Advertisement
ಹಡಗಲಿ ಪುರಸಭೆಯಿಂದ ಈಚೆಗೆ ಹರಪನಹಳ್ಳಿ ರಸ್ತೆಯಲ್ಲಿರುವ ರಂಗಭಾರತಿ ಉದ್ಯಾನವನವನ್ನು ಅಭಿವೃದ್ಧಿ ಪಡಿಸಿದ್ದು, ಇದಕ್ಕಾಗಿ ಸರ್ಕಾರದ ಸುಮಾರು 47 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಈ ಮುಂಚಿತವಾಗಿ ರಂಗಭಾರತಿ ಉದ್ಯಾನವನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದವರು ಪಾರ್ಕ್ ನಿರ್ವಹಣೆ ಮಾಡುತ್ತಿದ್ದು, 2008ರಲ್ಲಿ ಇದನ್ನು ಪುರಸಭೆಗೆ ಹಸ್ತಾಂತರಿಸಿದರು. ಮೊದಲು ಅಂದಾಜು 2 ಲಕ್ಷ ರೂ.ಗಳ ವೆಚ್ಚದಲ್ಲಿ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಿದರೂ ಜನತೆಗೆ ಸಮರ್ಪಕವಾಗಿ ಬಳಕೆ ಆಗಿರಲಿಲ್ಲ. ಈಚೆಗೆ 14ನೇ ಹಣಕಾಸು ಹಾಗೂ ಪುರಸಭೆ ನಿಧಿ ಯಿಂದ ಒಟ್ಟು 47 ಲಕ್ಷ ರೂ.ಗಳಲ್ಲಿ ಪಾರ್ಕ್ ಅನ್ನು ಪುನಶ್ಚೇತನ ಗೊಳಿಸಿರುವುದರಿಂದ ಸಾರ್ವಜನಿಕರಿಗೆ ಇದರ ಸದುಪಯೋಗವಾಗಿದೆ.
Related Articles
Advertisement
ಸಮರ್ಪಕ ನಿರ್ವಹಣೆ: ಸಾರ್ವಜನಿಕ ಹಣದಲ್ಲಿ ನಿರ್ಮಾಣಗೊಂಡಿರುವ ಈ ರಂಗಭಾರತಿ ಪಾರ್ಕ್‌ಅನ್ನು ಉತ್ತಮ ನಿರ್ವಹಣೆ ಮಾಡುವ ಜವಾಬ್ದಾರಿ ಪುರಸಭೆ ಮೇಲಿದ್ದು, ಇದಕ್ಕಾಗಿ ಸಮಯ ನಿಗದಿ ಹಾಗೂ ಪಾರ್ಕಿನಲ್ಲಿರುವ ಯಾವುದೇ ಸಲಕರಣೆ ಹಾಳಾಗದಂತೆಹೆಚ್ಚಿನ ಮುತುವರ್ಜಿ ವಹಿಸುವುದು ಸಹ ಅಷ್ಟೇ ಮುಖ್ಯವಾಗಿದೆ. ಪಟ್ಟಣಕ್ಕೆ ಹತ್ತಿರವಿರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಾಗಿದೆ. ಮೊದಲಗಟ್ಟೆ ರಸ್ತೆಯಲ್ಲಿರುವ ಪಾರ್ಕಿನಂತೆ, ಸೋಗಿ ಹಾಗೂ ತಿಪ್ಪಾಪುರ ರಸ್ತೆಯಲ್ಲಿ ಪಾರ್ಕ್ ನಿರ್ಮಾಣ ಮಾಡಿದಲ್ಲಿ ಆ ಭಾಗದ ಜನತೆಗೂ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯ.
ವಿಶ್ವನಾಥ ಹಳ್ಳಿಗುಡಿ