Advertisement
1916 ಶಾಲೆ ಆರಂಭಮದ್ರಾಸ್ ಸರಕಾರದಿಂದ ಹೈಯರ್ ಪ್ರೈಮರಿ ಶಾಲೆಯಾಗಿ ಅನುಮತಿ
1928ರಲ್ಲಿ ಪೂರ್ಣ ಪ್ರಮಾಣದ ಹೈಯರ್ ಪ್ರೈಮರಿ ಶಾಲೆಯಾಗಿ ಆಗಿನ ಮದ್ರಾಸ್ ಸರಕಾರದಿಂದ ಅನುಮತಿ ಸಿಕ್ಕಿತು. ಮೊದಲ ಮುಖ್ಯೋಪಾಧ್ಯಾಯರಾಗಿದ್ದವರು ಎರ್ಮಾಳು ತಿಮ್ಮಪ್ಪಯ್ಯ. ಈ ಶಾಲೆಯಲ್ಲಿರುವ 1929ರ ಅನಂತರದ ದಾಖಲೆ ಪ್ರಕಾರ 8,448 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿತಿದ್ದಾರೆ. 1976ರಲ್ಲಿ ವಜ್ರಮಹೋತ್ಸವ ಕಂಡ ಈ ಶಾಲೆಯು 2011ರಲ್ಲಿ ಹೊಸ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 2016ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು.
Related Articles
Advertisement
ಎಂಬಂತರ ದಶಕದಲ್ಲಿ ಹದಿನೆಂಟು ಶಿಕ್ಷಕರು, ಎಂಟುನೂರ ಐವತ್ತು ವಿದ್ಯಾರ್ಥಿಗಳು, ಹದಿನೇಳು ವಿಭಾಗಗಳು ಇದ್ದುದು ಈ ಶಾಲೆಯ ವೈಭವವನ್ನು ಸಾರಿಹೇಳುತ್ತವೆ. ಶುಕ್ರವಾರದ ಭಜನೆ ನಿರಂತರ. ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಇವತ್ತಿಗೂ ಮಿಂಚುತ್ತಿದ್ದಾರೆ. ಪ್ರಸ್ತುತ ಸರೋಜಿನಿ ಅವರು ಮುಖ್ಯ ಶಿಕ್ಷಕಿಯಾಗಿದ್ದಾರೆ.
ಈ ಶಾಲೆ ಇದ್ದ ಸರಸ್ವತೀ ಸದನದಲ್ಲಿ ಕಟೀಲು ದೇವಸ್ಥಾನದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರಿಂದ ಇಲ್ಲಿಗೆ ಬಂದ ಸಾಹಿತಿಗಳು, ಸಂಗೀತಗಾರರು, ರಾಜಕಾರಣಿಗಳು ಹೀಗೆ ಗಣ್ಯರ ಸಂಖ್ಯೆ ನೂರಾರು.
ವಿವಿಧ ಸೌಲಭ್ಯಗಳುಶಾಲೆಯಲ್ಲಿ ಕ್ರೀಡೆ, ಕಂಪ್ಯೂಟರ್, ನ್ಪೋಕನ್ ಇಂಗ್ಲಿಷ್, ಸಂಗೀತ, ಚಿತ್ರಕಲೆ ತರಗತಿಗಳಿವೆ. ಸಂಸ್ಥೆಗೆ ದೇಗುಲದಿಂದ ನಿರಂತರ ಸಹಕಾರದ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ಸಮವಸ್ತ್ರಗಳು ದಾನಿಗಳಿಂದ ಸಿಗುತ್ತವೆ. ಅಕ್ಷರದಾಸೋಹ ವ್ಯವಸ್ಥೆ ಜಾರಿಗೆ ಬರುವ ಮೊದಲೇ 1983ರಿಂದಲೇ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಈ ಶಾಲೆಯಲ್ಲಿ ದೇಗುಲದಿಂದ ಆರಂಭಗೊಂಡಿತ್ತು. ಶಿಕ್ಷಣಕ್ಕೆ ಪೂರಕವಾಗಿ ಶಾಲೆಯಲ್ಲಿ ಯಕ್ಷಗಾನ, ಜತೆಗೆ ಪಠ್ಯಕ್ಕೆ ಪೂರಕವಾಗಿ ಯೋಗ, ಭಜನೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯಲ್ಲಿ ಅನುಕೂಲ ಮಾಡಲಾಗುತ್ತಿದೆ.
-ವಾಸುದೇವ ಆಸ್ರಣ್ಣ, ಶಾಲೆಯ ಹಳೆವಿದ್ಯಾರ್ಥಿ ಶಾಲೆ ಬೆಳೆಯ ಬೇಕಾದರೆ ಅದಕ್ಕೆ ಕಟೀಲು ದೇವಸ್ಥಾನ, ಹಳೆವಿದ್ಯಾರ್ಥಿಗಳು ಉತ್ತಮ ಸಹಕಾರ ಪ್ರೋತ್ಸಾಹ ನೀಡಿದರ ಫಲವಾಗಿ ಹೊಸ ಕಟ್ಟಡದಲ್ಲಿ ಮೈದಳೆದು ನಿಂತಿದೆ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ಶಾಲೆಯ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಸರೋಜಿನಿ, ಮುಖ್ಯ ಶಿಕ್ಷಕರು - ರಘುನಾಥ ಕಾಮತ್ ಕೆಂಚನಕೆರೆ