Advertisement

ದೈವಸ್ವರೂಪಿ ರೈತರನ್ನು ಸ್ಮರಿಸುವ ಸುವರ್ಣಾವಕಾಶ: ಅನ್ನದಾತರಿಗೆ ಸಲಾಂ ಹೇಳಿ ಬಹುಮಾನ ಗೆಲ್ಲಿ

12:16 PM Dec 11, 2019 | Mithun PG |

ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು ನಮ್ಮ ಕರ್ತವ್ಯವೇ ಸರಿ. ಇದಕ್ಕೊಂದು ಸುವರ್ಣಾವಕಾಶವನ್ನು ಜನಪ್ರಿಯ Helo app ಇದೀಗ ನಿಮಗೆ ನೀಡುತ್ತಿದೆ.

Advertisement

#ಅನ್ನದಾತನಿಗೆ ಸಲಾಂ #ರೈತನೇ ದೇವರು #ಕೃಷಿಯೇ ಭವಿಷ್ಯ #ನಾವು ರೈತನ ಮಕ್ಕಳು #ಅನ್ನದಾತ ಸುಖೀಭವ ಹ್ಯಾಷ್ ಟ್ಯಾಗ್ ಗಳನ್ನು ಬಳಸಿಕೊಂಡು ಪೋಸ್ಟ್ ಗಳನ್ನು ಹಾಕುವ ಮೂಲಕ ನಾಡಿನ ಅನ್ನದಾತರ ಬಗ್ಗೆ ನಿಮಗಿರುವಂತಹ ಪ್ರೀತಿ ಗೌರವವನ್ನು ವ್ಯಕ್ತಪಡಿಸಿ.ಅಷ್ಟೇ ಅಲ್ಲದೆ ನೀವು ಮಾಡುವ ಉತ್ತಮ ಪೋಸ್ಟ್​ಗಳನ್ನು ಗುರುತಿಸಿ 10 ವಿಜಯಶಾಲಿಗಳನ್ನು Helo App ಆಯ್ಕೆ ಮಾಡಿಕೊಳ್ಳಲಿದೆ. ಹೀಗೆ ಆಯ್ಕೆಯಾದವರಿಗೆ ಕಂಪೆನಿಯ ವತಿಯಿಂದ ಆಕರ್ಷಕ ಬಹುಮಾನ ಕೂಡ ದೊರೆಯಲಿದೆ ಎಂದು Helo App ತಿಳಿಸಿದೆ.

ಡಿಸೆಂಬರ್ 23 ರೈತ ದಿನಾಚರಣೆ. ಆಧುನಿಕತೆಯ ಮೋಡಿಗೆ ಸಿಲುಕಿರುವ ನಮಗೆಲ್ಲಾ ನಮ್ಮ ಪ್ರತೀದಿನದ ಅನ್ನ-ಆಹಾರ ಎಲ್ಲಿಂದ ಬರುತ್ತದೆ ಎಂಬುದೇ ಮರೆತು ಹೋಗಿದೆ. ಈ ಸಂದಿಗ್ಧಮಯ ಸನ್ನಿವೇಶದಲ್ಲಿ ನಾಡಿನ ಅನ್ನದಾತರನ್ನು ಸ್ಮರಿಸುವುದು ಮತ್ತು ಅವರ ಶ್ರಮದ ಕುರಿತಾಗಿ ನಮ್ಮ ಮಕ್ಕಳಿಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯವೂ ಹೌದು.

ನಮ್ಮ ದೇಶದಲ್ಲಿ ರೈತರ ಹೆಸರಿನಲ್ಲಿ ಒಂದು ದಿನಾಚರಣೆ ನಡೆಯುತ್ತಿದೆ ಎಂಬುದೇ ಹಲವರಿಗೆ ತಿಳಿದಿಲ್ಲ. ಈ ಬಾರಿಯಾದರೂ ರೈತರ ದಿನದಂದು ಅವರ ಶ್ರಮವನ್ನು ಗೌರವಿಸುವ ಕಾರ್ಯ ದೊಡ್ಡಮಟ್ಟದಲ್ಲಿ ನಡೆಯಬೇಕಾಗಿದೆ. ಪ್ರಾಕೃತಿಕ ವೈಪರಿತ್ಯ ಮತ್ತು ಶ್ರಮಕ್ಕೆ ತಕ್ಕ ಬೆಲೆ ಸಿಗದೇ ಒದ್ದಾಡುತ್ತಿರುವ ನಾಡಿನ ರೈತ ಸಮುದಾಯದ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ಅವರಿಗೆ ತಲುಪಿಸಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿರಲಾರದು.

ಹಾಗಾದರೆ ಬನ್ನಿ ರೈತರ ದಿನದಂದು ಅನ್ನದಾತರ ಶ್ರಮವನ್ನು ಗೌರವಿಸಿ ಅವರ ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next