Advertisement

ವರ್ಷಾಂತ್ಯಕ್ಕೆ 11 ಲಕ್ಷ ರೈತರಿಗೆಋಣ ಮುಕ್ತ ಪ್ರಮಾಣ ಪತ್ರ

12:21 AM Jun 14, 2019 | Sriram |

ಬೆಂಗಳೂರು: ಈ ವರ್ಷಾಂತ್ಯಕ್ಕೆ ರಾಜ್ಯದ 11 ಲಕ್ಷ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆಗೆ ಕೇಂದ್ರ ಸರ್ಕಾರವನ್ನು ನೆಚ್ಚಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳ ಎಲ್ಲ ಸಾಲವನ್ನೂ ರಾಜ್ಯ ಸರ್ಕಾರವೇ ಮನ್ನಾ ಮಾಡುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆ, ಆಟದ ಮೈದಾನ, ಸ್ಮಶಾನ ಈ ಸೌಲಭ್ಯಗಳಿಗೆ ಜಾಗ ನೀಡುವ ಸಂಬಂಧ ಮುಂದಿನ 10 ವರ್ಷದವರೆಗೆ ನಿಗದಿ ಆಗಬೇಕು. ಗ್ರಾಮಗಳಲ್ಲಿ ಕಸ ವಿಲೇವಾರಿ ಈಗಿನಿಂದಲೇ ವೈಜ್ಞಾನಿಕವಾಗಿ ಆಗಬೇಕು. ಈ ನಿಟ್ಟಿನಲ್ಲಿ, ಘನ ತ್ಯಾಜ್ಯ ವಿಲೇವಾರಿಗೆ ನಿಗದಿತ ಗುರಿ ಹಾಕಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.

ರೈತರ ಸಹಭಾಗಿತ್ವದಲ್ಲಿ ಕೆರೆಗಳಲ್ಲಿ ಹೂಳು ಎತ್ತಲು ಜಲಾಮೃತ ಯೋಜನೆ ತಂದಿದ್ದು, ಇದಕ್ಕೆ 100 ಕೋಟಿ ರೂ. ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಈ ಹಣ ತಾಲೂಕುವಾರು ಹಂಚಿಕೆ ಮಾಡಲಾಗಿದೆ.

ಸರ್ಕಾರಿ ಆಸ್ತಿ ಆವರಣಗಳಾದ ಸರಕಾರಿ ಜಾಗದಲ್ಲಿ ಕಡ್ಡಾಯವಾಗಿ ಗಿಡ ನೆಡಲು ಸೂಚನೆ, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕರಿಗೆ ಗುಣಮಟ್ಟದ ತರಬೇತಿ ನಿಡಲು ಕ್ರಮ, ಸಮಾಜ ಕಲ್ಯಾಣ ಇಲಾಖೆಯಲ್ಲಿ 1,860 ವಿದ್ಯಾರ್ಥಿ ನಿಲಯವಿದ್ದು, ಈ ಪೈಕಿ 1525 ವಿದ್ಯಾರ್ಥಿ ನಿಲಯಕ್ಕೆ ಕಟ್ಟಡ ಇದೆ. 345 ಬಾಕಿ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ, ಈ ಎಲ್ಲ ಕಟ್ಟಡವನ್ನು ಎ ವರ್ಗಕ್ಕೆ ತರಲು ಹಣ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.

Advertisement

ಗಂಗಾ ಕಲ್ಯಾಣ ಯೋಜನೆಯಲ್ಲಿ 11,200 ಪ್ರಕರಣಗಳು ವಿದ್ಯುತ್‌ ಸಂಪರ್ಕಕ್ಕೆ ಬಾಕಿ ಉಳಿದಿದ್ದು, ಜೂ.20 ರೊಳಗೆ ಎಲ್ಲಾ ಜಿಲ್ಲಾಧಿಕಾರಿಗಳು ಎಸ್ಕಾಂ ಜೊತೆಯಲ್ಲಿ ರಿಜಿಸ್ಟ್ರಿ ಮಾಡಲು ಸೂಚನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಜನಾಂಗ, ಹಿಂದುಳಿದ ಜನಾಂಗದ 55 ಲಕ್ಷ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಸೀಡಿಂಗ್‌ ಮಾಡಲು ಜೂನ್‌ ಅಂತ್ಯದ ವರೆಗೆ ಸಮಯ ನೀಡಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಿ, ಗುಣಮಟ್ಟ, ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಬೇಕು. ಅನಧಿಕೃತವಾಗಿ ಹಾಸ್ಟೆಲ್ನಲ್ಲಿ ಇರುವವರ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ದಾವಣಗೆರೆಯ ಅತ್ತಿಗೆರೆ ಗ್ರಾಮದ ಖಾಸಗಿ ಜಮೀನಿನಲ್ಲಿ ಬಡ ಕುಟುಂಬಗಳು ವಾಸವಿದೆ. ತಮ್ಮ ಸಮಸ್ಯೆ ಬಗ್ಗೆ 12 ವರ್ಷದಿಂದ ಮನವಿ ಮಾಡಿದ್ದರು. ಈಗ ಮತ್ತೆ ಮನವಿ ಮಾಡಿದ್ದಾರೆ. ಹೀಗಾಗಿ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದು ಅಥವಾ ಪರ್ಯಾಯ ಜಮೀನು ಗುರುತಿಸಿ ಅವರ ವಾಸಕ್ಕೆ ಅನುವು ಮಾಡಿಕೊಡುವಂತೆ ಆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸೂಚನೆಗಳು
•ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ ರೈತರಿಗೆ 6 ಸಾವಿರ ಕೊಡುವ ಯೋಜನೆಯಡಿ 11 ಲಕ್ಷ ರೈತರನ್ನು ನೋಂದಾಯಿಸಲಾಗಿದೆ. ಜೂನ್‌ ಅಂತ್ಯದ ಒಳಗೆ ಎಲ್ಲ ರೈತರ ನೋಂದಣಿ ಆಗಬೇಕು. 56 ಲಕ್ಷ ರೈತರು ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ ತರಲು ಸೂಚನೆ.
•ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಾಗಿದೆ. ಈ ವರ್ಷ 940 , ಕಳೆದ ವರ್ಷ 1500 ವರದಿಯಾಗಿತ್ತು. ಈ ವರ್ಷದಲ್ಲಿ 44 ಪ್ರಕರಣ ಪರಿಹಾರ ಬಾಕಿ ಇದ್ದು, ಉಳಿಕೆ ಪ್ರಕರಣಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ. ಇವರ ಮಕ್ಕಳಿಗೆ ಶಿಕ್ಷಣ ನೀಡಲು ಸೂಚನೆ. •ಕೈಗಾರಿಕಾ ಕ್ಷೇತ್ರದಲ್ಲಿ ಕಾಂಪಿಟ್ ವಿತ್‌ ಚೀನಾ ಯೋಜನೆಯಡಿ ಬಳ್ಳಾರಿ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಯ ಕ್ಲಸ್ಟರ್‌ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಸಿಂಗಲ್ ವಿಂಡೋ ಅಡಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next