Advertisement

Riyadh: 75 ವರ್ಷದ ಬಳಿಕ ಒಗ್ಗೂಡಿದ ಕುಟುಂಬ

01:14 AM Nov 22, 2023 | Team Udayavani |

ರಿಯಾದ್‌: ದೇಶ ವಿಭಜನೆ ಸಂದರ್ಭದಲ್ಲಿ ದೂರಾಗಿದ್ದ ಕುಟುಂಬವೊಂದು 75 ವರ್ಷಗಳ ಬಳಿಕ ಸೌದಿಯ ಮೆಕ್ಕಾದಲ್ಲಿ ಒಗ್ಗೂಡಿದೆ. ವಿಶೇಷವೆಂದರೆ ಪಾಕಿಸ್ಥಾನದ 105ರ ವಯಸ್ಸಿನ ಅಜ್ಜಿಯನ್ನು ಭಾರತ ಮೂಲದ ಅವರ ಸೊಸೆಯೊಂದಿಗೆ ಬೆಸೆದಿದ್ದು ಯುಟ್ಯೂಬ್‌! ವಿಭಜನೆ ವೇಳೆ ಹಾಜಿರಾ ಬೀಬಿ ಮತ್ತು ಮಜೀದಾ ಎಂಬ ಅಕ್ಕತಂಗಿಯರು ಬೇರ್ಪಟ್ಟಿದ್ದರು.

Advertisement

ಅಂದಿನಿಂದಲೂ ಅವರ ನಡುವೆ ಸಂಪರ್ಕವೇ ಇಲ್ಲದಂತಾಗಿತ್ತು. ಇತ್ತೀಚೆಗೆ ಹಾಜಿರಾ ಭಾರತದ ಪಂಜಾಬ್‌ನಲ್ಲಿರುವ ತನ್ನ ತಂಗಿ ಮಜೀದಾರ ಕುಟುಂಬವನ್ನು ಸಂಪರ್ಕಿಸಲು ಅನುವು ಮಾಡುವಂತೆ ಬೇಡಿಕೊಂಡಿದ್ದರು. ಇದನ್ನು ಪಾಕಿಸ್ಥಾನಿ ಯೂಟ್ಯೂಬರ್‌ ನಸೀರ್‌ ದಿಲ್ಲೋನ್‌ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದ್ದರು. ಬಳಿಕ ಮಜೀದಾ ಕುಟುಂಬದವರೇ ಆದ ಹನೀಫ‌ನ್‌ (ಹಜ್ರಾಬೀಬಿಯ ಸೊಸೆ) ಅವರಿಗೆ ಮೆಕ್ಕಾಗೆ ತೆರಳಲು ವ್ಯವಸ್ಥೆ ಕಲ್ಪಿಸಿ, ಹಾಜಿರಾ ಅವರನ್ನು ಅಲ್ಲಿಗೆ ತಲುಪಿಸಿ ಮತ್ತೆ ಒಂದಾಗಲು ಸಹಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next