Advertisement

ಕಾಣೆಯಾದ 76 ಮಕ್ಕಳನ್ನು ಪತ್ತೆಹಚ್ಚಿ ವಿಶೇಷ ಭಡ್ತಿ ಪಡೆದ ಮೊದಲ ಪೊಲೀಸ್ ಹೆಡ್ ಕಾನ್ಸ್ ಟೇಬಲ್

07:12 PM Nov 19, 2020 | Mithun PG |

ನವದೆಹಲಿ: ಕಾಣೆಯಾಗಿದ್ದ 76 ಮಕ್ಕಳನ್ನು ಪತ್ತೆಹಚ್ಚಿ ದೆಹಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸೀಮಾ ಡಾಕಾ ಔಟ್ ಆಫ್ ಟರ್ನ್ ಪ್ರಮೋಶನ್’ ಅಡಿಯಲ್ಲಿ ವಿಶೇಷ ಭಡ್ತಿ ಪಡೆದ ಮೊದಲ ಮಹಿಳಾ ಪೊಲೀಸ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಸೀಮಾ ಡಾಕಾ  ಸಮಯ್ ಪುರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸೀಮಾ, ಮಕ್ಕಳನ್ನು ಮತ್ತೆ ಪೋಷಕರೆಡೆಗೆ ಸೇರಿಸಿರುವುದು ನನಗೆ ಅತೀವ ಸಂತೋಷ ತಂದು ಕೊಟ್ಟಿದೆ. ನನ್ನ ಕೆಲಸವನ್ನು ಗುರುತಿಸಿ ಗೌರವಿಸಿರುವುದು, ಇನ್ನು ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದಿದ್ದಾರೆ.

ಅಗಸ್ಟ್ 7 ರಂದು ದೆಹಲಿ ಪೊಲೀಸ್ ಕಮಿಷನರ್ ಆಗಿರುವ ಎಸ್ ಎನ್ ಶ್ರೀವಾತ್ಸವ, ಯಾವುದೇ ಕಾನ್ಸ್ ಟೇಬಲ್ ಅಥವಾ ಹೆಡ್ ಕಾನ್ಸ್ ಟೇಬಲ್, ಕಾಣೆಯಾಗಿರುವ 14 ವರ್ಷದೊಳಗಿನ 50ಕ್ಕಿಂತ ಹೆಚ್ಚು ಮಕ್ಕಳನ್ನು 12 ತಿಂಗಳೊಳಗಾಗಿ ಪತ್ತೆಹಚ್ಚಿದರೇ, ಔಟ್ ಆಪ್ ಟರ್ನ್ ಪ್ರಮೋಶನ್ ಸೇರಿದಂತೆ ಹಲವು ವಿಶೇಷ ಸೌಲಭ್ಯ ನೀಡುವುದಾಗಿ ಪ್ರಕಟಿಸಿದ್ದರು.

ಸೀಮಾ ಢಾಕಾ ಇದೀಗ 76 ಕಾಣೆಯಾದ ಮಕ್ಕಳನ್ನು ಪತ್ತೆಗಚ್ಚಿದ್ದು, ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ಭಡ್ತಿ ಪಡೆದ ಮೊದಲ ಪೊಲೀಸ್ ಎನಿಸಿಕೊಂಡಿದ್ದಾರೆ. ಕಳೆದ ಎರಡೂವರೆ ತಿಂಗಳಿನಲ್ಲಿ ಸೀಮಾ, 76 ಮಕ್ಕಳನ್ನು ಪತ್ತೆಹಚ್ಚಿದ್ದು, ಇದರಲ್ಲಿ 56 ಮಕ್ಕಳು 14 ವರ್ಷಕ್ಕಿಂತ ಕೆಳಗಿನವರಾಗಿದ್ದರು.

ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ದೆಹಲಿ ಸರಕಾರದ ಹೊಸ ತಂತ್ರ! ಮಾಸ್ಕ್ ಧರಿಸದಿದ್ದರೆ 2000ರೂ ದಂಡ

Advertisement

ದೆಹಲಿ ಮಾತ್ರವಲ್ಲದೆ  ಪಶ್ಚಿಮ ಬಂಗಾಳ, ಪಂಜಾಬ್ ಸೇರಿದಂತೆ ಇತರ ರಾಜ್ಯಗಳಿಂದಲೂ ಹಲವಾರು ಮಕ್ಕಳನ್ನು ತಾನು ರಕ್ಷಿಸಿದ್ದೇನೆ ಎಂದು ಸೀಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ. 2018ರಲ್ಲಿ ಕಾಣೆಯಾಗಿದ್ದ 7 ವರ್ಷದ ಬಾಲಕನೊಬ್ಬನನ್ನು ತಾನು ಪಶ್ಚಿಮ ಬಂಗಾಳದಲ್ಲಿ ರಕ್ಷಿಸಿರುವುದು ಅತ್ಯಂತ ಪ್ರಮುಖ ಪ್ರಕರಣ ಎಂದು ಸೀಮಾ ಹೇಳಿಕೊಂಡಿದ್ದಾರೆ. 2018ರಲ್ಲಿ ಏಳು ವರ್ಷದ ಪುತ್ರ ಕಾಣೆಯಾದ ಬಗ್ಗೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಆದರೆ, ಅವರ ಮನೆ ವಿಳಾಸ, ಮೊಬೈಲ್ ನಂಬರ್ ಬದಲಾಗಿ ಆಕೆಯನ್ನು ಸಂಪರ್ಕಿಸುವುದು ತುಂಬಾ ತ್ರಾಸದಾಯಕವಾಗಿತ್ತು. ಹೇಗೋ ಪಶ್ಚಿಮ ಬಂಗಾಳದಲ್ಲಿ ಆಕೆಯ ಮಗನನ್ನು ಪತ್ತೆ ಮಾಡಿ, ಎರಡು ನದಿಗಳನ್ನು ದಾಟಿ ಆಕೆಯ ಊರು ತಲುಪಿದ್ದಾಗಿ ಢಾಕಾ ತಿಳಿಸಿದ್ದಾರೆ.

2006 ಜುಲೈ 3 ರಂದು ದೆಹಲಿ ಪೊಲೀಸ್ ಸೇವೆಗೆ ಸೇರಿದ ಢಾಕಾ, 2012ರವರೆಗೂ ಅಗ್ನೇಯ ದೆಹಲಿಯಲ್ಲಿಯೇ ಸೇವೆಗೆ ನಿಯೋಜನೆಗೊಂಡಿದ್ದರು.  2014ರಲ್ಲಿ ಬಡ್ತಿ ಪಡೆದು ಹೆಡ್ ಕಾನ್ಸ್ ಟೇಬಲ್ ಆಗಿದ್ದಾರೆ.

ಇದನ್ನೂ ಓದಿ: ‘ಉಲ್ಕಾಶಿಲೆ’ಯಾಗಿ ಬಂದ ಅದೃಷ್ಟ: ಒಂದೇ ದಿನದಲ್ಲಿ ಅಗರ್ಭ ಶ್ರೀಮಂತನಾದ ಈ ವ್ಯಕ್ತಿ !

Advertisement

Udayavani is now on Telegram. Click here to join our channel and stay updated with the latest news.

Next