Advertisement
ಮಲ್ಪೆ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಿತ ವಿವಿಧ ಇಲಾಖೆಗಳು ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 4 ದಿನಗಳ ವರೆಗೆ ನಡೆಯುವ ಪರ್ಯಟನ ಪರ್ವ, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ದ್ರಾಕ್ಷರಸ ಮಂಡಳಿಯ ಸಹಯೋಗದಲ್ಲಿ ಪ್ರಥಮ ಬಾರಿಗೆ ವೈನ್ ಫೆಸ್ಟಿವಲ್ ಆಯೋಜಿಸಲಾಗಿದೆ. ವೈನ್ ಪ್ರದರ್ಶಿಸುವ ಮೂಲಕ ದೇಶೀಯ ವೈನ್ ಪರಂಪರೆಯನ್ನು ತೆರೆದಿಡಲಾಗಿದ್ದು, ಪ್ರಥಮ ದಿನದಲ್ಲೆ ವೈನ್ ಉತ್ಸವಕ್ಕೆ ಅಭೂತಪೂರ್ವ ಸ್ಪಂದನೆಯೂ ದೊರೆತ್ತಿದೆ.ವಿದ್ಯಾರ್ಥಿಗಳು, ಹಿರಿಯ ನಾಗರಿ ಕರು, ಮಹಿಳೆಯರೂ ಸೇರಿದಂತೆ ನೂರಾರು ವೈನ್ ಪ್ರಿಯರು ಭೇಟಿ ನೀಡಿ ರುಚಿ ಆಸ್ವಾದಿಸಿದರು. ವೈನ್ ಫೆಸ್ಟಿವಲ್ ಪ್ರವೇಶಕ್ಕೆ ಯಾವುದೇ ಪ್ರವೇಶ ಶುಲ್ಕ ಇರಲಿಲ್ಲ. ಬಂದವರಿಗೆ ಟೇಸ್ಟ್ ನೋಡಲು ಉಚಿತವಾಗಿ ವೈನ್ ಕೊಡುತ್ತಿದ್ದರು.
ರೋಸ್, ಸೂಲ, ಕಾಡು, ಫÅಟೇಲ್ಲಿ, ಗ್ರೋವರ್, ಎಸ್‌ಡಿಯು, ಎಲೈಟ್, ಸೀಸನ್, ಕೃಷ್ಣವಲ್ಲಿ, ರಿಕೋ, ಬ್ಲಾಕ್‌ಬಕ್, ವೇಲ್‌ದಿ ಇಂಡೀಸ್ ಒಳಗೊಂಡ ಹೆಸರಾಂತ ಕಂಪೆನಿಯ ವೈನ್‌ಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಶೇ. 10 ರಿಂದ 20ರವರೆಗೆ ರಿಯಾಯಿತಿ ದರವೂ ಇದೆ. ಸೂಲ ಕಂಪೆನಿಯ ಮದಿರಾ, ಹಿಂಡೋಲಿ, ಬ್ರೂಟ್, ಸತೋರಿ, ದೇಶಿಯ ವೈನ್‌ಗಳಾದ ದಿಯಾ, ಮದಿ, ರಾಝಾ, ಕ್ಯಾಬಿನೆಟ್ ಶಿರಾಜ್ ಮೊದಲಾದವ ಬ್ರಾಂಡ್‌ಗಳು ಮೇಳದಲ್ಲಿ ಇದ್ದವು. 100ರಿಂದ ಹಿಡಿದು 1500 ರೂ. ವರೆಗಿನ ವೈನ್‌ಗಳು ಮಾರಾಟಕ್ಕೆ ಇದ್ದವು.