Advertisement
ಘಟನೆಯಲ್ಲಿ 6 ಬಿಎಸ್‌ಎಫ್ ಯೋಧರು ಸಹಿತ 11 ಜನರು ಪ್ರಾಣ ತೆತ್ತಿತ್ತು, ಕೆಲವು ಮನೆಗಳಿಗೂ ಹಾನಿಯಾಗಿದೆ. ದಾಳಿಗೆ 120 ಎಂಎಂ ಗಾತ್ರದ ಮಾರಣಾಂತಿಕ ಬಾಂಬ್‌ಗಳನ್ನು ಬಳಸಲಾಗಿತ್ತು. ಕೃಷ್ಣಗಾಟಿ, ಕೇರ್ನಿ, ಮಂಕೋಟೆ, ಗುಲ್ಪುರ್, ದೇಗ್ವಾರ್ ಶಹಾಪುರ್ ಮತ್ತು ಪೂಂಚ್ ಪ್ರಾಂತ್ಯಗಳಲ್ಲಿ ದಾಳಿ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ ಶುರುವಾದ ಮೊದಲ ಹಂತದ ದಾಳಿಯಲ್ಲಿ ಮೂವರು ನಾಗರಿಕರು ಹಾಗೂ ಒಬ್ಬ ಯೋಧ ಗಾಯಗೊಂಡಿದ್ದರು.
ರಾಂಬನ್ ಜಿಲ್ಲೆಯ ಬನಿಹಾಲ್ ಬಳಿಯ ಜವಾಹರ್ ಸುರಂಗ ಮಾರ್ಗದ ಬಳಿ ಶನಿವಾರ ಬೆಳಗ್ಗೆ ಸಿಆರ್‌ಪಿಎಫ್ ಭದ್ರತಾ ವಾಹನಗಳ ಬಳಿ ಸ್ಫೋಟವಾಗಿದ್ದ ಕಾರಿನ ಚಾಲಕ ಹಾಗೂ ಶಂಕಿತ ಉಗ್ರನನ್ನು ಬನಿಹಾಲ್ ನಗರದಲ್ಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಕಾವಲು ವಾಹನಗಳು ಜವಾಹಾರ್ ಸುರಂಗ ಮಾರ್ಗವನ್ನು ದಾಟಿ ಬಂದ ಕೆಲವೇ ಕ್ಷಣಗಳಲ್ಲಿ ಸನಿಹದಲ್ಲೇ ಸಾಗುತ್ತಿದ್ದ ಸ್ಯಾಂಟ್ರೋ ಕಾರು ಸ್ಫೋಟಗೊಂಡಿತ್ತು. ಇದರಲ್ಲಿದ್ದ ಎರಡು ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಒಂದು ಸ್ಫೋಟಗೊಂಡಿತ್ತು. ಘಟನೆಯ ನಂತರ, ಚಾಲಕ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ. ಜತೆಗೆ, ಕಾರಿನಲ್ಲಿ ಮತ್ತೂಂದು ಸಿಲಿಂಡರ್, ಪೆಟ್ರೋಲ್ ತುಂಬಿದ ಕ್ಯಾನು, ಜಿಲೆಟಿನ್ ಕಡ್ಡಿಗಳು, ಇತರ ಸ್ಫೋಟಕ ಸಾಮಗ್ರಿಗಳು ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಯ ಪತ್ರವೊಂದು ಸಿಕ್ಕಿದ್ದು ಅದರಿಂದ ಆತ ಆ ಸಂಘಟನೆಯ ವ್ಯಕ್ತಿಯೆಂಬುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.