Advertisement

ಇನ್ನೂ ಮುಗಿಯದ ಮುಸುಕಿನ ಗುದ್ದಾಟ

11:04 PM Nov 22, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್‌ ಹಿರಿಯ ನಾಯಕರು ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಹೀಗಾಗಿ ಎರಡೂ ಬಣ ಗಳ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿ ಎಲ್ಲರೂ ಒಗ್ಗಟ್ಟಾಗಿ ಹೋಗುವಂತೆ ಸೂಚಿಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಿರಿಯ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ.

Advertisement

ಉಪ ಚುನಾವಣೆಗೆ ಎಐಸಿಸಿಯಿಂದ ನೇಮಕಗೊಂಡಿರುವ ವೀಕ್ಷಕರೊಂ ದಿಗೆ ಅಧಿಕೃತ ಸಭೆ ನಡೆಸಲು ವೇಣುಗೋಪಾಲ್‌ ನಿರ್ಧರಿಸಿದ್ದು, ಅದರ ಹೊರತಾಗಿ ಪಕ್ಷದಲ್ಲಿ ಹಿರಿಯ ನಾಯಕರು ಹಾಗೂ ಸಿದ್ದರಾಮಯ್ಯ ನಡುವಿನ ತಿಕ್ಕಾಟ ಕಾಂಗ್ರೆಸ್‌ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು, ಅವರ ನಿರ್ಧಾರಕ್ಕೆ ಪರೋಕ್ಷವಾಗಿ ಹೈಕಮಾಂಡ್‌ ಕೂಡ ಬೆಂಬಲ ಸೂಚಿಸಿರುವುದು ಹಿರಿಯ ನಾಯಕರನ್ನು ಕೆರಳಿಸಿದೆ ಎನ್ನಲಾಗಿದೆ.

ರಾಜ್ಯದಲ್ಲಿನ ಬೆಳವಣಿ ಗೆಗಳ ಕುರಿತು ಪಕ್ಷದ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್‌ ಕೂಡ ಸಿದ್ದರಾಮಯ್ಯ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿ ದ್ದಾರೆಂಬ ಅನುಮಾನ ಪಕ್ಷದ ಹಿರಿಯ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಹದಿನೈದು ದಿನಗಳ ಹಿಂದೆ ವೇಣುಗೋಪಾಲ್‌ ಕರೆ ದಿದ್ದ ಸಭೆಯಿಂದ ಬಹುತೇಕ ಹಿರಿಯ ನಾಯಕರು ಅಂತರ ಕಾಯ್ದುಕೊಂಡಿದ್ದರು.

ಈ ಮೂಲಕ ಸಿದ್ದರಾಮಯ್ಯ ವಿಷಯ ದಲ್ಲಿ ಹೈಕಮಾಂಡ್‌ ನಡೆದುಕೊಳ್ಳು ತ್ತಿರುವ ರೀತಿಗೂ ಹಿರಿಯ ನಾಯಕರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಈಗ ಶನಿವಾರ ವೇಣುಗೋಪಾಲ್‌ ಮತ್ತೆ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಶಮನ ಮಾಡುವ ಪ್ರಯತ್ನ ನಡೆಸುವ ಸಾಧ್ಯತೆ ಇದ್ದು, ಅವರ ಕರೆಗೆ ಹಿರಿಯ ನಾಯಕರು ಸ್ಪಂದಿಸುತ್ತಾರೊ ಇಲ್ಲವೋ ಎನ್ನುವುದೂ ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next