Advertisement
ಕುಪ್ಪೆಪದವು ಸಮೀಪದ ಕಿಲೆಂಜಾರಿನ ಕೃಷಿಕ ರಾಮಣ್ಣ ನಾಯ್ಕ ಎಂಬುವವರು ತಮ್ಮ ಜಮೀನಿನಲ್ಲಿ ಎರಡು ಕೊಳವೆ ಬಾವಿ ತೋಡಿದ್ದರೂ ನೀರು ಸಿಕ್ಕಿರಲಿಲ್ಲ. ಆದರೆ ಪಕ್ಕದ ಜಮೀನಿನ ಹಳೆಯ ಕೆರೆಯನ್ನು ಪುನರುಜ್ಜೀವನಗೊಳಿಸಿದಾಗ ನೀರು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ.ಕಿಲೆಂಜಾರಿನ ಕೃಷಿಕ ರಾಮಣ್ಣ ನಾಯ್ಕ ಅವರು ಮಳೆ ಅಭಾವದಿಂದ ತೋಟದ ಫಸಲು ಸೊರಗಿದ್ದನ್ನು ಕಂಡು ತೋಟದಲ್ಲಿ ಕೊಳವೆ ಬಾವಿ ತೋಡಲು ಮುಂದಾಗಿದ್ದು. 17 ಅಡಿ ಆಳದಲ್ಲಿ ಕೊರೆ ಸಿದ ಬೋರ್‌ವೆಲ್‌ನಲ್ಲಿ 1 ಇಂಚಿನಷ್ಟೇ ನೀರು ಸಿಕ್ಕಿತ್ತಾದರೂ, ಬೇಸಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಅದು ಕೂಡ ಇಲ್ಲದಾಯಿತು. ಏತ ನ್ಮಧ್ಯೆ ಸುಮಾರು 400 ಅಡಿ ಆಳದ ಇನ್ನೊಂದು ಬೋರ್ ವೆಲ್ ಕೊರೆಸಿದರೆ ಇದ್ದಕ್ಕೆ ವೆಚ್ಚ ಮಾಡಿದ ಹಣ ಖರ್ಚಾಯಿತೇ ಆದರೂ ನೀರು ಸಿಗಲಿಲ್ಲ. ಈ ಎರಡೂ ಬೋರೆವೆಲ್‌ಗೆ ಒಂದು ಲಕ್ಷಕ್ಕೂ ಅಧಿಕ ರೂ. ಖರ್ಚು ಮಾಡಿದ್ದರೂ ನೀರು ಸಿಗದಿದ್ದಕ್ಕೆ ಬೇಸರವಾಗಿದ್ದರೂ ವಿನಃ ಅವಿರತ ಶ್ರಮ ಮರೆತಿರಲಿಲ್ಲ. ಈ ಸಮಯದಲ್ಲಿ ಅವರಿಗೆ ನೆನಪಾಗಿದ್ದೇ ಅರಮನೆಯ ಹಳೆಯ ಕೆರೆ.
ಜಮೀನು ಸಮೀಪದ ಅರಮನೆಯ ಕೆರೆಯೂ ಹೂಳು ತುಂಬಿ ಮುಚ್ಚಿ ಹೋಗಿತ್ತು. ಆ ಜಮೀನಿನ ಮಾಲಕರ ಅನುಮತಿ ಪಡೆದು ಆ ಕೆರೆಯ ಹೂಳನ್ನು ತೆಗೆದು ಸುಮಾರು 20 ಅಡಿ ಆಳ ತೋಡಿದಾಗ ನೀರು ದೊರೆತಿದೆ. ಈ ಕೆರೆಯ ಅಡಿಭಾಗ ಪಾದೆಕಲ್ಲಿನಿಂದ ಕೂಡಿದ್ದರೂ ಅಗತ್ಯಕ್ಕೆ ಬೇಕಾದಷ್ಟು ನೀರು ಸಿಗುತ್ತದೆ. ಕೃಷಿಕ ಮಾದರಿ
ಈಗ ಅದಕ್ಕೆ ಪಂಪ್ ಅಳವಡಿಸಿದ್ದು, ಕುಡಿ ಯಲು ಹಾಗೂ ತೋಟ, ಜಾನುವಾರುಗಳಿಗೆ ನೀರು ಸಾಕಾಗುತ್ತದೆ. ಸುಮಾರು ಒಂದು ಗಂಟೆ ಪಂಪ್ ಮಾಡುವಷ್ಟು ನೀರು ಸಿಗುತ್ತದೆ. ಪಾಳುಬಿದ್ದ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಅನೇಕ ಕೃಷಿಕರಿಗೆ ಕಿಲೆಂಜಾರಿನ ಕೃಷಿಕ ಮಾದರಿಯಾಗಿದ್ದಾರೆ.
Related Articles
ಲಕ್ಷಾಂತರ ಹಣ ಸಾಲ ಮಾಡಿ ಎರಡು ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರು ಸಿಗಲಿಲ್ಲ. ನಿತ್ಯ ಬಳಕೆಗೆ, ತೋಟ ಮತ್ತು ಜಾನುವಾರುಗಳಿಗೆ ಅಗತ್ಯವಾದ ನೀರು ಸಿಗುತ್ತಿರಲಿಲ್ಲ. ಹೂಳು ತುಂಬಿದ್ದ ಕೆರೆಯನ್ನು ಸರಿಪಡಿಸಿದಾಗ 20 ಅಡಿ ಆಳ ತೋಡಿದಾಗ ನೀರು ಸಿಕ್ಕಿದೆ. ನೀರಿ ಗಾಗಿ ನಾವು ಕೆರೆಗಳನ್ನು ಪುನರುಜ್ಜೀವನಗೊಳಿಸಿ, ಅಂತರ್ಜಲ ಮಟ್ಟ ಹೆಚ್ಚಾಗುವಂತೆ ನೋಡುವ ಅನಿವಾರ್ಯತೆ ಇದೆ.
– ರಾಮಣ್ಣ ನಾಯ್ಕ, ಕಿಲೆಂಜಾರಿನ ಕೃಷಿಕ
Advertisement