Advertisement
ಐವತ್ತು ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ಕೇಶವಾನಂದ ಪ್ರಕರಣದಲ್ಲಿ ತೀರ್ಪು ನೀಡುವ ಮೂಲಕ ತನ್ನನ್ನು ಹಾಗೂ ಸಂವಿಧಾನವನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಿಕೊಂಡಿದ್ದರಿಂದ ಮಹತ್ವ ಪಡೆದುಕೊಂಡಿದೆ. ಜತಗೆ ಈ ಪ್ರಕರಣ ಸಂವಿಧಾನ ಮೂಲ ಸಂರಚನೆ ಎಂಬ ಹೊಸ ಪರಿಕ ಲ್ಪನೆಯ್ನು ಹುಟ್ಟುಹಾಕಿತು. ಕೇಶವಾನಂದ ಬಗ್ಗೆ ನೂರಾರು ಲೇಖನಗಳಲ್ಲದೆ ಪ್ರಕರಣದ ಬಗ್ಗೆ ಒಂದು ಪುಸ್ತಕ ಪ್ರಕಟವಾಗಿರುವುದು ಈ ಪ್ರಕರಣದ ಮಹತ್ವವನ್ನು ಸೂಚಿಸುತ್ತದೆ. ಸಂವಿಧಾನ ತಿದ್ದಲಾಗುತ್ತಿದೆ ಅಥವಾ ತಿರುಚುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಇವತ್ತಿನ ಸಂದರ್ಭದಲ್ಲಿ ಕೇಶವಾನಂದ ಭಾರತೀ ಪ್ರಕರಣದ ಮರು ಅವಲೋಕನ ಅಗತ್ಯವೆಂದು ತೋರುತ್ತದೆ.
Related Articles
Advertisement
ಕೇಶವಾನಂದ ಪ್ರಕರಣದಲ್ಲಿ ವಾದ-ಪ್ರತಿವಾದ ಮಾಡಿದವ ರಲ್ಲಿ ಭಾರತ ಕಂಡ ಶ್ರೇಷ್ಠ ವಕೀಲರು ಪಾಲ್ಗೊಂಡಿದ್ದರು. ಕೇಶವಾ ನಂದ ಭಾರತೀ ಪರ ನಾನಿ ಫಾಲ್ಕಿವಾಲ ಅವರಿಗೆ ಸೋಲಿ ಸೊರಾಬ್ಜಿ ಮತ್ತು ಅನಿಲ್ ದಾವನ್ ಸಹಕರಿಸಿದರೆ, ಸರಕಾರದ ಪರ ಎಚ್.ಎಮ್.ಸೀರ್‌ವಾಯ್ ವಾದ ಮಾಡಿದರು. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಸೀರ್‌ವಾಯ್ ಅವರೊಡನೆ ಇದ್ದವರಲ್ಲಿ ಡಾ| ಎಲ್.ಎಮ್.ಸಿಂಘ್ವಿ ಮತ್ತು ಈ ಪ್ರಕರಣದ ಬಗ್ಗೆ 150 ಪುಟಗಳ ಪುಸ್ತಕ ಬರೆದಿರುವ ಆಂದ್ಯರುಜಿನ. ನಾನಿ ಫಾಲ್ಕಿವಾಲ ಸತತವಾಗಿ ಒಂಬತ್ತು ಗಂಟೆಗಳ ಕಾಲ ತಮ್ಮ ವಾದ ಮಂಡಿಸಿದ್ದು ಒಂದು ದಾಖಲೆ. ನಾನಿ ಅವರ ದೃಷ್ಟಿಯಲ್ಲಿ ಸಂವಿಧಾನಕ್ಕೆ ಜೀವ ವಿತ್ತು. ಅದನ್ನು ಅನಾವಶ್ಯಕವಾಗಿ ತಿದ್ದುಪಡಿ ಮಾಡಿದರೆ ಅದರಿಂದ ರಕ್ತಸ್ರಾವವಾಗುತ್ತದೆ ಎಂಬಷ್ಟು ನಂಬಿಕೆ ಉಳ್ಳವರಾಗಿದ್ದರು.
ಈ ಪ್ರಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲ ಪತ್ರಿಕೆಗಳಲ್ಲಿ ಶ್ರೀ ಕೇಶವಾನಂದ ಭಾರತೀ ಎಂಬ ಹೆಸರು ಪ್ರಸ್ತಾವವಾಗುತ್ತಿ ದ್ದುದನ್ನು ಗಮನಿಸಿದ ಶ್ರೀ ಕೇಶವಾನಂದ ಅವರಿಗೆ ಆಶ್ಚರ್ಯ ವಾಗುತ್ತಿತ್ತು. ಅವರ ಪರ ವಾದ ಮಾಡುತ್ತಿದ್ದ ನಾನಿ ಫಾಲ್ಕಿವಾಲ ಅವರನ್ನು ಭೇಟಿ ಮಾಡಲೇ ಇಲ್ಲ. ಬಹುಶ: ಒಬ್ಬ ವಕೀಲ ಮತ್ತು ಕಕ್ಷಿದಾರ ಪರಸ್ಪರ ಭೇಟಿಯಾಗದ ಪ್ರಕರಣ ಇದೇ ಮೊದಲು ಹಾಗೂ ಕೊನೆಯದೆಂದು ಕಾಣುತ್ತದೆ. ಕೇರಳದ ಅಧಿನಿಯಮದ ಪರಿಣಾಮ ಅಪಾರವಾದ ಭೂಸಂಪತ್ತನ್ನು ಕಳೆದುಕೊಂಡಿದ್ದರೂ ಅವರು ಅದಕ್ಕೆ ಯಾರನ್ನೂ ದ್ವೇಶಿಸಲಿಲ್ಲ. ಅವರು ಸೆಪ್ಟಂಬರ್ 2020ರಲ್ಲಿ ವಿಧಿವಶವಾದರು.
ಪ್ರಕರಣದ ತೀರ್ಪಿಗಿಂತ ತೀರ್ಪು ಹೊರಬಂದ ಅನಂತರದ ಘಟನೆಗಳು ಮತ್ತಷ್ಟು ಕುತೂಹಲಕಾರಿ. ತೀರ್ಪು ನೀಡಿದ ದಿನವೇ ಭಾರತದ ಮುಖ್ಯ ನ್ಯಾಯಾಧೀಶ ನಾ| ಸಿಕ್ರಿ ನಿವೃತ್ತಿ ಹೊಂದಿದರು. ಸರಕಾರದ ವಿರುದ್ದ ತೀರ್ಪು ನೀಡಿದ್ದ ಮೂವರು ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಅವಗಣಿಸಿ ಸರಕಾರದ ಪರ ತೀರ್ಪು ನೀಡಿದ್ದ ಕಿರಿಯ ನ್ಯಾಯಾಧೀಶರಾದ ಜಸ್ಟೀಸ್ ಎ.ಎನ್.ರೇ ಅವರನ್ನು ಭಾರತದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು. ಈ ಬೆಳವಣಿಗೆಯಿಂದ ಬೇಸರಗೊಂಡ ಮೂವರು ನ್ಯಾಯಾಧೀಶರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಿರಿಯ ನ್ಯಾಯಾಧೀಶರನ್ನು ಅವಗಣಿಸಿದ್ದನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ತೀವ್ರವಾಗಿ ಖಂಡಿಸಿತು. ಅರ್ಜಿದಾರರ ಪರ ವಕೀಲರಾಗಿದ್ದ ಎಮ್.ಸಿ.ಚಾಗ್ಲಾ ಅವರು ಇದು ನಮ್ಮ ಬದುಕಿನಲ್ಲಿ ಒಂದು ಕರಾಳ ದಿನ. ನಾವು ಯಾವ ತತ್ವಗಳಿಗೆ ಹೋರಾಡುತ್ತಿದ್ದೇವೋ ಅದು ಕಣ್ಮರೆಯಾ ಗುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಫಾಲ್ಕಿವಾಲ ಅವರು ಬಾಂಬೆ ಹೈಕೋರ್ಟ್ ಬಾರ್ ಅಸೋಸಿ ಯೇಶನ್ ಉದ್ದೇಶಿಸಿ ಭಾಷಣ ಮಾಡುತ್ತಾ, ಬಾಂಬೆ ಹೈಕೋರ್ಟ್ ಅನ್ನು ಅಂದು ಮುಚ್ಚಬೇಕೆಂದು ಕೇಳಿಕೊಂಡರು. ದೇಶದ ಇತರೆ ಕೊರ್ಟ್‌ಗಳಲ್ಲಿ ಸಹ ಪ್ರತಿಭಟನೆಗಳು ನಡೆದವು. ಜಸ್ಟೀಸ್ ಎ.ಎನ್.ರೇ ಅವರ ನೇಮಕದ ಬಗ್ಗೆ ನಿವೃತ್ತ ಮುಖ್ಯ ನ್ಯಾಯಾಧೀಶ ಹಿದಾಯುತ್ತುಲ್ಲಾ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಸರಕಾರ ಮಾತ್ರ ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.
ಎರಡು ವರ್ಷಗಳ ಅನಂತರ 1975ರಲ್ಲಿ ಸರಕಾರ ಹದಿ ಮೂರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವನ್ನು ರಚಿಸಿ ಕೇಶವಾನಂದ ಪ್ರಕರಣದ ತೀರ್ಪನ್ನು ಬದಲಿಸಲು ಪ್ರಯ ತ್ನಿಸಿದರೂ ಅದು ಫಲಕಾರಿಯಾಗಲಿಲ್ಲ. ಆ ಹೊತ್ತಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಸರಕಾರ ಸಂವಿಧಾನ 42ನೇ ತಿದ್ದುಪಡಿ ಅಧಿನಿಯಮ ಹೊರಡಿಸಿತು. ಈ ತಿದ್ದುಪಡಿ ಮುಖಾಂತರ ಕೇಶವಾನಂದ ಪ್ರಕರಣದ ತೀರ್ಪನ್ನು ಅಕೃತಗೊಳಿ ಸಲು ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾ ರವನ್ನು ಸರಕಾರ ಪಡೆದುಕೊಂಡಿತು. ಅಲ್ಲದೆ ಸಂವಿಧಾನಕ್ಕೆ ಮಾಡುವ ಯಾವುದೇ ತಿದ್ದುಪಡಿಯನ್ನು ನ್ಯಾಯಾಲಯದಲ್ಲಿ ಪುನರ್ ವಿಮರ್ಶೆಗೆ ಒಳಪಡಿಸಲು ಅವಕಾಶವಿರಲಿಲ್ಲ. ಮೂರು ವರ್ಷದ ಬಳಿಕ 1980ರಲ್ಲಿ ಮತ್ತೂಂದು ಮಹತ್ವದ ಪ್ರಕರಣ ಮಿನರ್ವ ಮಿಲ್ಸ್‌ದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ವೈ.ವಿ. ಚಂದ್ರಚೂಡ್ ಸಂವಿಧಾನ 42ನೇ ತಿದ್ದುಪಡಿ ಅಧಿನಿಯಮ ಅಸಿಂಧು ಎಂದು ತೀರ್ಮಾನಿಸಿದರು. ಇದರ ಫಲವಾಗಿ ಸಂವಿ ಧಾನ ಮೂಲ ಸಂರಚನೆಗೆ ಧಕ್ಕೆ ತರುವ ಯಾವುದೆ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿಲ್ಲ ಎಂಬ ತತ್ವ ಮತ್ತೂಮ್ಮೆ ಸ್ಥಾಪಿತವಾಯಿತು.
~ ವೈ.ಜಿ.ಮುರಳೀಧರನ್