Advertisement

ರಸ್ತೆಯಲ್ಲಿ ಬೆಳೆ ಹಾಕಿದ್ದ ರೈತರ ತರಾಟೆ

04:39 PM Jan 13, 2021 | Team Udayavani |

ಹರಪನಹಳ್ಳಿ: ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳು ಸಂಚರಿದಂತೆ ರಸ್ತೆ ತುಂಬಾ ತೊಗರಿ, ರಾಗಿ ಬೆಳೆ ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಿರುವ ರೈತರಿಗೆ ಸ್ಥಳೀಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧಿಧೀಶರಾದ ಮಂಜುಳಾ ಶಿವಪ್ಪ ಉಂಡಿ ತರಾಟೆ ತೆಗೆದುಕೊಂಡಿದ್ದಾರೆ.

Advertisement

ತಾಲೂಕಿನ ಹಲುವಾಗಲು ಪೊಲೀಸ್‌ ಠಾಣೆಗೆ ಭೇಟಿ ನೀಡಲು ಮಂಗಳವಾರ ತೆರಳುತ್ತಿದ್ದ ವೇಳೆ ದಾರಿ ಉದ್ದಕ್ಕೂ ಬೆಳೆ ಹಾಕಿರುವ ರೈತರಿಗೆ ತರಾಟೆ ತೆಗೆದುಕೊಂಡಿದ್ದಾರೆ. ನೀವು ಕಣದಲ್ಲಿ ಬೆಳಗಳನ್ನು ಹಾಕುವುದನ್ನು ಬಿಟ್ಟು ರಸ್ತೆಯಲ್ಲಿ ಹಾಕಿದ್ದಲ್ಲಿ ವಾನಹಗಳು ಹೇಗೆ ಸಂಚರಿಸಬೇಕು.

ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ತಿಪ್ಪರಲಾಗ ಹಾಕಿದ್ರೂ BJP ಅಧಿಕಾರಕ್ಕೆ ಬರುವುದಿಲ್ಲ: ಸಿದ್ದರಾಮಯ್ಯ

ಬೈಕ್‌ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮೊದಲು ರಸ್ತೆಯಿಂದ ಬೆಳೆಗಳನ್ನು ತೆಗೆಯುವಂತೆ ತಿಳಿಸಿರುವ ನ್ಯಾಯಾಧೀಶರು ರಸ್ತೆಯಿಂದ ಬೆಳೆ ತೆಗೆದ ನಂತರವೇ ಪ್ರಯಾಣ ಮಾಡಿದ್ದಾರೆ. ತಾಲೂಕಿನ ಹಲುವಾಗಲು, ಇಟ್ಟಿಗುಡಿ, ನೀಲಗುಂದ, ಕುಂಚೂರು, ಯರಬಾಳು, ಮತ್ತೂರು ಹಾಗೂ ಹರಪನಹಳ್ಳಿ ಭಾಗದ ಹುಲಿಕಟ್ಟಿ, ತೋಗರಿಕಟ್ಟೆ, ಹಾರಕನಾಳು ಸಣ್ಣ ತಾಂಡ ಭಾಗದ ರಸ್ತೆಯಲ್ಲಿ ಸಂಚರಿಸಿದ ನ್ಯಾಯಾಧಿಧೀಶರು ಕೆಲ ರೈತರಿಗೆ ಲಘು ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರು. ಅಲ್ಲದೇ 20 ಜನರ ರೈತರನ್ನು ಬುಧವಾರ ನ್ಯಾಯಲಯಕ್ಕೆ ಹಾಜರು ಪಡಿಸುವಂತೆ ಸೂಚನೆ ನೀಡಿದರು. ಪಿಎಸ್‌ಐ ಸಿ.ಪ್ರಕಾಶ್‌, ಶಿರಸ್ತೇದಾರ್‌ ಶೀಲಾ ಮತ್ತಿತರರು ಉಪಸ್ಥಿತರಿದರು.

Advertisement

Udayavani is now on Telegram. Click here to join our channel and stay updated with the latest news.

Next