿರಡಿ ಸಾಯಿಬಾಬ ಟ್ರಸ್ಟ್‌ ವತಿಯಿಂದ ನಿರ್ಮಿಸಿರುವ ಓಂ ಶ್ರೀ ಸಾಯಿ ಮಂದಿರದ ಪ್ರಥಮ ವಾರ್ಷಿಕೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಅಲಂಕೃತ ಮಂದಿರಕ್ಕೆ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಸಾಯಿ ಬಾಬಾರ ದರ್ಶನ ಪಡೆದು, ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ವಜ್ರದ ಓಲೆ-ತಿಲಕ ಸಮರ್ಪಣೆ: ಟ್ರಸ್ಟ್‌ ಅಧ್ಯಕ್ಷ ಎಚ್‌.ಎನ್‌. ಪ್ರೇಮ್‌ಕುಮಾರ್‌, ಶಾಸಕ ಮಂಜುನಾಥ್‌, ತಾಯಿ ರತ್ನಮ ಸೇರಿದಂತೆ ಕುಟುಂಬದ ಮಂದಿ ವತಿ ಯಿಂದ ಸಾಯಿಬಾಬಾರಿಗೆ ವಜ್ರದ ಓಲೆ ಹಾಗೂ ಹಣೆಗೆ ವಜ್ರದ ತಿಲಕ ಸಮರ್ಪಿ ಸುವ ಧಾರ್ಮಿಕ ಕಾರ್ಯಕ್ರಮ ಸಾಂಗವಾಗಿ ಜರುಗಿತು. ನಂತರ ಭಕ್ತರು ಸಾಲಾಗಿ ಬಂದು ಬಾಬಾರ ಪ್ರತಿಮೆಗೆ ಕ್ಷೀರಾಭಿಕ್ಷೇಕ ನೆರವೇರಿಸಿದರು. ಸಂಜೆ ಭಕ್ತರು ಬಾಬರಿಗೆ ಪುಷ್ಪಾರ್ಚನೆ ಮಾಡಿ ಸಂಪ್ರೀತರಾದರು.

ನಗರಸಭಾಧ್ಯಕ್ಷ ಕೆ.ಲಕ್ಷ್ಮಣ್‌, ಗಾವಡಗರೆ ಹಾಗೂ ಉಕ್ಕಿನಕಂತೆ ಮಠದ ನಟರಾಜ ಸ್ವಾಮೀಜಿ, ಸಾಂಬಸದಾಶಿವ ಸ್ವಾಮೀಜಿ, ಜಿಪಂ ಸದಸ್ಯರಾದ ಡಾ. ಪುಷ್ಪ ಅಮರ ನಾಥ್‌, ಸುರೇಂದ್ರ, ಜಯಲಕ್ಷ್ಮೀ ರಾಜಣ್ಣ, ಗೌರಮ್ಮ ಸೋಮಶೇಖರ್‌, ನಿವೃತ್ತ ಶಿಕ್ಷಕಿ ರಾಜಮ್ಮ ಭಾಗವಹಿಸಿದ್ದರು.

ಪರಿಸರ ಸ್ನೇಹಿ ಊಟದ ವ್ಯವಸ್ಥೆ ಎಂಬುದು ನನ್ನ ದೊಡ್ಡಕನಸು, ಕಳೆದ ವರ್ಷದಿಂದ ಈ ವ್ಯವಸ್ಥೆ ಯನ್ನು ಮಾಡಿಕೊಂಡು ಬಂದಿದ್ದು, ಎಲ್ಲರೂ ಸಹಕಾರ ನೀಡಿರುವುದು ಸಂತಸ ಮೂಡಿದೆ. ಇದರಿಂದ ಆಹಾರ ವ್ಯರ್ಥವಾಗುವುದನ್ನು ತಡೆವ ಹಾಗೂ ಪರಿಸರಕ್ಕೆ ಪೂರಕ ವಾತವಾರಣ ನಿರ್ಮಿಸಲು ಸಹಕಾರಿಯಾಗಿದೆ.
-ಡಾ. ಪುಷ್ಪ, ಜಿಪಂ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next