ಬೆಂಗಳೂರು: ಆಸ್ತಿಗಾಗಿ ಅನಾರೋಗ್ಯ ಕ್ಕೀಡಾಗಿರುವ ತಂದೆಯನ್ನು ಗೃಹ ಬಂಧ ನಲ್ಲಿರಿಸಿ ಆಸ್ತಿ ಕಬಳಿಸಿರುವ ಸಹೋದರಿ ಸೇರಿ ನಾಲ್ವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಉದ್ಯಮಿ ಭರತ್‌ರಾಜ್ ಎಂಬವರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ.
ಭರತ್‌ರಾಜ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆ ಪೊಲೀಸರು, ದೂರುದಾರನ ಸಹೋದರಿ ತೇಜವತಿ ವಿಜಯಲಕ್ಷ್ಮೀ, ಪ್ರೇಮಾ ಜವರೇಗೌಡ, ಚೌಡರೆಡ್ಡಿ, ಮೋಹನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರಿಸಿದ್ದಾರೆ.
ಭರತ್‌ರಾಜ್ ತಂದೆ ವೆಂಕಟಪ್ಪ ಲಕ್ಷ್ಮೀ, ನಾರಾಯಣ್ ನಾರಿಮನ್ ಶೆಲ್ಟರ್ ಪ್ರೈವೇಟ್ ಲಿಮಿ ಟೆಡ್ ಮತ್ತು ನವ ನಾರಿಮನ್ ಎಂಬ ಎರಡು ಕಂಪೆನಿ ಸ್ಥಾಪಿಸಿದ್ದು, ಅವುಗಳ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿ ದ್ದರು. ಈ ನಡುವೆ ವೆಂಕಟಪ್ಪ ಅನಾರೋಗ್ಯಕ್ಕೊಳಗಾಗಿದ್ದರು. ಆಗ ಕಂಪೆನಿ ರಕ್ಷಣೆ ಮಾಡಲು ಭರತ್‌ರಾಜ್‌ಗೆ ಎರಡು ಕಂಪನಿಗಳ ನಿರ್ದೇಶಕರಾಗಿ ನೇಮಿಸಿದ್ದರು. ಬಳಿಕ ಕಂಪೆನಿಗಳ ಹಣಕಾಸಿನ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದಾಗ ಕಂಪೆನಿಯ ಚೀಫ್ ಅಕೌಂಟೆಂಟ್ ಚೌಡರೆಡ್ಡಿ ಮತ್ತು ಆಡಿಟರ್ ಮೋಹನ್ 10 ರಿಂದ 15 ಕೋಟಿ ರೂ. ಅನ್ನು ಸುಳ್ಳು ಲೆಕ್ಕ ನೀಡಿ ಮೋಸ ಮಾಡಿದ್ದಾರೆ.
ಅಲ್ಲದೆ, ಸಹೋದರಿ ತೇಜವತಿ ವಿಜಯಲಕ್ಷ್ಮೀ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ತಂದೆಗೆ ಅನಾರೋಗ್ಯ ನೆಪವೊಡ್ಡಿ ತನ್ನ ಮನೆಯಲ್ಲಿ ಅವರನ್ನು ಅಕ್ರಮ ಗೃಹ ಬಂಧನದಲ್ಲಿಸಿಕೊಂಡು, ತನಗೂ ಭೇಟಿಗೆ ಅವಕಾಶ ನೀಡುತ್ತಿಲ್ಲ. ಅಲ್ಲದೆ, ತಂದೆ ವೆಂಕಟಪ್ಪ ಅವರ ಸಹಿಯನ್ನು ನಕಲಿ ಮಾಡಿ ಶೇರ್‌ಗಳನ್ನು ಸಹೋದರಿ ತೇಜವತಿ ವಿಜಯಲಕ್ಷ್ಮೀ ನಾರಾಯಣ್ ಹಾಗೂ ಪ್ರೇಮ ಜವರೇಗೌಡ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರು ತ್ತಾರೆ. ಜತೆಗೆ ಕಂಪನಿಗಳಿಂದ ನನ್ನನ್ನು ತೆಗೆದು ಹಾಕಿದ್ದಾರೆ ಎಂದು ಆರೋಪಿಸಿ ಭರತ್‌ರಾಜ್ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.