ಪಣಜಿ: ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಏಪ್ರಿಲ್ 24 ರಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಜಗತ್ಪ್ರಸಿದ್ಧ ಪ್ರವಾಸಿ ತಾಣ ಗೋವಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಗೋವಾದಲ್ಲಿ ತಮ್ಮ ಕುಟುಂಬದೊಂದಿಗೆ ಈ ವಿಶೇಷ ದಿನವನ್ನು ಆನಂದಿಸಲು ಸಚಿನ್ ಕುಟುಂಬ ಸಮೇತರಾಗಿ ಗೋವಾಕ್ಕೆ ಆಗಮಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿದ್ದಾರೆ, ಅದಕ್ಕಾಗಿ ಅವರು ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಗಳು ಸಾರಾ ತೆಂಡೂಲ್ಕರ್ ಜೊತೆಗೆ ಗೋವಾಕ್ಕೆ ಆಗಮಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಸೋಮವಾರ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಮುಂಬೈನಿಂದ ಗೋವಾಕ್ಕೆ ಆಗಮಿಸಿದ್ದಾರೆ. ಮುಂಬೈನಲ್ಲಿ ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ರೋಚಕ ಪಂದ್ಯದ ಸಂದರ್ಭದಲ್ಲಿ ಅಲ್ಲಿ ಸಚಿನ್ ತೆಂಡುಲ್ಕರ್ ಉಪಸ್ಥಿತರಿದ್ದು ತಂಡದೊಂದಿದೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಲ್ಲಿ ತೆಂಡೂಲ್ಕರ್ ಕ್ರೀಡಾಂಗಣದಲ್ಲಿ ದೊಡ್ಡ ಕೇಕ್ ಕತ್ತರಿಸಿದರು. ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.
ಇದನ್ನೂ ಓದಿ: IPL 2023 ಹಸಿರು ಜೆರ್ಸಿಯಲ್ಲಿ ಆರ್ ಸಿಬಿ ಸಾಧನೆ ಹೇಗಿದೆ? ಗೆಲುವಿಗಿಂತ ಸೋಲು ಜಾಸ್ತಿ
ಸಚಿನ್ ತೆಂಡೂಲ್ಕರ್ ಅವರ ಕೆಲವು ನಿಕಟ ಸಂಬಂಧಿಗಳು ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಗೋವಾಕ್ಕೆ ಆಗಮಿಸಿದ್ದಾರೆ. ತೆಂಡೂಲ್ಕರ್ ಕೂಡ ಬಿಗಿ ಭದ್ರತೆಯಲ್ಲಿ ಗೋವಾಕ್ಕೆ ಆಗಮಿಸಿದ್ದಾರೆ. ಸೋಮವಾರ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್ ಮುಂಬೈನ ದಾದರ್ ನಿರ್ಮಲ್ ನಸಿರ್ಂಗ್ ಹೋಮ್‍ನಲ್ಲಿ ಜನಿಸಿದ್ದರು. ಸಚಿನ್ ತೆಂಡೂಲ್ಕರ್ ಅವರ ತಂದೆ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ಅವರ ಹೆಸರನ್ನು ಇಟ್ಟಿದ್ದರು. ಸಚಿನ್ ತೆಂಡೂಲ್ಕರ್‍ಗೆ ಇಬ್ಬರು ಅಣ್ಣಂದಿರು ಮತ್ತು ಒಬ್ಬ ಸಹೋದರಿ ಇದ್ದಾರೆ.
ಸಚಿನ್ ತೆಂಡೂಲ್ಕರ್ 1989 ರಲ್ಲಿ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. 2013 ರಲ್ಲಿ ಅವರು ತಮ್ಮ ಕೊನೆಯ ಪಂದ್ಯವನ್ನು ಆಡಿದರು. ತಮ್ಮ 24 ವರ್ಷಗಳ ಕ್ರಿಕೇಟ್ ವೃತ್ತಿಜೀವನದಲ್ಲಿ, ಸಚಿನ್ ತೆಂಡೂಲ್ಕರ್ ಇನ್ನೂ ಮುರಿಯಲು ಕಷ್ಟಕರವಾದ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 200 ಟೆಸ್ಟ್ (15921 ರನ್), 463 ಏಕದಿನ (18426 ರನ್) ಮತ್ತು 1 ಟ್ವೆಂಟಿ-20 ಪಂದ್ಯವನ್ನು ಆಡಿದ್ದಾರೆ. ಅವರು 100 ಶತಕಗಳ ದಾಖಲೆಯನ್ನು ಮಾಡಿದ್ದಾರೆ.