Advertisement

ಉದ್ಯೋಗ ಜಾಹೀರಾತು ನಂಬಿದ ಮಹಿಳೆಗೆ 2.25 ಲಕ್ಷ ರೂ. ವಂಚನೆ

05:18 PM Oct 13, 2022 | Team Udayavani |

ಬೆಂಗಳೂರು: ಕಂಪನಿಯ ಜಾಹೀರಾತು ಕಂಡು ಕೆಲಸಕ್ಕಾಗಿ ಅಪರಿಚಿತ ನಂಬರ್‌ ಗೆ ಸಂಪರ್ಕಿಸಿದ ಮಹಿಳೆಯೊಬ್ಬರಿಗೆ ಸೈಬರ್‌ ಕಳ್ಳರು 2.25 ಲಕ್ಷ ರೂ. ವಂಚಿಸಿದ್ದಾರೆ.

Advertisement

ಈ ಸಂಬಂಧ ಆರ್‌.ಟಿ.ನಗರ ನಿವಾಸಿ ರೈಸಾ ಸುಲ್ತಾನ್‌ ಎಂಬುವರು ಉತ್ತರ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೂಗಲ್‌ ನಲ್ಲಿ ಬೇಕರಿ ಬ್ರ್ಯಾಂಡ್‌ ಮೊಗಿಂಗ್‌ ಫ‌ುಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಜಾಹೀರಾತು ಗಮನಿಸಿದ ರೈಸಾ, ಅದರಲ್ಲಿದ್ದ ಕಂಪನಿಯ ಮೊಬೈಲ್‌ ನಂಬರ್‌ ಸಂಪರ್ಕಿಸಿದ್ದರು. ಆಗ ಅಪರಿಚಿತ ವ್ಯಕ್ತಿ “ನಿಮ್ಮನ್ನು ಕಂಪನಿಗೆ ತೆಗೆದುಕೊಳ್ಳುತ್ತೇವೆ, ಅದಕ್ಕೆ ನೋಂದಾಯಿತ ಶುಲ್ಕ ಹಾಗೂ ಇತರೆ ವಿವಿಧ ಶುಲ್ಕ ನೀಡಬೇಕು’ ಎಂದು ನಂಬಿಸಿದ್ದಾರೆ.

ಇದನ್ನೂ ಓದಿ:ಟಿ20 ಅಭ್ಯಾಸ ಪಂದ್ಯ: ನಾಯಕ ರಾಹುಲ್ ಅರ್ಧಶತಕದ ಹೊರತಾಗಿಯೂ ಸೋತ ಟೀಂ ಇಂಡಿಯಾ

ಬಳಿಕೆ ಆಕೆಯಿಂದ ಹಂತ-ಹಂತವಾಗಿ 2.25 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next