Advertisement
ಜಿಪಿಎಸ್ ಹೊಂದಿರುವ ಈ ಸ್ಮಾರ್ಟ್ ವಾಚ್, ವಿಶೇಷವಾಗಿ ಓಟಗಾರರು ತಮ್ಮ ಓಟದ ಅಂಕಿಅಂಶಗಳ ಮಾಹಿತಿ ಮತ್ತು ತಮ್ಮ ಫಿಟ್‌ನೆಸ್‌ನ ಗುರಿಗಳನ್ನು ಸಾಧಿಸಲು ಬಯಸುವವರಿಗಾಗಿ ಈ ಸ್ಮಾರ್ಟ್ ವಾಚ್ ತಯಾರಿಸಲಾಗಿದೆ.
Related Articles
Advertisement
ಇದು ಹೃದಯ ಬಡಿತದ ಮೇಲ್ವಿಚಾರಣೆ, ದೈಹಿಕ ಶಕ್ತಿಯ ಮೇಲ್ವಿಚಾರಣೆ, ಮಹಿಳೆಯರ ಋತು ಚಕ್ರ ಮತ್ತು ಗರ್ಭಧಾರಣೆಯ ಮಾಹಿತಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಓಟದ ವಿವರವಾದ ದತ್ತಾಂಶ, ದೈನಂದಿನ ಜೀವನಕ್ರಮಗಳು, ಹೆಚ್ಚುವರಿ ಅಂತರ್‌ನಿರ್ಮಿತ ಕ್ರೀಡಾ ಅಪ್ಲಿಕೇಷನ್‌ಗಳು ಮತ್ತು ಬಳಕೆದಾರರು ತಮ್ಮ ದೈಹಿಕ ಆರೋಗ್ಯದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.
ಓಟದ ಸುಧಾರಿತ ವೈಶಿಷ್ಟ್ಯಗಳು
ಪೇಸ್ ಪ್ರೊ : ಓಟಗಾರರು ತಮ್ಮ ಪ್ರಯತ್ನಗಳನ್ನು ಆಯ್ದ ಕೋರ್ಸ್ ಅಥವಾ ದೂರಕ್ಕೆ ತಕ್ಕಂತೆ ನಿಗದಿಪಡಿಸಲು ಮಾರ್ಗದರ್ಶನ ನೀಡುತ್ತದೆ
ಅಂತಿಮ ಸಮಯ ಅಂದಾಜು ಮಾಡುವ ಸೌಲಭ್ಯವು ಕ್ರೀಡಾಪಟುಗಳಿಗೆ ಓಟದ ಅಂತರವನ್ನು ಆಯ್ಕೆ ಮಾಡಲು ಮತ್ತು ತಮ್ಮ ಓಟ ಮುಕ್ತಾಯಗೊಳಿಸುವ ಅಂದಾಜು ಸಮಯವನ್ನು ತಮ್ಮ ಮಣಿಕಟ್ಟಿನಿಂದಲೇ ವೀಕ್ಷಿಸಲು ಅವಕಾಶ ಒದಗಿಸುತ್ತದೆ.
ಓಟದ ಲಯದ ಎಚ್ಚರಿಕೆಗಳು ಓಟಗಾರರು ತಮ್ಮ ಓಟದ ಲಯದ ಗುರಿಯಿಂದ ಹೊರಗಿರುವಾಗ, ಅವರ ಓಟದ ಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ
ತಮ್ಮ ವ್ಯಾಯಾಮದ ದಿನಚರಿಯನ್ನು ಬದಲಾಯಿಸಲು ಬಯಸುವವರಿಗೆ, ಹಲವಾರು ಅಂತರ್ಗತವಾಗಿರುವ ಚಟುವಟಿಕೆಯನ್ನು ಒಳಗೊಂಡಿದೆ. ಟ್ರ್ಯಾಕ್ ಅಥವಾ ವರ್ಚುವಲ್ ರನ್ನಿಂಗ್, ಈಜುಗೊಳ, ವಿವಿಧ ಕ್ರೀಡಾ ಸಾಮಗ್ರಿಗಳ ಜತೆ ವ್ಯಾಯಾಮ ಮಾಡುವುದು, ಹೈ ಇಂಟೆನ್ಸಿಟಿ ಇಂಟರ್‌ವಲ್ ಟ್ರೇನಿಂಗ್ (ಎಚ್‌ಐಐಟಿ) ಮುಂತಾದವುಗಳನ್ನು ಒಳಗೊಂಡಿದೆ
ಒಂದು ತಾಲೀಮನ (ವರ್ಕ್ ಔಟ್) ನಂತರ, ಅಂತರ್ಗತ ಚೇತರಿಕೆಯ ಸಮಯವು ಕ್ರೀಡಾಪಟುಗಳಿಗೆ ತಮ್ಮ ಮುಂದಿನ ದೊಡ್ಡ ಪ್ರಯತ್ನಕ್ಕೆ ಮುಂಚಿತವಾಗಿ ಎಷ್ಟು ಸಮಯ ವಿಶ್ರಾಂತಿ ಪಡೆಯಬೇಕೆಂದು ಸೂಚಿಸುತ್ತದೆ
ಕ್ರೀಡಾಪಟುಗಳು ತಮ್ಮ ಒತ್ತಡವನ್ನು ಗುರುತಿಸಬಹುದು ಮತ್ತು ಸಣ್ಣ ಉಸಿರಾಟದ ವ್ಯಾಯಾಮಗಳನ್ನು ಮಾಡಲು ವಿಶ್ರಾಂತಿಯ ಜ್ಞಾಪನೆಗಳನ್ನು ಹೊಂದಿಸಬಹುದು.
ಬಳಕೆದಾರರು ಮೆಸೇಜ್‌ಗಳನ್ನು ಸ್ವೀಕರಿಸಬಹುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಸಂದೇಶಗಳು, ಇ-ಮೇಲ್‌ಗಳನ್ನು ವೀಕ್ಷಿಸಬಹುದು.
ಬ್ಯಾಟರಿ ಬಾಳಿಕೆ
ಸ್ಮಾರ್ಟ್ ವಾಚ್ ಮೋಡ್‌ನಲ್ಲಿ 2 ವಾರಗಳವರೆಗೆ ಮತ್ತು ಜಿಪಿಎಸ್ ಮೋಡ್‌ನಲ್ಲಿ 20 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.
ಬೆಲೆ: ಫೋರ್‌ರನ್ನರ್ 55 ಕಪ್ಪು, ಅಕ್ವಾ ಮತ್ತು ಬೂದು ಸೇರಿದಂತೆ 3 ಬಣ್ಣಗಳಲ್ಲಿ ಬರುತ್ತದೆ. ಬೆಲೆ ರೂ 20,990 ಇದೆ.
ಲಭ್ಯತೆ: ಅಮೆಜಾನ್ ಡಾಟ್ ಇನ್, ಫ್ಲಿಪ್ ಕಾರ್ಟ್, ಟಾಟಾ ಕ್ಲಿಕ್ ಮತ್ತು ಸಿನರ್ ಜೈಸರ್ ಡಾಟ್.ಸಿಒ.ಇನ್ ಗಾರ್ಮಿನ್ ಬ್ರಾಂಡ್ ಸ್ಟೋರ್‌ಗಳಲ್ಲಿ ಲಭ್ಯ.