Advertisement
ಸುಗ್ರೀವನ ಬಳಿಯಿದ್ದವರು ಅಂತಿಂಥವರಲ್ಲ. ಸ್ವತಃ ಶ್ರೀ ರಾಮಚಂದ್ರ. ಆದರೇನು ಮಾಡೋದು? ಶ್ರೀ ರಾಮನ ನೆರವೊಂದಿದ್ದರೆ ಜಗವನ್ನೇ ಜಯಿಸಬಹುದು ಎಂಬುದು ಜಗತ್‌ಸತ್ಯವಾದರೂ ಸುಗ್ರೀವನಿಗೆ ಮಾತ್ರ ತನ್ನ ಸಮಸ್ಯೆಯು ಈ ಶ್ರೀರಾಮನಿಂದ ಪರಿಹಾರ ಆಗಬಹುದೇ ಎಂಬ ಸಣ್ಣ ಸಂಶಯವಿತ್ತು! ಹಾಗಂತ ಶ್ರೀ ರಾಮ ಮಹಾ ಪರಾಕ್ರಮಿ ಎಂಬ ಸತ್ಯ ಸುಗ್ರೀವನಿಗೆ ಗೊತ್ತಿಲ್ಲವೇನೆಂದಲ್ಲ. ಅದಕ್ಕಾಗಿಯೇ ಹಿಂದೆ ಮುಂದೆ ಯೋಚಿಸದೆ ಆತನ ಸಖ್ಯ ಸಾಧಿಸಿದ್ದು. ಆದರೂ ಅಣ್ಣನಾದ ವಾಲಿಯನ್ನು ಸೋಲಿಸುವ ತಾಕತ್ತು ಈ ಶ್ರೀ ರಾಮನಿಗೆ ಇದೆಯೇ ಎಂಬ ಸಂಶಯ ಸುಗ್ರೀವನದ್ದು! ಕೇಳುವುದುಹೇಗೆ? ಆದರೂ ಮನಸು ತಡೆಯದೆ ಸುಗ್ರೀವ ಕೇಳುತ್ತಾನೆ “ಹೇ ಶ್ರೀ ರಾಮ ಅಂದು ವಾಲಿ ದುಂದುಭಿ ಎನ್ನುವ ರಾಕ್ಷಸನನ್ನು ಕೊಂದು ಅವನ ದೇಹವನ್ನು ತನ್ನ ಎಡದ ಕಾಲಲ್ಲಿ ಜಾಡಿಸಿ ಅದನ್ನು ಈ ಋಷ್ಯ ಶೃಂಗ ಪರ್ವತದ ಮೇಲೆ ಬೀಳುವಂತೆ ಮಾಡಿದ್ದಾನೆ. ಅಂತಹ ಸಾಹಸ ನಿನ್ನಿಂದ ಸಾಧ್ಯವಾಗುತ್ತಿತ್ತೇ’ ಎಂದು! ಶ್ರೀ ರಾಮ ಸ್ವತಃ ಭಗವಂತ.
Related Articles
Advertisement
ದೇವರನ್ನು ತೋರಿಸಲು ನಿಮ್ಮಿಂದ ಸಾಧ್ಯವಿಲ್ಲವಷ್ಟೇ. ಎಂದು ಮೂದಲಿಕೆಯ ನುಡಿಗಳನ್ನಾಡುತ್ತಾನೆ. ಅಂದರೆ ಸ್ವತಃ ಗುರುಗಳನ್ನೇ ನಂಬದ ಮನಃಸ್ಥಿತಿ ಆತನದ್ದು. ಶಾಂತ ಚಿತ್ತರಾದ ಪರಮಹಂಸರು ಆದೀತು ನಾಳೆ ಬೆಳಗ್ಗೆ ನದಿಯ ತಟ್ಟದಲ್ಲಿ ದೇವರ ದರ್ಶನ ಮಾಡಿಸುತ್ತೇನೆ. ಶುಚಿರ್ಭೂತನಾಗಿ ಬಾ ಎನ್ನುತ್ತಾರೆ. ಹರ್ಷಚಿತ್ತನಾದ ಶಿಷ್ಯ ಮರುದಿನ ಬೇಗನೆ ಬಂದು ಗುರುಗಳ ಜತೆ ದೇವರನ್ನು ಕಾಣುವ ಉತ್ಸಾಹದಿಂದ ನದಿ ಕಡೆಗೆ ತೆರಳುತ್ತಾನೆ. ಗುರುಗಳ ಅಪ್ಪಣೆಯಂತೆ ನದಿಯ ಸ್ನಾನಕ್ಕೆ ಇಳಿದು ಒಂದು ಬಾರಿ ಮುಳುಗಿ ಏಳುವಷ್ಟರಲ್ಲಿ ಅಲ್ಲೇ ಇದ್ದ ಗುರುಗಳು ಶಿಷ್ಯನ ತಲೆಯನ್ನು ಅಲ್ಲೇ ನೀರೊಳಗೆ ಒತ್ತಿ ಇಡುತ್ತಾರೆ.
ಉಸಿರುಗಟ್ಟಲು ಪ್ರಾರಂಭವಾದೊಡನೆ ಇದೇನು ಮಾಡುತ್ತಿದ್ದಾರೆ ರಾಮಕೃಷ್ಣರು ಬಹುಶಃ ನನ್ನನ್ನು ಕೊಂದೇ ಬಿಡುತ್ತಾರೇನೋ ಎಂದು ಭಯಗೊಂಡು ತನ್ನೆಲ್ಲ ಶಕ್ತಿಯನ್ನು ಒಟ್ಟು ಸೇರಿಸಿ ಗುರುಗಳು ಎನ್ನುವುದನ್ನೂ ಲೆಕ್ಕಿಸದೇ ಬಲವಾಗಿ ಅವರನ್ನು ತಳ್ಳಿ ನೀರಿನಿಂದ ಹೊರಗೆ ಬರುತ್ತಾನೆ! ಹೊರಗೆ ಬಂದು ನೋಡಿದರೆ ರಾಮಕೃಷ್ಣರು ಹಸನ್ಮುಖೀಯಾಗಿ ನಿಂತು ಕೊಂಡು ನೋಡಿದ್ಯಾ? ಕೇವಲ ಶರೀರದಲ್ಲಿರುವ ನಿನ್ನ ಉಸಿರಾಟವನ್ನು ಉಳಿಸಿಕೊಳ್ಳಲು ನೀನು ಇಷ್ಟೊಂದು ಶ್ರಮ ಪಟ್ಟೆ ಎಂದಾದರೆ ಇನ್ನು ಉಸಿರೊಳಗೆ ಉಸಿರಾಗಿರುವ ಆ ಭಗವಂತನನ್ನು ಕಾಣಲು ನೀನು ಇನ್ನೆಷ್ಟು ಶ್ರಮ ಪಡಬೇಕಾದೀತು ಎಂಬ ಸತ್ಯವನ್ನು ಶಿಷ್ಯನಿಗೆ ಗೋಚರಿಸುತ್ತಾರೆ! ಶಿಷ್ಯನಿಗೆ ಗುರುಗಳ ಮಾತು ಅರ್ಥವಾಯಿತು. ಗುರುಗಳ ಮೇಲಣ ನಂಬಿಕೆ ದೃಢವಾಯಿತು.
ಸತ್ಯದ ಪಥ ಗೋಚರಿಸಿತು!ನಂಬಿಕೆ ಬಲವಾಗಿದ್ದರಷ್ಟೇ ಯಶಸ್ಸು ಸಾಧ್ಯ. ನನ್ನ ಯಶಸ್ಸು ನನ್ನಿಂದ ಸಾಧ್ಯ ಎನ್ನುವ ನಂಬಿಕೆಯೊಂದು ಗಟ್ಟಿಯಾಗಿ ಬಿಟ್ಟರೆ ಅಲ್ಲಿಗೆ ನಮ್ಮ ಯಶಸ್ಸು ಅರ್ಧ ಕೈಗೂಡಿದಂತೆ. ಆವಾಗಲೇ ನಮ್ಮ ಅಂತರ್ಯದ ಸೂಕ್ಷ್ಮ ಮನಸ್ಸು ನಮ್ಮನ್ನು ಸಾಧಿಸುವ ನಿಟ್ಟಿನಲ್ಲಿ ಪರಿವರ್ತಿಸಲು ಪ್ರಾರಂಭಿಸುತ್ತದಯಂತೆ. ನಮಗರಿವೇ ಇಲ್ಲದ ಹಾಗೆ ನಮ್ಮ ಆತ್ಮ ವಿಶ್ವಾಸದ ಮಟ್ಟವನ್ನು ಮೇಲ್ಮಟ್ಟಕ್ಕೆ ಏರಿಸುತ್ತಿರುತ್ತದೆಯಂತೆ. ಏಕಲವ್ಯನನ್ನೇ ನೋಡಿ. ಕೇವಲ ತನ್ನ ನಂಬಿಕೆಯಿಂದಲೇ ದ್ರೋಣರ ಮೂರ್ತಿಯಲ್ಲಿ ಸ್ವತಃ ದ್ರೋಣರನ್ನು ಕಂಡು ಗುರುವಾಗಿ ಪಡೆದ. ಅರ್ಜುನನಿಗೂ ಮೀರಿದ ಬಿಲ್ವಿದ್ಯೆಯನ್ನು ಸ್ವ-ಅಭ್ಯಾಸದಿಂದಲೇ ತನ್ನದಾಗಿಸಿಕೊಂಡ. ಅವನ ಅಂತರ್ಯದೊಳಗೆ ದ್ರೋಣರೇ ನನಗೆ ಕಲಿಸುತ್ತಿದ್ದಾರೆ ಎನ್ನುವ ನಂಬಿಕೆ ಅಷ್ಟೊಂದು ಬಲವಾಗಿತ್ತು. ಇವೆಲ್ಲವುಗಳು ಬರೇ ಕಥೆಗಳಲ್ಲ. ನಮ್ಮ ಜೀವನಕ್ಕೆ ತೋರಿಸಿರುವ ಸತ್ಯದ ಸಂದೇಶಗಳು. ಸುಗ್ರೀವನ ಸಮಸ್ಯೆ ಹಾಗೆ ನೋಡಿದರೆ ಪರಿಹರಿಸಲು ಸಾಧ್ಯವೇ ಇಲ್ಲದ್ದು ಅಲ್ಲವೇ? ಯಾಕೆಂದರೆ ಆತನ ಹೆಂಡತಿ ಹಾಗೂ ಸಾಮ್ರಾಜ್ಯವನ್ನು ಕಸಿದುಕೊಂಡು ತನ್ನಲ್ಲಿ ಇರಿಸಿಕೊಂಡಿದ್ದು ಅಂತಿಂಥವನಲ್ಲ. ಮಹಾಪರಾಕ್ರಮಿಯಾದ ಅಣ್ಣ ವಾಲಿ. ಆತನನ್ನು ಸೋಲಿಸುವುದು ಮುಕ್ಕಣ್ಣನಿಗೂ ಅಸಾಧ್ಯ ಎನ್ನವ ಸಂದರ್ಭವದು. ಅದು ಆತನ ವರ ಬಲದ ತಾಕತ್ತು. ವಾಲಿಯ ಮುಂದೆ ನಿಂತು ಅದ್ಯಾರು ಯುದ್ಧ ಮಾಡಿದರೂ ವಿರೋಧಿಯ ಅರ್ಧ ಶಕ್ತಿಯು ವಾಲಿಗೆ ರವಾನೆ ಆಗುವ ವಿಶೇಷ ವರವದು! ಆದರೆ ವಾಲಿಯನ್ನು ಸೋಲಿಸಿ ತನ್ನ ಪ್ರಪಂಚವನ್ನು ಪಡೆಯಲೇ ಬೇಕು ಎಂಬ ದೃಢ ವಿಶ್ವಾಸದಿಂದ ಶ್ರೀ ರಾಮನನ್ನು ನಂಬಿದ, ಆರಾಧಿಸಿದ. ರಾಮ ನಾಮದ ಜಪಗೈದ. ನಂಬಿಕೆ ಹುಸಿಯಾಗಲಿಲ್ಲ ನೋಡಿ. ರಾಮ ವಾಲಿಯನ್ನು ಸೋಲಿಸಿ ಸುಗ್ರೀವನಿಗೆ ಮರಳಿ ಜೀವನ ನೀಡಿದ. ಇಲ್ಲವೆಂದಾದರೆ ಎಲ್ಲೋ ದಕ್ಷಿಣದ ಋಷ್ಯಮೂಕ ಎನ್ನುವ ಪರ್ವತದ ಮೇಲೆ ಅವಿತುಕೊಂಡು ಬದುಕುತ್ತಿದ್ದವನನ್ನು ಉತ್ತರ ದೇಶದ ರಾಜಕುಮಾರನೊಬ್ಬ ಅದ್ಯಾವುದೋ ಕಾರಣದಿಂದ ಕಾಡಾಡಿಯಾಗಿಕೊಂಡು ಬಂದು ಕಾಪಾಡಿದ್ದು ಎಂದರೆ ಸಣ್ಣ ವಿಷಯವೇನಲ್ಲ. ಕಷ್ಟವು ಹೇಗೆ ಬೇಕಾದರೂ ಕರಗಬಹುದು ಎನ್ನುವುದಕ್ಕೆ ಇದೊಂದು ನಿದರ್ಶನ ಕೂಡ ಹೌದು. ರಾಮ ಸೇತುವಿನ ನಿರ್ಮಾಣವಾಯಿತು. ಅಲ್ಲೂ ಕಾಪಾಡಿದ್ದು ನಂಬಿಕೆಯೇ. ಕಪಿ ಸೇನೆಯು ಎತ್ತಿ ತಂದು ಹಾಕುತ್ತಿದ್ದ ಬಂಡಕಲ್ಲುಗಳೆಲ್ಲ ನೀರ ಮೇಲಣ ಹೋಮದಂತೆ ಮುಳುಗಿ ಹೋಗುತ್ತಿತ್ತು. ಆವಾಗ ಮತ್ತೆ ಶ್ರೀ ರಾಮನನ್ನು ಬಲವಾಗಿ ನಂಬಿ ಆತನ ಹೆಸರನ್ನೇ ಬಂಡೆಗಳ ಮೇಲೆ ಭಕ್ತಿಯಿಂದ ಬರೆದು ಸಮುದ್ರಕ್ಕೆ ಹಾಕಲು ಬಂಡೆಯೇ ನೀರ ಮೇಲೆ ತೇಲಲು ಪ್ರಾರಂಭಗೊಂಡವಂತೆ! ಅಯ್ಯೋ ಇದು ವಿಚಿತ್ರವಲ್ಲವೇ ಎಂದು ಸ್ವತಃ ಶ್ರೀ ರಾಮ ಬಂಡೆಯನ್ನು ರಾಮ ನಾಮ ಬರೆಯದೆ ಸಮುದ್ರಕ್ಕೆ ಹಾಕಲು ಅದು ಮುಳುಗಿಯೇ ಹೋಯಿತಂತೆ! ಅಂದರೆ ದೈವದ ಮೇಲಿನ ನಂಬಿಕೆಯೇ ಕಪಿಸೇನೆಗೆ ತನ್ನ ಕಾರ್ಯವನ್ನು ನೆರವೇರಿಸಿದ್ದು. ಆದರೆ ಇಂದಿನ ಪ್ರಪಂಚವನ್ನು ಗಮನಿಸಿದ್ದೇ ಆದರೆ ಇಂದು ಪ್ರಪಂಚದಲ್ಲಿ ಕೊರತೆಯಾಗಿರುವುದು ನಂಬಿಕೆಯದ್ದೆ. ಯಾರೂ ಯಾರನ್ನೂ ನಂಬದ ಹಂತಕ್ಕೆ ಬಂದು ನಿಂತಿದೆ ಈ ಪ್ರಪಂಚ. ರಾಷ್ಟ್ರ ರಾಷ್ಟ್ರಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಅಷ್ಟೇ ಏಕೆ ಅಕ್ಕಪಕ್ಕದ ಮನೆಯವರ ನಡುವೆಯೂ ನಮ್ಮ ಬಾಳ್ವೆ ಅಪನಂಬಿಕೆಯದ್ದೇ! ಅಷ್ಟೊಂದು ಮಂದಿರ, ಮಸೀದಿ, ಚರ್ಚ್‌ಗಳು, ಅಷ್ಟೊಂದು ಶಾಲೆ ವಿಶ್ವವಿದ್ಯಾನಿಲಯಗಳು, ಸಂಘಗಳು, ಸಂಘಟನೆಗಳು ಇದ್ದರೂ ಮನುಷ್ಯನಿಗೆ ಮನುಷ್ಯತ್ವದ ಪಾಠವನ್ನು ಪರಸ್ಪರ ಪ್ರೀತಿ, ಸ್ನೇಹ, ನಂಬಿಕೆಗಳಿಂದ ಹೇಗೆ ಬದುಕಬೇಕೆಂಬುದನ್ನು ಬೋಧಿಸುತ್ತಲೇ ಇಲ್ಲವೇನೋ! ಪರಸ್ಪರ ನಂಬಿಕೆಗಳು ಜನರೊಳಗೆ ಬಲಿತಗೊಂಡರಷ್ಟೇ ಶಾಂತಿ ಸಹಬಾಳ್ವೆ ಸಾಧ್ಯ. ಲೋಕದ ಏಳ್ಗೆ ಸಾಧ್ಯ ಎಂಬುದು ಸತ್ಯ. ಆದರೇನು ಮಾಡೋದು. ಈ ಸತ್ಯವನ್ನು ಸಮಾಜ ನಂಬುತ್ತಲೇ ಇಲ್ಲ! -ಪ್ರಸಾದ್ ಕುಮಾರ್, ಮಾರ್ನಬೈಲ್