Advertisement

ಶಿವಮೊಗ್ಗದಲ್ಲಿ ಔಷಧ ಅಂಗಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

02:07 PM Sep 29, 2018 | |

ಶಿವಮೊಗ್ಗ: ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಶುಕ್ರವಾರ ದೇಶಾದ್ಯಂತ ಔಷಧ ವ್ಯಾಪಾರಿಗಳು ಕರೆ ನೀಡಿರುವ ಬಂದ್‌ಗೆ ಶಿವಮೊಗ್ಗದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

 ನಗರದ ಎಲ್ಲ ಮೆಡಿಕಲ್‌ ಶಾಪ್‌ಗ್ಳನ್ನು ಬೆಳಗ್ಗಿನಿಂದಲೇ ಮುಚ್ಚಲಾಗಿತ್ತು. ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಆನ್‌ಲೈನ್‌ ಔಷಧ ವ್ಯಾಪಾರದಿಂದ ದೇಶದಲ್ಲಿ 8 ಲಕ್ಷ  ಕುಟುಂಬಗಳು ಬೀದಿಗೆ ಬೀಳುವ ಸಂಭವವಿದೆ. ಇದು ಔಷಮಾರಾಟಗಾರರ ವೃತ್ತಿಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂದರು.

ಆನ್‌ಲೈನ್‌ನಲ್ಲಿ ಔಷಧ ಖರೀದಿಸುವುದರಿಂದ ರೋಗಿಗಳಿಗೆ ಸಮರ್ಪಕ ಔಷಧಗಳು ದೊರೆಯುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಯುವ ಜನತೆ ಆನ್‌ಲೈನ್‌ನಲ್ಲಿ ಮಾದಕ ಪರಿಣಾಮ ಬೀರುವ ಔಷಧಗಳನ್ನು ಖರೀದಿಸುತ್ತಿದ್ದು, ಇದು ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಲವಾರು ಯುವಕರು ಒತ್ತಡ ನಿಯಂತ್ರಣಕ್ಕಾಗಿ ಮಾದಕ ಚಟಗಳಿಗೆ ಬಲಿಯಾಗುತ್ತಿದ್ದು ಆನ್‌ ಲೈನ್‌ ಮೂಲಕ ಔಷಧಗಳನ್ನು ಖರೀದಿಸುತ್ತಿದ್ದಾರೆ. 

ಹೀಗಿರುವಾಗ ಕೇಂದ್ರ ಸರಕಾರ ಆನ್‌ಲೈನ್‌ ಔಷಧ ವ್ಯಾಪಾರವನ್ನು ಕಾನೂನುಬದ್ಧಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದರು. ಔಷಧ ವ್ಯಾಪಾರವನ್ನೇ ನಂಬಿಕೊಂಡು ಲಕ್ಷಾಂತರ ಮಂದಿ ಬದುಕುತ್ತಿದ್ದಾರೆ. ಆನ್‌ ಲೈನ್‌ ವಹಿವಾಟಿನಿಂದಾಗಿ ಅವರ ಬದುಕು ಸಂಕಷ್ಟಕೀಡಾಗಿದೆ. ಕೂಡಲೇ ಕೇಂದ್ರ ಸರಕಾರ ಆನ್‌ಲೈನ್‌ ಔಷಧ ವ್ಯಾಪಾರ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿವೇಕಾನಂದ ನಾಯ್ಕ, ರುದ್ರಪ್ರಸಾದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next