ಜಿಸ್ಸಂ ಒ.ಎಸ್. ಮತ್ತು ಜೋಸ್ನಾ ಚಾಕೋ ಗಾಯಗೊಂಡವರು. ಅಡ್ಯಾರ್‌ನ ಹಾಸ್ಟೆಲ್‌ನಿಂದ ಬಿಕರ್ನಕಟ್ಟೆಯಲ್ಲಿರುವ ಕಾಲೇಜಿಗೆ ತೆರಳುವ ಉದ್ದೇಶದಿಂದ ಬೆಳಗ್ಗೆ 8.40ರ ವೇಳೆಗೆ ರಾ.ಹೆ.73ರ ದ್ವಿಪಥ ರಸ್ತೆಯ ಮಂಗಳೂರು-ಬಿಸಿ ರೋಡ್ ರಸ್ತೆಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ, ಬಳಿಕ ವಿದ್ಯಾರ್ಥಿನಿಯರಿಗೆ ಢಿಕ್ಕಿಯಾಗಿದೆ. ಇದರಿಂದ ಜಿಸ್ಸಂ ಒ.ಎಸ್. ಅವರ ಬಲಕಾಲು, ತೊಡೆಗೆ ಮತ್ತು ಮಣಿಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಬಲ ಕೈತಟ್ಟಿನಲ್ಲಿ ತರಚಿದ ಗಾಯವಾಗಿದೆ. ಜೋಸ್ನಾ ಚಾಕೋ ಅವರಿಗೆ ಬಲಕಾಲು, ಕೋಲುಕಾಲು, ಪಾದಕ್ಕೆ ತರಚಿದ ಗಾಯ, ಎಡಕಾಲು ಮತ್ತು ಪಾದದ ಬೆರಳಿಗೆ, ಬಲಕೈಗೆ, ತಲೆಯ ಬಲಬದಿಗೆ ತರಚಿದ ಗಾಯವಾಗಿದೆ.
Advertisement
ಸ್ಥಳೀಯರು ಅಪಘಾತಪಡಿಸಿದ ಚಾಲಕ, ಗಾಯಾಳುಗಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತಕ್ಕಿಡಾದ ದ್ವಿಚಕ್ರ ವಾಹನ ಸವಾರ ಶಿವ ಪ್ರಸಾದ್ ಅವರು ಕೂಡ ಅದೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಕಾರು ಚಾಲಕ ಚಾಲಕ ಮೊಹಮ್ಮದ್ ಆಶ್ರಫ್ ಅವರ ದುಡುಕುತನ ಹಾಗೂ ನಿರ್ಲಕ್ಷéದ ಚಾಲನೆಯೇ ಘಟನೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.