Advertisement

ಕೈಕೊಟ್ಟ ರೈಷ್ಮೆ ಕೃಷಿ ; ರೈತ ನೇಣಿಗೆ ಶರಣು

09:28 AM Oct 16, 2019 | mahesh |

ಬಾಗಲಕೋಟೆ: ಕೊಳವೆ ಬಾವಿ ಹಾಗೂ ರೇಷ್ಮೆ ಕೃಷಿ ಕೈಕೊಟ್ಟ ಹಿನ್ನೆಲೆಯಲ್ಲಿ ಬ್ಯಾಂಕಿನ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ತೋಟದ ವಸ್ತಿಯಲ್ಲಿ ಮಂಗಳವಾರ ಸಂಭವಿಸಿದೆ.

Advertisement

ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಬೊಮ್ಮಪ್ಪ (ಬಮ್ಮಪ್ಪ) ರಾಯಪ್ಪ ಬಗಲಿ (68) ಎಂದು ಗುರುತಿಸಾಲಗಿದೆ. ರೈತ ಬೊಮ್ಮಪ್ಪ, ಕಮತಗಿಯಲ್ಲಿ ಎರಡು ಎಕರೆ ಭೂಮಿ ಹೊಂದಿದ್ದು, ಹುನಗುಂದದ ಜ್ಯೋತಿ ಸಹಕಾರಿ ಸಂಘದಲ್ಲಿ 6 ಲಕ್ಷ ಸಾಲ ಮಾಡಿದ್ದ. ಸಾಲದ ಹಣದಲ್ಲಿ ಕೊಳವೆ ಬಾವಿ ಕೊರೆಸಿ, ರೇಷ್ಮೆ ಕೃಷಿ ಮಾಡಿದ್ದ. ಎಷ್ಟೇ ಕೊಳವೆ ಬಾವಿ ಕೊರೆಸಿದರೂ ನೀರು ಬಾರದ ಹಿನ್ನೆಲೆಯಲ್ಲಿ ರೇಷ್ಮೆ ಕೃಷಿಯೂ ಹಾನಿಯಾಗಿತ್ತು. ಇದರಿಂದ ಮನನೊಂದು, ಮಂಗಳವಾರ ತನ್ನ ತೋಟದ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next